ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: 36 ಪಿಯು ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಜೇಷನ್‌

ಮಂತ್ರಾಲಯ, ಕೃಷ್ಣಾದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ಕೇಂದ್ರ
Last Updated 14 ಜೂನ್ 2020, 19:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಜೂನ್‌ 17 ರಂದು ಪದವಿ ಪೂರ್ವ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ವಿಷಯದ ಪರೀಕ್ಷೆ ನಡೆಸುವುದಕ್ಕಾಗಿ ಕೋವಿಡ್‌ ಸೋಂಕು ತಡೆಗೆ ಮುನ್ನಚ್ಚರಿಕೆ ಕ್ರಮಗಳ ಸಹಿತವಾಗಿ ಪೂರ್ವ ಸಿದ್ಧತೆ ಮಾಡಲಾಗಿದೆ. ಜೂನ್‌ 15 ರಂದು ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಜೇಷನ್‌ ನಡೆಯಲಿದೆ.

ಒಟ್ಟು 36 ಪರೀಕ್ಷಾ ಕೇಂದ್ರಗಳಲ್ಲಿ 19,397 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಹೊರಜಿಲ್ಲೆಗಳಲ್ಲಿ ಪಿಯುಸಿ ಓದುತ್ತಿದ್ದ ರಾಯಚೂರಿನ 1,303 ವಿದ್ಯಾರ್ಥಿಗಳು ಸ್ವಗ್ರಾಮಕ್ಕೆ ಬಂದಿದ್ದಾರೆ. ಅವರಿಗೂ ಸಮೀಪದ ಪರೀಕ್ಷಾ ಕೇಂದ್ರದಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ರಾಯಚೂರಿನ ಪಿಯು ಕಾಲೇಜಿನಲ್ಲಿ ಓದುವ ತೆಲಂಗಾಣ ರಾಜ್ಯದ ಕೃಷ್ಣಾದ ಎಂಟು ವಿದ್ಯಾರ್ಥಿಗಳು ಯರಮರಸ್‌ನ ಅಫ್ತಾಬ್‌ ಪಿಯು ಕಾಲೇಜಿನಲ್ಲಿ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲಿದ್ದಾರೆ. ಅದೇ ರೀತಿ ರಾಯಚೂರಿನಲ್ಲಿ ಓದುವ ಮಂತ್ರಾಲಯದ ಐದು ವಿದ್ಯಾರ್ಥಿಗಳು ನಗರದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ.

ಒಟ್ಟು 1,041 ಸಿಬ್ಬಂದಿಯು ಪರೀಕ್ಷೆ ನಡೆಸಲು ಅಣಿಯಾಗಿದ್ದಾರೆ. ಈ ಮೊದಲು ಪರೀಕ್ಷೆ ಬರೆಯುವುದಕ್ಕಾಗಿ 622 ಕೋಣೆಗಳು ಸಾಕಾಗುತ್ತಿತ್ತು. ಇದೀಗ 986 ಕೋಣೆಗಳನ್ನು ಪರೀಕ್ಷೆ ಬರೆಯುವವರಿಗಾಗಿ ಸಜ್ಜುಗೊಳಿಸಲಾಗಿದೆ. ಪ್ರತಿ ವಿದ್ಯಾರ್ಥಿ ಮಧ್ಯೆ ಮೂರು ಅಡಿ ಅಂತರ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ 200 ವಿದ್ಯಾರ್ಥಿಗಳಿಗೆ ಒಂದು ಥರ್ಮಲ್‌ ಸ್ಕ್ಯಾನರ್‌ ಇಡಲಾಗುವುದು. ಕೋವಿಡ್‌ ಸೋಂಕು ತಡೆಗಾಗಿ ಅನುಸರಿಸಬೇಕಾದ ಎಚ್ಚರಿಕೆಗಳನ್ನು ಪ್ರತಿಯೊಂದು ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಗಿದೆ.

ಪರೀಕ್ಷೆ ಬರೆಯುವುದಕ್ಕೆ ಬರುವ ಪ್ರತಿ ವಿದ್ಯಾರ್ಥಿಯು ಮಾಸ್ಕ್‌ ಧರಿಸಿರಬೇಕು. ಅಕಸ್ಮಾತ್‌, ಮಾಸ್ಕ್‌ ಬಿಟ್ಟುಬಂದಿದ್ದರೆ ಒದಗಿಸಲಾಗುವುದು. ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ತಪಾಸಣೆಗಾಗಿ ಇಬ್ಬರು ಸ್ಟಾಫ್‌ ನರ್ಸ್‌ಗಳು ಇರಲಿದ್ದಾರೆ. ಜಿಲ್ಲೆಯ 36 ಪರೀಕ್ಷಾ ಕೇಂದ್ರಗಳ ಪೈಕಿ ರಾಯಚೂರು ನಗರದಲ್ಲಿ 10, ಮಾನ್ವಿಯಲ್ಲಿ 4, ದೇವದುರ್ಗ 2, ಲಿಂಗಸುಗೂರಿನಲ್ಲಿ 8, ಸಿಂಧನೂರಿನಲ್ಲಿ 8, ಮಸ್ಕಿಯಲ್ಲಿ ಎರಡು, ಹಟ್ಟಿ ಮತ್ತು ಸಿರವಾರದಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT