ಮಾನ್ವಿ: ‘ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ, ಉತ್ಪಾದನೆ ಹೆಚ್ಚಳ ಮತ್ತು ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಕುರಿತು ಯುವ ಉದ್ಯಮಿಗಳಿಗೆ ತರಬೇತಿ ಅಗತ್ಯ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಸತೀಶ ಕುಮಾರ ಹೇಳಿದರು.

ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೆಎಸ್ಎಂಸಿಎ ಬೆಂಗಳೂರು ಮತ್ತು ಮಾನ್ವಿ ಕೈಗಾರಿಕಾ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರ್ಎಎಂಪಿ ಯೋಜನೆ ಅಡಿಯಲ್ಲಿ ಬಿಡಿಎಸ್ಎಂ ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯಾದಗಿರಿಯ ಬಸವಪ್ರಸಾದ್ ಬಿ. ಮಾತನಾಡಿ, ‘ನಮ್ಮಲ್ಲಿ ದೊರೆಯುವ ಸಂಪನ್ಮೂಲಗಳನ್ನು ಗುರುತಿಸಿಕೊಂಡಾಗ ಮಾತ್ರ ಕೈಗಾರಿಕೆಗಳನ್ನು ಸ್ಥಾಪಿಸಲು ಸಾಧ್ಯ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯಂತ ಈ ಭಾಗದ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ರಾಯಚೂರು ಜಿಲ್ಲೆಯಲ್ಲಿ ಶೇ 70ರಷ್ಟು ಜನರು ಕೃಷಿಯನ್ನು ಮುಖ್ಯ ವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಭತ್ತ, ಹತ್ತಿ ಮತ್ತು ಮೆಣಸಿನಕಾಯಿ ಬೆಳೆಯಲಾಗುತ್ತಿದ್ದರೂ ಕೂಡ ಈ ಭಾಗದಲ್ಲಿ ದೊರೆಯುವ ಕೃಷಿ ಉತ್ಪನ್ನಗಳನ್ನು ಬಳಸಿಕೊಂಡು ಮೌಲ್ಯವರ್ಧನೆಗೊಳಿಸುವ ಪೂರಕ ಕೈಗಾರಿಕೆಗಳು ಶೇ 15 ರಷ್ಟು ಮಾತ್ರ ಇವೆ. ಹತ್ತಿಯನ್ನು ಬಳಸಿಕೊಂಡು ಬಟ್ಟೆ ತಯಾರಿಸುವ ಕಾರ್ಖನೆಗಳನ್ನು ಪ್ರಾರಂಭಿಸಬಹುದು. ಭತ್ತದ ಹೊಟ್ಟಿನಿಂದ ಖಾದ್ಯ ತೈಲವನ್ನು ತಯಾರಿಸುವ ಕಾರ್ಖನೆಗಳನ್ನು ಪ್ರಾರಂಭಿಸುವುದಕ್ಕೆ ಅವಕಾಶವಿದೆ. ಕೃಷಿ ತ್ಯಾಜ್ಯ ಬಳಸಿಕೊಂಡು ಗೊಬ್ಬರ ತಯಾರಿಸಲು ಕೂಡ ಉತ್ತಮ ಅವಕಾಶವಿದೆ’ ಎಂದು ಹೇಳಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೂತನ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವವರಿಗೆ ಅಗತ್ಯ ಆರ್ಥಿಕ ನೆರವಿನ ಜೊತೆಗೆ ಸಹಾಯಧನವನ್ನು ಕೂಡ ನೀಡಲಾಗುತ್ತದೆ. ಯುವ ಸಮುದಾಯ ಸೂಕ್ಷ್ಮ, ಸಣ್ಣ, ಮಾಧ್ಯಮ, ಕೈಗಾರಿಕೆಗಳ ಸ್ಥಾಪನೆಗೆ ಮುಂದಾದಾಗ ಮಾತ್ರ ಈ ಭಾಗದ ಅಭಿವೃದ್ದಿ ಸಾಧ್ಯ’ ಎಂದು ತಿಳಿಸಿದರು.

ತರಬೇತುದಾರರಾದ ಎಸ್.ಡಿ. ಪ್ರಸಾದ ವೀರಪನೇನಿ ಉಪನ್ಯಾಸ ನೀಡಿದರು. ಉದ್ಯಮಿ ಅಲ್ದಾಳ್ ವೀರಭದ್ರಪ್ಪಗೌಡ , ಜಿಲ್ಲಾ ಕೈಗಾರಿಕಾ ಕೇಂದ್ರ ಸಹಾಯಕ ನಿರ್ದೇಶಕ ಲಕ್ಷ್ಮೀಕಾಂತ ಕುಲಕರ್ಣಿ, ಉಪ ನಿರ್ದೇಶಕ ರಾಜಕುಮಾರ ಪಾಟೀಲ, ಎಪಿಎಂಸಿ ರಂಗನಾಥ ದೇಸಾಯಿ, ಆರ್.ರಾಘವೇಂದ್ರಶೆಟ್ಟಿ, ಎಸ್ಬಿಐ ಕೃಷಿ ಶಾಖೆಯ ವ್ಯವಸ್ಥಾಪಕ ಯಲ್ಲಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.