ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಪ್ರೀತಿ ನಿರಾಕರಿಸಿದಕ್ಕೆ ವಿಷ ಸೇವಿಸಿ ಯುವಕ ಆತ್ಮಹತ್ಯೆ

ರಾಯಚೂರು ತಾಲ್ಲೂಕಿನ ಗಧಾರ್ ಗ್ರಾಮದ ಹನುಮೇಶ (21) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Published 15 ಜೂನ್ 2024, 7:26 IST
Last Updated 15 ಜೂನ್ 2024, 7:26 IST
ಅಕ್ಷರ ಗಾತ್ರ

ರಾಯಚೂರು: ತಾನು ಇಷ್ಟಪಟ್ಟ ಯುವತಿ ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ತಾಲ್ಲೂಕಿನ ಮಲಿಯಾಬಾದ್ ಅರಣ್ಯ ಪ್ರದೇಶದಲ್ಲಿ ಯುವಕನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಯಚೂರು ತಾಲ್ಲೂಕಿನ ಗಧಾರ್ ಗ್ರಾಮದ ಹನುಮೇಶ (21) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ ನವಯುಗ ಕಾಲೇಜಿನ ವಿದ್ಯಾರ್ಥಿಯಾದ ಹನುಮೇಶ ವಸತಿ ನಿಲಯದಲ್ಲಿ ವಾಸವಾಗಿದ್ದ. ತನ್ನದೇ ಗ್ರಾಮದ ಯುವತಿಗೆ ಮದುವೆಯಾಗುವಂತೆ ಆಗಾಗ ಪೀಡಿಸುತ್ತಿದ್ದ.

ಯುವತಿಯ ಮನೆಯವರು ಮೊದಲು ಪದವಿ ಪರೀಕ್ಷೆ ಪೂರ್ಣಗೊಳಿಸುವಂತೆ ಬುದ್ದಿವಾದ ಸಹ ಹೇಳಿದ್ದರು. ಯುವತಿ ಸಹ ಯವಕನೊಂದಿಗೆ ಅಂತರ ಕಾಯ್ದುಕೊಂಡಿದ್ದಳು. ಯುವತಿಯ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಂಡಿದ್ದ ಹನುಮೇಶ ಅರಣ್ಯಪ್ರದೇಶದಲ್ಲಿ ಕ್ರಿಮಿನಾಶ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT