ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಶಕ್ತಿನಗರ: ನಾಗಪಂಚಮಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಕ್ತಿನಗರ: ದೇವಸೂಗೂರು ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಶುಕ್ರವಾರ ಮಹಿಳೆಯರು ನಾಗರ ದೇವರ ಮೂರ್ತಿಗೆ ಭಕ್ತಿಯಿಂದ ಹಾಲೆರೆದು ನಾಗರ ಪಂಚಮಿ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಿದರು.

ಶಕ್ತಿನಗರ, ದೇವಸೂಗೂರು, ಯದ್ಲಾಪುರ, ಸಗಮಕುಂಟ, ಕಾಡ್ಲೂರು, ಜೇಗರಕಲ್, ಯರಗುಂಟ, ಇಬ್ರಾಹಿಂದೊಡ್ಡಿ, ಕೊರ್ತಕುಂದ, ಅರಷಣಿಗಿ, ಗುರ್ಜಾಪುರ, ಕರೇಕಲ್, ಗಂಜಳ್ಳಿ ಗ್ರಾಮಗಳು ಸೇರಿದಂತೆ ದೇವಸೂಗೂರು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿರುವ ನಾಗಮೂರ್ತಿಗೆ ಜನರು ಪೂಜೆ ಸಲ್ಲಿಸಿದರು.

ನಾಗ ಪಂಚಮಿ ನಿಮಿತ್ತ ಮನೆಯಲ್ಲಿ ಶೇಂಗಾ, ಪುಟಾಣಿ, ರವೆಯ ಉಂಡಿಗಳ ಜೊತೆಗೆ ಕಡಲೆ ಕಾಳು, ಜೋಳ ತಯಾರಿಸಿದ ಅರಳುಗಳ ನೈವೇದ್ಯ ಹಾಗೂ ಹತ್ತಿಯಿಂದ ತಯಾರಿಸಿದ ಬತ್ತಿ, ಕೊಬ್ಬರಿ ಬಟ್ಟಲಿನಲ್ಲಿ ಬೆಲ್ಲ ಮಿಶ್ರಣ ಮಾಡಿ ನಾಗದೇವರಿಗೆ, ಕುಟುಂಬದವರಿಗೆ, ಒಳ್ಳೆಯದು ಆಗಲಿ ಎಂದು ಅವ್ವನ ಪಾಲು, ಅಪ್ಪನ ಪಾಲು, ಅಣ್ಣ, ತಮ್ಮ, ಅಕ್ಕ, ತಂಗಿ ಕೊನೆಗೆ ಸರ್ವರ ಪಾಲು ಎಂದು ಹೇಳಿ, ನಾಗಮುರ್ತಿಗಳಿಗೆ ಹಾಲು ಎರೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು