ರಾಯಚೂರು: ‘ಕೃಷಿ ವಿಶ್ವವಿದ್ಯಾಲಯವು 2025-2026ನೇ ಸಾಲಿನಲ್ಲಿ 14000 ಕ್ವಿಂಟಲ್ ವಿವಿಧ ಬೆಳೆಗಳ ಗುಣಮಟ್ಟದ ಬೀಜೋತ್ಪಾದನೆ ಗುರಿ ಹೊಂದಿದೆ’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದ ವಿಶೇಷಾಧಿಕಾರಿ ಅರುಣಕುಮಾರ ಹೊಸಮನಿ ತಿಳಿಸಿದರು.

ತಾಲ್ಲೂಕಿನ ಕಸಬೆ ಕ್ಯಾಂಪ್ನ ಈ. ಶ್ರೀನಿವಾಸರಾವ್ ಹೊಲದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕ, ಐಸಿಎಆರ್-ರಾಷ್ಟ್ರೀಯ ಬೀಜ ಯೋಜನೆ ಹಾಗೂ ಕೃಷಿ ಇಲಾಖೆ ಸಹಯೋಗದೊಂದಿಗೆ ನಡೆದ ಸೂರ್ಯಕಾಂತಿ ಮತ್ತು ಸೋಯಾಅವರೆ ಬೀಜೋತ್ಪಾದನಾ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.

‘ರೈತರ ಸಹಭಾಗಿತ್ವದಲ್ಲಿ ಗುಣಮಟ್ಟದ ಬೀಜೋತ್ಪಾದನೆ ಮಾಡಿ ಕಲ್ಯಾಣ ಕರ್ನಾಟಕದ ರೈತರಿಗೆ ಗುಣಮಟ್ಟದ ಬೀಜಗಳನ್ನು ತಲುಪಿಸಲಾಗುತ್ತಿದೆ. ವಿಶ್ವವಿದ್ಯಾಲಯದಿಂದ ಅಭಿವೃದ್ಧಿ ಪಡಿಸಿದ ಸೂರ್ಯಕಾಂತಿ ಸಂಕರಣ ತಳಿಯ ಬೀಜೋತ್ಪಾದನೆ ಮಾಡಲಾಗುತ್ತಿದೆ‘ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷ ವಹಿಸಿದ್ದ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಅಮರೆಗೌಡ ಎ. ಮಾತನಾಡಿ, ‘ವಿಶ್ವವಿದ್ಯಾಲಯವು ಶಿಕ್ಷಣ, ಸಂಶೋಧನಾ ಮತ್ತು ವಿಸ್ತರಣಾ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ರಾಯಚೂರಿನಲ್ಲಿ ಅಭಿವೃದ್ಧಿಪಡಿಸಿದ ಹೊಸ ತಳಿಗಳು ಮತ್ತು ತಂತ್ರಜ್ಞಾನಗಳ ವಾಣಿಜ್ಯಕರಣಕ್ಕೆ ಇತರೆ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿಯ ಸದಸ್ಯ ಮಲ್ಲಿಕಾರ್ಜುನ ಡಿ. ಮಾತನಾಡಿದರು.

ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ನಯಿಮ್ ಹುಸೇನ್ ಮಾತನಾಡಿ, ‘ವಿವಿಧ ಬೆಳೆಗಳ ವಿಸ್ತೀರ್ಣ, ವಾತಾವರಣ ಮತ್ತು ಮಾರುಕಟ್ಟೆ ಅನುಗುಣವಾಗಿ ಬದಲಾಗುತ್ತಿರುವುದರಿಂದ ಅವುಗಳನ್ನು ರೈತರು ಗಮನಿಸಿ ಲಾಭದಾಯಕ ಬೆಳೆ ಬೆಳೆಯಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

ಹೈದರಾಬಾದ್ನ ಐಸಿಎಆರ್-ಭಾರತೀಯ ಎಣ್ಣೆಬೀಜ ಸಂಶೊಧನಾ ಸಂಸ್ಥೆಯ ವಿಜ್ಞಾನಿಗಳಾದ ಡಾ.ಜಿ.ಡಿ.ಸತೀಶ, ಡಾ.ಸುರೇಶ, ಡಾ.ವಿನುತಾ, ಡಾ.ಸೋಮಶೇಖರ ಹಾಗೂ ಕೃವಿವಿ., ರಾಯಚೂರಿನ ವಿಜ್ಞಾನಿಗಳಾದ ಡಾ.ವಿಕಾಸ ಕುಲಕರ್ಣಿ, ಡಾ.ಉಮೇಶ ಎಂ.ಆರ್, ಡಾ.ಪೂರ್ಣಿಮಾ, ಡಾ.ಮಲ್ಲರೆಡ್ಡಿ, ಕರ್ನಾಟಕ ರಾಜ್ಯ ಬೀಜ ನಿಗಮದ ಉಪ ವ್ಯವಸ್ಥಾಪಕ ಪ್ರಭು ತುರಾಯಿ,

ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಸಹಾಯಕ ನಿರ್ದೇಶಕ ರವಿಶಂಕರ ಉಪಸ್ಥಿತರಿದ್ದರು.

ಸಹಾಯಕ ಪ್ರಾಧ್ಯಾಪಕ ಉಮೇಶ ಹಿರೇಮಠ ಸ್ವಾಗತಿ ನಿರೂಪಣೆ ಮಾಡಿದರು. ವಿಜಯಕುಮಾರ ಕೆ, ವಂದಿಸಿದರು. 100 ಜನ ರೈತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.