ರಾಯಚೂರು: ಜಿಲ್ಲೆಯ ಜಾಲಹಳ್ಳಿ ಸಮೀಪ ಬುಂಕಲದೊಡ್ಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಬರುತ್ತಿದ್ದ ಮಹಿಳೆಗೆ ಜಿಲ್ಲಾ ಮೀಸಲು ಪೊಲೀಸ್ ವ್ಯಾನ್‌ಗುರುವಾರ ಬೆಳಿಗ್ಗೆ ಡಿಕ್ಕಿಯಾಗಿದೆ. ಈ ವೇಳೆ ವ್ಯಾನ್ಮಗುಚಿ ಬಿದ್ದಿದ್ದು, ಘಟನೆಯಲ್ಲಿ ಮಹಿಳೆ ಹಾಗೂ ಮೂವರು ಪೊಲೀಸರು ಗಾಯಗೊಂಡಿದ್ದಾರೆ.

ಬುಂಕಲದೊಡ್ಡಿ ಗ್ರಾಮದ ದೇವಕಮ್ಮ ಹನುಮಂತರಾಯ್ (60) ಸ್ಥಿತಿ ಚಿಂತಾಜನಕವಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣ ಪ್ರಮಾಣದಲ್ಲಿ ಗಾಯಗೊಂಡ ಪೊಲೀಸರಿಗೆ ದೇವದುರ್ಗ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

‘ವ್ಯಾನ್ ಸರಿಯಾದ ಮಾರ್ಗದಲ್ಲಿಯೆ ಚಲಿಸುತ್ತಿತ್ತು. ಇಬ್ಬರು ಮಹಿಳೆಯರು ರಸ್ತೆ ಪಕ್ಕದಿಂದಲೆ ನಡೆದುಬರುತ್ತಿದ್ದರು. ಅಪಘಾತ ಹೇಗೆ ಉಂಟಾಯಿತು ಎಂಬುದೇ ಗೊತ್ತಾಗಲಿಲ್ಲ’ ಎಂದು ವ್ಯಾನ್‌ನಲ್ಲಿದ್ದ ಪೊಲೀಸರು ತಿಳಿಸಿದರು.

ಬಳ್ಳಾರಿ ಜಿಲ್ಲೆಯ ಆರು ಜನ ಮೀಸಲು ಪೊಲೀಸರು ದೇವದುರ್ಗದಿಂದ ಲಿಂಗಸುಗೂರು ಕಡೆಗೆ ಹೋಗುವಾಗ ಅಪಘಾತ ಉಂಟಾಗಿದೆ. ಇನ್ನೊಬ್ಬ ಮಹಿಳೆಯು ರಸ್ತೆಯಿಂದ ಪಕ್ಕಕ್ಕೆ ಹಾರಿ ರಕ್ಷಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.