ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳ ಆರ್ಥಿಕ ಸಂಕಷ್ಟ ಪರಿಹಾರಕ್ಕೆ ಒತ್ತಾಯ

ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ
Last Updated 9 ಡಿಸೆಂಬರ್ 2020, 13:18 IST
ಅಕ್ಷರ ಗಾತ್ರ

ರಾಯಚೂರು: ಕಳೆದ ವರ್ಷದ ವಿದ್ಯಾರ್ಥಿಗಳ ಬಾಕಿ ಶುಲ್ಕ ಪಾವತಿ, ಕೋವಿಡ್ ಪ್ಯಾಕೇಜ್ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಯಚೂರು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಒಕ್ಕೂಟದ ನೇತೃತ್ವದಲ್ಲಿ ಅತಿಥಿ ಶಿಕ್ಷಕರು, ಸಿಬ್ಬಂದಿ ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಬುಧವಾರ ಬೃಹತ್‌ ಧರಣಿ ನಡೆಸಿದರು.

ಮಾರ್ಚ್ 21ರಿಂದ ಇಂದಿನವರೆಗೆ ಶಿಕ್ಷಣ ಇಲಾಖೆಯ ಆದೇಶದನ್ವಯ ಶಾಲೆಗಳು ತೆರೆದಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸಹಕಾರ ನೀಡುತ್ತಾ ಬಂದಿದೆ. ಇದರಿಂದ ಅತಿಥಿ ಶಿಕ್ಷಕರು,ಸಿಬ್ಬಂದಿ ಆರ್ಥಿಕ ಸಮಸ್ಯೆಗೆ ಗುರಿಯಾಗಿದ್ದಾರೆ. ಶಾಸಗಿ ಶಾಲೆಗಳ ಅನೇಕ ವರ್ಷಗಳ ಸೇವೆಯನ್ನು ಪರಿಗಣಿಸದೇ ಕೋವಿಡ್ ಸಂಕಷ್ಠದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರನ್ನು, ಆಡಳಿತ ಮಂಡಳಿಯನ್ನು ತೀವ್ರ ತೊಂದರೆಗೆ ದೂಡಿದೆ. 2019–20 ನೇ ಸಾಲಿನ ಮಾರ್ಚ್ ನಲ್ಲಿ ಹಠಾತ್ ರಜೆ ನೀಡಿದ್ದರಿಂದ ಶಾಲೆಗಳ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಶೇ 30 ರಷ್ಟು ಶುಲ್ಕ ಬಾಕಿ ಉಳಿದುಕೊಂಡಿದೆ. 2020–21 ನೇ ಸಾಲಿನಲ್ಲಿ ಶಾಲೆಗಳು ಆರಂಭವಾಗದ ಕಾರಣ ದಾಖಲಾತಿ ಸ್ಥಗಿತಗೊಂಡಿದೆ. ಕೋವಿಡ್ ಕಾಲದಲ್ಲಿ ಆನ್ ಲೈನ್, ಆನ್ ಆಫ್ಲೈನ್ ಶಿಕ್ಷಣ ನೀಡುತ್ತಾ ಬಂದಿದೆ.

ಶಿಕ್ಷಣ ಇಲಾಖೆ ಸಚಿವರು ಹಾಗೂ ಸರ್ಕಾರ ಗೊಂದಲದ ಹೇಳಿಕೆ ನೀಡುತ್ತಿದೆ. ಖಾಸಗಿ ಶಾಲಾ ಕಾಲೇಜುಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಕಳೆದ ವರ್ಷದ ಶಾಲಾ ಕಾಲೇಜು ಶುಲ್ಕ ಪಾವತಿಸದ ಹಾಗೂ 2020–21 ನೇ ಸಾಲಿನ ದಾಖಲಾತಿ ಶುಲ್ಕ ಪಾವತಿಸದ ಪೋಷಕರಿಗೆ ಶೇ 50 ರಷ್ಟು ಶುಲ್ಕ ಪಾವತಿಸಲು ಆದೇಶ ನೀಡಬೇಕು ಎಂದರು.

ಸರ್ಕಾರ ಬಾಕಿ ಉಳಿಸಿಕೊಂಡಿರುವ 2019–20 ನೇ ಸಾಲಿನ ಮರುಭತ್ಯೆ ಹಣ ಡಿಸೆಂಬರ್ ಅಂತ್ಯದೊಳಗೆ ಕಡ್ಡಾಯವಾಗಿ ಪಾವತಿಸಬೇಕು. ಆರ್ಥಿಕ ಸಂಕಷ್ಠದ ಹಿನ್ನೆಲೆಯಲ್ಲಿ ಆಡಿಟ್ ರಿಪೋರ್ಟ್ನೋಡದೇ 2021ರ ಡಿಸೆಂಬರ್ ಅಂತ್ಯದೊಳಗೆ ಆರ್‌ಟಿಇ ಹಣ ಕಡ್ಡಾಯವಾಗಿ ಒಂದೇ ಕಂತಿನಲ್ಲಿ ಪಾವತಿಸಬೇಕು. ರಾಜ್ಯದಲ್ಲಿ ಅಧಿಕೃತವಾಗಿ ಶಾಲೆ ಆರಂಭಿಸುವವರೆಗೆ ಯಾವುದೇ ವಾಹನ ಸಾಲದ ಕಂತುಗಳು, ಇನ್ಸುರೆನ್ಸ್ ಪಾವತಿಗೆ ಸಂಪೂರ್ಣ ವಿನಾಯತಿ ನೀಡಬೇಕು. ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಾನ್ಯತೆನವೀಕರಣ ಅವಧಿಯನ್ನು ಕನಿಷ್ಠ 5 ವರ್ಷಗಳ ಅವಧಿಗೆ ಯಾವುದೇ ಷರತ್ತು ಇಲ್ಲದೇ ವಿಸ್ತರಿಸಿ ಆದೇಶ ನೀಡಬೇಕು. ಕಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯಾ , ಪ್ಯೂನ್ ಗಳಿಗೆ ಮಾಸಿಕ ಕನಿಷ್ಠ ₹3 ಸಾವಿರದಿಂದ ₹4 ಸಾವಿರ ಶಾಲೆ ಆರಂಭವಾಗುವವರೆಗೆ ಪರಿಹಾರ ನೀಡಬೇಕು.ಅರ್ಹ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಕೂಡಲೇ ಅನುದಾನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಜಿ, ರಝಾಕ್ ಉಸ್ತಾದ್, ಒಕ್ಕೂಟದ ಅಧ್ಯಕ್ಷ ಟಿ. ಬಸವರಾಜ,ಪ್ರಧಾನ ಕಾರ್ಯದರ್ಶಿ ಡಿ.ಕೆ ಮುರಳಿಧರ, ಜಿಲ್ಲಾ ಉಪಾಧ್ಯಕ್ಷ ಕೇಶವರೆಡ್ಡಿ, ವೈ. ನರೇಂದ್ರನಾಥ, ಚಂದ್ರಶೇಖರ ಬಲ್ಲಟಗಿ, ಚನ್ನಪ್ಪ, ಮಲ್ಲಿಕಾರ್ಜುನ, ಆದಯ್ಯ ದಳಪತಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT