ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರನೇ ವಿಕ್ರಮಾದಿತ್ಯನ ಕಾಲದ ಎರಡು ಶಾಸನಗಳು ಮಸ್ಕಿಯ ಹೊಲದಲ್ಲಿ ಪತ್ತೆ!

Last Updated 9 ಜುಲೈ 2021, 2:42 IST
ಅಕ್ಷರ ಗಾತ್ರ

ಮಸ್ಕಿ (ರಾಯಚೂರು ಜಿಲ್ಲೆ): ತಾಲ್ಲೂಕಿನ ದಿಗ್ಗನಾಯಕನ ಭಾವಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಹೊಲದಲ್ಲಿ ಕಪ್ಪು ಶಿಲೆಯ ಎರಡು ಶಾಸನಗಳು ಬುಧವಾರ ಪತ್ತೆಯಾಗಿವೆ.

ಗ್ರಾಮದ ಯಮನಗೌಡ ಎಂಬುವರಿಗೆ ಸೇರಿದ (ಸರ್ವೆ ನಂ-31/ಪೊ-01/02) ಹೊಲದಲ್ಲಿ ಕಪ್ಪುಶಿಲೆಯ ಶಾಸನವನ್ನು ಸಂಶೋಧಕ ಡಾ. ಚನ್ನಬಸಪ್ಪ ಮಲ್ಕಂದಿನ್ನಿ ಅವರು ಶೋಧಿಸಿದ್ದಾರೆ.

‘ಶಾಸನ ಇಪ್ಪತ್ತೆಂಟು ಸಾಲುಗಳಿಂದ ರಚಿತಗೊಂಡಿದೆ. ಶಾಸನದ ಮೇಲ್ಬಾಗದಲ್ಲಿ ಕಾಳಾಮುಖ ಮುನಿಯು ಈಶ್ವರ ಲಿಂಗಕ್ಕೆ ಪೂಜೆ ಸಲ್ಲಿಸುತ್ತಿದ್ದು, ಇದರ ಪಕ್ಕದಲ್ಲಿ ಹಸುವು ತನ್ನ ಕರುವಿಗೆ ಹಾಲುಣಿಸುತ್ತಿದೆ. ಇದು ದಾನ ಶಾಸನವಾಗಿದ್ದು ಕಲ್ಯಾಣಿ ಚಾಲುಕ್ಯ ವಂಶದ ಚಕ್ರವರ್ತಿ ಆರನೇ ವಿಕ್ರಮಾದಿತ್ಯನಿಗೆ ಸೇರುತ್ತದೆ‘ ಎಂದು ಡಾ. ಚನ್ನಬಸ್ಸಪ್ಪ ಮಲ್ಕಂದಿನ್ನಿ ಅಭಿಪ್ರಾಯಪಟ್ಟಿದ್ದಾರೆ.

‘ಶಾಸನವು ಕನ್ನಡಲಿಪಿಯಲ್ಲಿದ್ದು 26-12-1106 ಸೇರಿದ್ದು ಇರಬಹುದು. ಕಾಳಿಮರಸ ಎಂಬಾತನು ಕುಮಾರ ಆಹವಮಲ್ಲದೇವನ ಕೈಕೆಳಗೆ ದಂಡನಾಯಕನಾಗಿ ಕಾಟಿಂಗಲ್ (ಪ್ರಸ್ತುತ ಕಾಟಗಲ್ ಗ್ರಾಮ) ಭೂಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದರು‘ ಎಂದು ಅವರು ತಿಳಿಸಿದ್ದಾರೆ.

‘ಇನ್ನೊಂದು ಶಾಸನವು ಉಸ್ಕಿಹಾಳ ಗ್ರಾಮದ ಹಿರೇಹಳ್ಳದ ಗಂಗಮ್ಮ ಪಾದದ ಹತ್ತಿರದಲ್ಲಿದ್ದು ಇದು ಐದು ಸಾಲುಗಳಿಂದ ರಚಿತಗೊಂಡಿದ್ದು ಅಸ್ಪಷ್ಟವಾಗಿದೆ. ಅಕ್ಷರವಾಟಿಕೆಯ ಆಧಾರದಿಂದ ಇದನ್ನು ಕ್ರಿ.ಶ. 17- 18 ನೇ ಶತಮಾನಕ್ಕೆ ಸೇರಿಸಬಹುದು‘ ಎಂದು ಸಂಶೋಧಕ ಡಾ. ಚನ್ನಬಸ್ಸಪ್ಪ ಮಲ್ಕಂದಿನ್ನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT