ರಾಯಚೂರು: ನಗರ ನಿಧಾನವಾಗಿ ವಿಸ್ತಾರಗೊಳ್ಳುತ್ತಿರುವುದರಿಂದ ಕುಡಿಯುವ ನೀರಿನ ಬೇಡಿಕೆಯೂ ಹೆಚ್ಚುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಹಾನಗರ ಪಾಲಿಕೆ ನೀರಿನ ತಿಂಗಳ ಶುಲ್ಕ ಹೆಚ್ಚಿಸಲು ನಿರ್ಧರಿಸಿದೆ.

ಮಹಾನಗ ಪಾಲಿಕೆಯು ಈಗಾಗಲೇ ಮೂರು ವಿಭಾಗಗಳನ್ನಾಗಿ ವಿಭಜಿಸಿ ಪ್ರತಿ ತಿಂಗಳು ಗೃಹ ಬಳಕೆಗೆ ₹ 15, ಗೃಹೇತರ ಬಳಕೆಗೆ ₹ 30 ಹಾಗೂ ವಾಣಿಜ್ಯ ಬಳಕೆಗೆ ₹ 60 ವಿಧಿಸುತ್ತಿತ್ತು. ಇದೀಗ ಗೃಹ ಬಳಕೆಗೆ ₹ 30, ಗೃಹೇತರ ಬಳಕೆಗೆ ₹ 60 ಹಾಗೂ ವಾಣಿಜ್ಯ ಬಳಕೆಗೆ ₹ 120 ಆಕರಿಸಲು ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

ನಳ ಜೋಡಣೆ ಶುಲ್ಕವನ್ನು ಸಹ ಹೆಚ್ಚಿಸಿದೆ. ಗೃಹ ಬಳಕೆಗೆ ₹2,000, ಗೃಹೇತರ ಬಳಕೆಗೆ ₹ 3,000 ಹಾಗೂ ವಾಣಿಜ್ಯ ಬಳಕೆಗೆ ₹ 5,000 ನಿಗದಿಪಡಿಸಿದೆ. ಒಳ ಚರಂಡಿ ಸಂಪರ್ಕ ಹೊಂದದೆ ಕೊಳಚೆ ನೀರನ್ನು ಜಲ ಮೂಲಗಳಿಗೆ ಬಿಡುತ್ತಿರುವ ಮಾಲೀಕರಿಗೆ ಗೃಹ ಬಳಕೆಯವರಿಗೆ ₹ 5 ಸಾವಿರ, ಗೃಹೇತರ ಬಳಕೆದಾರರಿಗೆ ₹ 10 ಸಾವಿರ ಹಾಗೂ ವಾಣಿಜ್ಯ ಬಳಕೆದಾರರಿಗೆ ₹ 15 ಸಾವಿರ ದಂಡ ವಿಧಿಸಲು ಒಮ್ಮತದ ನಿರ್ಧಾರ ತೆಗೆದುಕೊಂಡಿದೆ.

‘ರಾಜ್ಯದ ಬೇರೆ ಮಹಾನಗರ ಪಾಲಿಕೆಗೆ ಹೋಲಿಸಿದರೆ ರಾಯಚೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಶುಲ್ಕ ಬಹಳ ಕಡಿಮೆ ಇದೆ. ಸಾರ್ವಜನಿಕರಿಗೆ ಹೊರೆಯಾಗದಂತೆ ಶುಲ್ಕ ನಿಗದಿಪಡಿಸಲಾಗಿದೆ’ ಎಂದು ಮಹಾನಗರ ಪಾಲಿಕೆ ಮೇಯರ್ ನರಸಮ್ಮ ಮಾಡಗಿರಿ ಪ್ರತಿಕ್ರಿಯಿಸಿದರು.

‘ಗೃಹ ಬಳಕೆಯ ನೀರಿನ ಶುಲ್ಕವನ್ನು ಕೇವಲ ₹ 30ಕ್ಕೆ ಹಚ್ಚಿಸಲಾಗಿದೆ. ವರ್ಷದ ಲೆಕ್ಕ ತೆಗೆದುಕೊಂಡರೆ ದಿನಕ್ಕೆ ₹ 1 ರೂಪಾಯಿ ಕೂಡ ಆಗುವುದಿಲ್ಲ. ಹೀಗಾಗಿ ಮಹಾನಗರ ಪಾಲಿಕೆ ಶುಲ್ಕ ಹೆಚ್ಚಳ ಮಾಡಿದೆ’ ಎಂದು ನಗರಸಭೆಯ 21ನೇ ವಾರ್ಡ್ನ ಸದಸ್ಯ ನಾಗರಾಜ ಹೇಳಿದರು.

‘ಒಳ ಚರಂಡಿ ಸಂಪರ್ಕ ಹೊಂದದೆ ಕೊಳಚೆ ನೀರನ್ನು ಜಲಮೂಲಗಳಿಗೆ ಬಿಡುತ್ತಿರುವ ಗೃಹೇತರ ಬಳಕೆದಾರರಿಗೆ ದಂಡ ವಿಧಿಸುವ ಪ್ರಕ್ರಿಯೆ ಶುರುವಾಗಿದೆ. ಈಗಾಗಲೇ ಇಬ್ಬರಿಗೆ ತಲಾ ₹ 10 ಸಾವಿರ ದಂಡ ವಿಧಿಸಲಾಗಿದೆ’ ಎಂದು ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪತ್ರ ತಿಳಿಸಿದರು.

ರಾಯಚೂರಿನಲ್ಲಿ ಗೃಹ ಬಳಕೆಯ 24,100, ಗೃಹೇತರ ಬಳಕೆಯ 146 ಹಾಗೂ ವಾಣಿಜ್ಯ ಬಳಕೆಯ 92 ನಳಗಳಿವೆ. ದಾಖಲೆಗಳಲ್ಲಿ ಈಗಲೂ ಹಳೆಯ ಮಾಹಿತಿ ಉಲ್ಲೇಖವಿದೆ. ಅನಧಿಕೃತ ನಳಗಳ ಸಂಖ್ಯೆ ಹೆಚ್ಚಿದೆ. ಇವುಗಳನ್ನು ಪತ್ತೆ ಹಚ್ಚುವ ಕಾರ್ಯವನ್ನೂ ಇದೇ ಅವಧಿಯಲ್ಲಿ ಕೈಗೊಳ್ಳಲು ಪಾಲಿಕೆ ಚಿಂತನೆ ನಡೆಸಿದೆ.

ಡಿಸೆಂಬರ್ನಿಂದ ನೀರಿನ ಪರಿಷ್ಕೃತ ದರ ಆಕರಣೆ ಶುರುವಾಗಲಿದೆ. ನಗರದ ಜನರು ಸಕಾಲದಲ್ಲಿ ತೆರಿಗೆ ಪಾವತಿಸಿ ಸಹಕರಿಸಬೇಕು
ಜುಬಿನ್ ಮೊಹಾಪತ್ರ ಮಹಾನಗರ ಪಾಲಿಕೆ ಆಯುಕ್ತ

‘ನೀರಿನ ಗುಣಮಟ್ಟ ಪರೀಕ್ಷೆ’

ನಗರದ ಜನತೆಗೆ ಗುಣಮಟ್ಟದ ನೀರು ಪೂರೈಸುವ ದಿಸೆಯಲ್ಲಿ ಪಾಲಿಕೆ ಮಹತ್ವದ ಹೆಜ್ಜೆ ಇಟ್ಟಿದೆ. ಮಹಾನಗರ ಪಾಲಿಕೆಯ ಕುಡಿಯುವ ನೀರು ಸರಬರಾಜು ಸಿಬ್ಬಂದಿಗೆ ನೀರು ಪರೀಕ್ಷೆಯ ಕಿಟ್ ನೀಡುವ ಮೂಲಕ ವಾರ್ಡ್ ಮಟ್ಟದಲ್ಲಿ ನೀರು ಪರೀಕ್ಷಿಸಲು ಸೂಚಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪತ್ರ ಹೇಳಿದರು. ಎಂಜಿನಿಯರ್ ವಾಲ್ ಆಪರೇಟರ್ ಹಾಗೂ ಇತರ ಸಿಬ್ಬಂದಿಗೆ ಎಫ್ಟಿಕೆ ಕಿಟ್ಗಳ ಬಳಕೆ ಬಗ್ಗೆ ತರಬೇತಿ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದಾಗಿ ಶುದ್ಧವಾದ ಕುಡಿಯುವ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಸ್ಥಳದಲ್ಲೇ ನೀರು ಸಂಗ್ರಹಿಸಿ ಎಫ್ಟಿಕೆ ಕಿಟ್ಗಳನ್ನು ಬಳಸಿ ಪರೀಕ್ಷಿಸಲಾಗುತ್ತಿದೆ. ಪ್ರತಿ ವಾರ್ಡ್ನಲ್ಲಿ ನಿಯಮಿತವಾಗಿ ಈ ಕಾರ್ಯ ನಡೆಯುತ್ತಿದೆ’ ಎಂದು ಮಾಹಿತಿ ಒದಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.