ಬುಧವಾರ, ಜುಲೈ 6, 2022
22 °C

ರಾಯಚೂರು: ಯುದ್ದ ನಿಲ್ಲಿಸುವಂತೆ ಮಕ್ಕಳಿಂದ ಪ್ರಾರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದ ಎನ್‌ಐಜಿ ಕಾಲೋನಿಯ ಕಾಶಿ ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಮಕ್ಕಳು ಮಹಾಶಿವರಾತ್ರಿ ದಿನದಂದು ಮಂಗಳವಾರ ದೇವರನ್ನು ಪ್ರಾರ್ಥಿಸಿ, ರಷ್ಯಾ ಹಾಗೂ ಉಕ್ರೇನ್ ದೇಶಗಳು ಯುದ್ಧ ನಿಂತುಹೋಗಲಿ ಎಂದು ಕೋರಿದರು.

ರಷ್ಯಾ ಅಧ್ಯಕ್ಷರಿಗೆ ಶಿವನು ಒಳ್ಳೆಯ ಬುದ್ದಿ ಕೊಡಲಿ. ಈ ಮೂಲಕ ಜಗತ್ತಿನಲ್ಲಿ ಶಾಂತಿ ನೆಲಸುವಂತಾಗಲಿ ಎಂದು ಘೋಷಣಾ ಫಲಕಗಳನ್ನು ಹಿಡಿದು ಗಮನ ಸೆಳೆದರು. 

ಶಿವರಾತ್ರಿ ನಿಮಿತ್ತ ದೇವಸ್ಥಾನದಲ್ಲಿ ಮಹಾರುದ್ರ ಅಭಿಷೇಕ, ಗಂಧ ಲೇಪನ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು.

ಮುಂದಿನ ದಿನಗಳಲ್ಲಿ ಯಾವ ರಾಷ್ಟ್ರಗಳು ಯುದ್ದ ಮಾಡದಂತೆ ಎಲ್ಲರಿಗೂ ಒಳ್ಳೆಯ ಬುದ್ದಿ ನೀಡಲಿ ಎಂದೂ ಮಕ್ಕಳು ಪ್ರಾರ್ಥಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು