ರಾಯಚೂರು: ನ್ಯಾಷನಲ್ ಹೆರಾಲ್ಡ್ (ಯಂಗ್ ಇಂಡಿಯಾ) ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ನಾಯಕರು ಮಾಡುತ್ತಿರುವ ಪಿತೂರಿ ವಿರೋಧಿಸಿ ಹಾಗೂ ಕಾನೂನು ಬಾಹಿರ ಪ್ರಕರಣ ಎನ್ನುವುದು ಸಾಬೀತಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಗುರುವಾರ ಬಿಜೆಪಿ ಜಿಲ್ಲಾ ಘಟಕದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಶಾಂತಪ್ಪ ಮಾತನಾಡಿ, ‘ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಕೇಂದ್ರದ ಬಿಜೆಪಿ ಸರ್ಕಾರವು ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅಪ ಪ್ರಚಾರ ಮಾಡುತ್ತಿದೆ. ಬಿಜೆಪಿಯ ಈ ಕುತಂತ್ರಕ್ಕೆ ಉತ್ತರವಾಗಿ ನ್ಯಾಯಾಲಯದಲ್ಲಿ ನ್ಯಾಯ ದೊರೆತಿದೆ’ ಎಂದು ತಿಳಿಸಿದರು.

‘ಬಿಜೆಪಿಯವರು ತಮ್ಮ ತಪ್ಪುಗಳನ್ನು ಮರೆಮಾಚಲು ಇಂತಹ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆ. ಇಂದು ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ದೇಶದಲ್ಲಿ ಹಣದುಬ್ಬರ ಹೆಚ್ಚಿದ್ದು ನಿರುದ್ಯೋಗದ ಪ್ರಮಾಣ ಏರಿಕೆಯಾಗಿದೆ. ಜನರ ಮೇಲೆ ತೆರಿಗೆಗಳನ್ನು ಮನಬಂದಂತೆ ಹೇರಿ, ಭಾರತವನ್ನು ಸಾಲಗಾರ ದೇಶವನ್ನಾಗಿ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಇತ್ತೀಚೆಗೆ ದೈನಂದಿನ ಬಳಕೆಯ ಪೆಟ್ರೋಲ್, ಡೀಸೆಲ್, ಅನಿಲ ಬೆಲೆಗಳು ಗಗನಕ್ಕೇರಿವೆ. ಬಿಜೆಪಿಯವರು ತಮ್ಮ ಇಂತಹ ತಪ್ಪುಗಳನ್ನು ಮರೆಮಾಚಲು, ಸುಳ್ಳು ಪ್ರಕರಣಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ, ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ ಮಾತನಾಡಿ, ‘ನ್ಯಾಷನಲ್ ಹೆರಾಲ್ಡ್ ಈ ದೇಶದ ಆಸ್ತಿ. ದ್ವೇಷ ರಾಜಕಾರಣ ಬಿಜೆಪಿ ಆಸ್ತಿ. ಸತ್ಯಕ್ಕೆ ಸಾವಿಲ್ಲ, ಸುಳ್ಳು ಪ್ರಕರಣಗಳಿಗೆ ಆಯುಷ್ಯವಿಲ್ಲ ಎಂಬುದಕ್ಕೆ ನ್ಯಾಯಾಲಯದ ಆದೇಶವೇ ಸಾಕ್ಷಿ. ನಮ್ಮನ್ನು ಪಿತೂರಿಯಿಂದ ಸೋಲಿಸಲು ಸಾಧ್ಯವಿಲ್ಲ, ದ್ವೇಷದಿಂದ ಕುಗ್ಗಿಸಲು ಸಾಧ್ಯವಿಲ್ಲ’ ಎಂದು ಗುಡುಗಿದರು.

‘ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಜೈಲಿಗೆ ಹಾಕಲು ಪಿತೂರಿ ಮಾಡಲಾಗಿದೆ. ಈ ದ್ವೇಷ ರಾಜಕಾರಣ ಇಲ್ಲಿಗೆ ಕೊನೆಯಾಗಬೇಕು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಜೊತೆ ನಿಂತು ಅವರ ಕೈ ಬಲಪಡಿಸೋಣ’ ಎಂದರು.

ಬಿಜೆಪಿ ಸರ್ಕಾರವು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಿಸಿ ‘ವಿಬಿ ಜಿ ರಾಮ್ ಜಿ' ಯೋಜನೆ ಎಂದು ಬದಲಿಸಿದ್ದಾರೆ. ಇದರ ಹೆಸರನ್ನು ಬದಲಾವಣೆ ಮಾಡಿದ್ದು ಸರಿಯಲ್ಲ. ಬಿಜೆಪಿ ಹೆಸರು ಬದಲಾಯಿಸುವ ಕಾರ್ಯದಲ್ಲಿ ನಿರತವಾಗಿದೆಯೆ ಹೊರತು ಬಡವರಿಗೆ ಅನುಕೂಲ ಕಲ್ಪಿಸುವ ಕೆಲಸವನ್ನು ಮಾಡುತ್ತಿಲ್ಲ‘ ಎಂದು ಆರೋಪಿಸಿದರು..

ಕೆಪಿಸಿಸಿ ವಕ್ತಾರರಾದ ರಜಾಕ್ ಉಸ್ತಾದ್, ಮಹ್ಮದ್ ಶಾಲಂ, ಕೆಪಿಸಿಸಿ ಎಸ್.ಟಿ. ಘಟಕದ ಉಪಾಧ್ಯಕ್ಷ ತಾಯಣ್ಣ ನಾಯಕ, ಆರ್ಡಿಎ ಅಧ್ಯಕ್ಷ ರಾಜಶೇಖರ ನಾಯಕ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಜಿ.ಶಿವಮೂರ್ತಿ, ರಾಯಚೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ರಾಯಚೂರು ನಗರ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಂಜನೇಯ ಕುರುಬದೊಡ್ಡಿ, ದೇವಸೂಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ ರಂಗಾ, ಗಿಲ್ಲೇಸೂಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಂದ್ರಪ್ಪ ಮಟಮಾರಿ, ಎಪಿಎಂಸಿ ಉಪಾಧ್ಯಕ್ಷ ಬಶೀರುದ್ದೀನ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಈಶಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳಾದ ಜೆ.ಮಾರೆಪ್ಪ, ಜೆ.ಅಂಜನಕುಮಾರ, ರಿಯಾಜ್, ಮುಖಂಡರುಗಳಾದ ರಮೇಶ ಯಾದವ, ಹನುಮಂತು ಜೂಕೂರು, ಕೆ.ಮಲ್ಲಿಕಾರ್ಜುನ ನಾಯಕ, ಉರುಕುಂದಪ್ಪ, ಸಂಜೀವಪ್ಪ ಛಲವಾದಿ, ಸೈಯದ್ ದಸ್ತಗಿರಿ, ಶಂಕರ ಕಲ್ಲೂರು, ಮಹ್ಮದ್ ಉಸ್ಮಾನ್, ಯುಸೂಫ್ ಖಾನ್, ದಾನಪ್ಪ ಯಾದವ, ಫೈಸಲ್ ಖಾನ್, ವಿಶ್ವನಾಥ ಪಟ್ಟಿ, ಶ್ರೀದೇವಿ ನಾಯಕ, ಶಶಿಕಲಾ ಭೀಮರಾಯ, ನಿರ್ಮಲಾ ಬೆಣ್ಣಿ, ನವನೀತ ಆದೋನಿ, ಆರತಿ ಚಂದ್ರಶೇಖರ, ಎನ್.ಲಕ್ಷ್ಮಿ, ಪ್ರತಿಭಾ ಪಾಟೀಲ, ವಂದನಾ, ಜ್ಯೋತಿ, ಶ್ರೀದೇವಿ, ಜಿ.ಕೇಶವಮೂರ್ತಿ, ಶೇಖ ಮಾಸೂಮ್, ಜಾಫರ್ ಅಹ್ಮದ್, ಪರಶುರಾಮುಲು, ಸುರೇಶ ಪಟ್ಟಿ, ಜಿ.ಮುದ್ದುಕೃಷ್ಣ ಮಂಚಾಲ, ಸಿ.ನಾಗರಾಜ, ಪಿ.ಆಶಣ್ಣ, ತಿಮ್ಮಪ್ಪ ಮಾಚರ್ಲಾ, ಎಂ.ನರಸಿಂಹಲು, ಬೋಜರಾಜ್, ಸಚಿನ, ಎಸ್.ವೆಂಕಟೇಶ, ಆರ್.ತಿರುಮಲರಾವ್, ಎಂ.ಕೆಂಚಪ್ಪ, ಎಂ.ವಿಜಯಕುಮಾರ, ಪಿ.ಶ್ರವಣಕುಮಾರ, ಹುಲಿಗೆಪ್ಪ ಜಲ್ದಾರ್, ಈರಣ್ಣ, ರಾಘವೇಂದ್ರ, ಮೆಹಬೂಬ, ಸೈಯದ್ ಶಂಶುದ್ದೀನ್, ವಿಜಯಕುಮಾರ, ಚಂದ್ರು, ಮಂಜುನಾಥ, ಹನುಮಂತು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.