ಮುದಗಲ್: ವಕ್ಫ್ ಮಸೂದೆ ತಿದ್ದುಪಡಿ ವಿರೋಧಿಸಿ ಎಸ್‌ಡಿಪಿಐ ರಾಯಚೂರು ಗ್ರಾಮೀಣ ಸಮಿತಿಯ ಮುಖಂಡರು ಪುರಸಭೆ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪಕ್ಷದ ರಾಯಚೂರು ಗ್ರಾಮೀಣ ಅಧ್ಯಕ್ಷ ಎಂ.ಡಿ ರಫೀ ಖಾಜಿ ಮಾತನಾಡಿ, ‘ಕೇಂದ್ರ ಸರ್ಕಾರದ ಕೋಮುವಾದಿ ಅಜೆಂಡಾವನ್ನು ಎಸ್‌ಡಿಪಿಐ ಬಲವಾಗಿ ಪ್ರತಿಭಟಿಸುತ್ತದೆ. ಸರ್ಕಾರ ಸಂವಿಧಾನ ವಿರೋಧಿ ಕ್ರಮದಿಂದ ಹಿಂದೆ ಸರಿಯಬೇಕು. ವಕ್ಫ್ ಆಸ್ತಿಯ ಉಳಿವಿಗಾಗಿ ಯಾವುದೇ ತ್ಯಾಗಕ್ಕೂ ನಾವು ಸಿದ್ಧ. ವಕ್ಫ್ ಆಸ್ತಿ ಮೇಲೆ ಯಾವ ಸರ್ಕಾರಕ್ಕೂ ಅಧಿಕಾರವಿಲ್ಲ. ಹೋರಾಟ ಮುಂದುವರೆಸುತ್ತೇವೆ’ ಎಂದರು.
‘ವಕ್ಫ್ ಆಸ್ತಿಗಳು ಸಾರ್ವಜನಿಕ ಆಸ್ತಿ ಅಲ್ಲ, ಮುಸ್ಲಿಂ ಸಮುದಾಯದ ಗಣ್ಯ ವ್ಯಕ್ತಿಗಳು ದಾನವಾಗಿ ನೀಡಿದ್ದು. ಸಮುದಾಯದ ಜನರು ಆರ್ಥಿಕವಾಗಿ ಸದೃಢವಾಗಲಿ ಎಂಬ ಸದುದ್ದೇಶದಿಂದ ವಕ್ಫ್ ಆಸ್ತಿಯಾಗಿ ಮಾರ್ಪಾಡಾಗಿದೆ’ ಎಂದರು.
ಮನವಿ ಪತ್ರವನ್ನು ಕಂದಾಯ ಇಲಾಖೆ ಅಧಿಕಾರಿ ದೀಪಿಕಾ ಸ್ವೀಕರಿಸಿದರು.