ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವತಗಲ್: ವಿದ್ಯುತ್ ತಂತಿ ತಗುಲಿ ರೈತನ ಸಾವು

Published 3 ಏಪ್ರಿಲ್ 2024, 12:43 IST
Last Updated 3 ಏಪ್ರಿಲ್ 2024, 12:43 IST
ಅಕ್ಷರ ಗಾತ್ರ

ಜಾಲಹಳ್ಳಿ: ಕೊಳವೆ ಬಾವಿಗೆ ಅಳವಡಿಸಿದ ವಿದ್ಯುತ್ ತಂತಿ ತಗುಲಿ ದೇವತಗಲ್ ಗ್ರಾಮದ ರೈತ ಅಯ್ಯಪ್ಪ ನಾಯಕ (38) ಸಾವನ್ನಪ್ಪಿದ ಘಟನೆ ಜರುಗಿದೆ.

ತನ್ನ ಜಮೀನಲ್ಲಿ ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ಭತ್ತದ ಗದ್ದೆಗೆ ನೀರು ಬಿಡಲು ಹೋಗದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಗ್ರಾಮೀಣ ಪ್ರದೇಶದಲ್ಲಿ ನಿತ್ಯ ಬೆಳಿಗ್ಗೆ 4ರಿಂದ 11 ಗಂಟೆಗೆ ಮಾತ್ರ ತ್ರಿಫೇಸ್‌ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಅದ್ದರಿಂದ ತನ್ನ ಮೂರು ಎಕರೆ ಜಮೀನಲ್ಲಿ ಬೆಳೆದಿದ್ದ ಭತ್ತಕ್ಕೆ ನೀರು ಹರಿಸಲು ಹೋಗಿ ಮೃತಪಟ್ಟಿದ್ದಾರೆ.

ಭೇಟಿ: ಶಾಸಕಿ ಕರೆಮ್ಮ ಜಿ.ನಾಯಕ ಅವರು ಜಾಲಹಳ್ಳಿ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮೃತ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಎಲ್ಲ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.

ಆಸ್ಪತ್ರೆಯ ವೈದ್ಯಾಧಿಕಾರಿ ಆರ್.ಎಸ್ ಹುಲಿಮನಿ, ಪಿಎಸ್ಐ ಬಸವರಾಜ ನಾಯಕ, ಮುಖಂಡರಾದ ಸಿದ್ದನಗೌಡ ಪಾಟೀಲ, ಇಸಾಕ್ ಮೇಸ್ತ್ರಿ, ಹನುಮಂತರಾಯ ವಕೀಲ, ಗೋವಿಂದರಾಜ ನಾಯಕ, ರಂಗಣ್ಣ ಕೋಲ್ಕಾರ್, ಭೀಮಣ್ಣ ಗುಮೇದಾರ, ಶ್ರೀನಿವಾಸ ನಾಯಕ, ಯಂಕೋಬ ನಾಯಕ ಕುದುರಿ, ನಾಗರಾಜ ಮ್ಯಾಕಲದೊಡ್ಡಿ, ಹುಸೇನಪ್ಪ ಗುತ್ತಿಗೆದಾರ, ಶಿವನಗೌಡ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜಾಲಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಟ್ಟ ರೈತ ಅಯ್ಯಪ್ಪ ನಾಯಕನ ಮೃತ ದೇಹವನ್ನು ಶಾಸಕಿ ಕರೆಮ್ಮ ಜಿ.ನಾಯಕ ಭೇಟಿ ನೀಡಿ ಪರಿಶೀಲಿಸಿ ಮೃತ ಕುಟುಂಬ ಸದಸ್ಕಯರಿಗೆ‌ಸಾಂತ್ವನ ಹೇಳಿದರು
ಜಾಲಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಟ್ಟ ರೈತ ಅಯ್ಯಪ್ಪ ನಾಯಕನ ಮೃತ ದೇಹವನ್ನು ಶಾಸಕಿ ಕರೆಮ್ಮ ಜಿ.ನಾಯಕ ಭೇಟಿ ನೀಡಿ ಪರಿಶೀಲಿಸಿ ಮೃತ ಕುಟುಂಬ ಸದಸ್ಕಯರಿಗೆ‌ಸಾಂತ್ವನ ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT