ಮಂಗಳವಾರ, ಜುಲೈ 27, 2021
21 °C

ಪೊಲೀಸ್ ಕಾನ್‍ಸ್ಟೆಬಲ್ ಪತ್ನಿ ನೇಣಿಗೆ ಶರಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ಹೊಟ್ಟೆ ನೋವು ತಾಳಲಾರದೆ ಪೊಲೀಸ್ ಕಾನ್‍ಸ್ಟೆಬಲ್ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮಹಿಬೂಬಿಯಾ ಕಾಲೊನಿಯಲ್ಲಿರುವ ಪೊಲೀಸ್ ವಸತಿ ಗೃಹದಲ್ಲಿ ಶನಿವಾರ ಬೆಳಗಿನ ಜಾವ
ನಡೆದಿದೆ.

ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯ ಸೋಮನಾಥ ರಾಠೋಡ್ ಅವರ ಪತ್ನಿ ಕವಿತಾ (40) ಮೃತ ದುರ್ದೈವಿ. ಪತಿ ರಾತ್ರಿ ಸಮಯದಲ್ಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತರಾಗಿದ್ದರು. ಹೊಟ್ಟೆನೋವು ತಾಳಲಾರದೆ ಬೆಳಗಿನ 4.30ರ ಸುಮಾರಿಗೆ ಬೆಡ್ ರೂಮ್‍ನಲ್ಲಿರುವ ಫ್ಯಾನ್‍ಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರ ಈ ದೃಶ್ಯವನ್ನು ಇಬ್ಬರು ಪುತ್ರರು ನೋಡಿ ಗಾಬರಿಗೊಂಡು ವಿಷಯ ತಿಳಿಸಿದ್ದರಿಂದ ತಂದೆ ಸೋಮನಾಥ ಮನೆಗೆ ಬಂದಿದ್ದಾರೆ.

ಬೆಳಿಗ್ಗೆ 10 ಗಂಟೆ ಸುಮಾರಿಗೆ ಶಹರ ಪೊಲೀಸ್ ಠಾಣೆಯ ಸಬ್‍ಇನ್ಸ್‌ಪೆಕ್ಟರ್ ವಿಜಯಕೃಷ್ಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು. ನಂತರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತ ಮಹಿಳೆಯ ತಂದೆ ತಿಮ್ಮಣ್ಣ ನೀಡಿದ ದೂರಿನ ಮೇರೆಗೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು