ರಾಯಚೂರು ಉತ್ಸವದ ಅಂಗವಾಗಿ ರಾಯಚೂರಿನ ಲಿಂಗಸುಗೂರು ರಸ್ತೆಯಲ್ಲಿ ಗೋಡೆಗಳ ಮೇಲೆ ಗದಗಿನ ಕಲಾವಿದರು ಮುದಗಲ್ ಕೋಟೆಯ ಅವಶೇಷದ ಚಿತ್ರ ಬಿಡಿಸಿರುವುದು
ರಾಯಚೂರು ಉತ್ಸವ
ಗಾಯನ ಕಾರ್ಯಕ್ರಮ
‘ಖ್ಯಾತ ಗಾಯಕ ವಿಜಯ್ ಪ್ರಕಾಶ್ ಸಂಜಿತ್ ಹೆಗಡೆ ರಾಜೇಶ ಕೃಷ್ಣನ್ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಕಲಾವಿದ ಕ್ಲಾರಿಯೋನೆಟ್ ವಾದಕ ಪಂಡಿತ್ ನರಸಿಂಹಲು ವಡವಾಟಿ ಪ್ರದರ್ಶನ ನೀಡಲಿದ್ದಾರೆ’ ಎಂದು ತಿಳಿಸಿದರು. ‘ಹೆಲಿಕಾಪ್ಟರ್‌ನಲ್ಲಿ ಸಂಚರಿಸಲು ಜನ ಸಾಮಾನ್ಯರಿಗೆ ಅವಕಾಶ ಮಾಡಿಕೊಡ ಲಾಗಿದೆ. ₹4500 ಪಾವತಿಸಿ ಒಂದು ತಾಸು ಸಂಚರಿಸಬಹುದಾಗಿದೆ. ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಹೇಳಿದರು.
ಪೋಸ್ಟರ್ ಬಿಡುಗಡೆ
ರಾಯಚೂರು: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ–2026ರ ಕಾರ್ಯಕ್ರಮಗಳ ವೇಳಾಪಟ್ಟಿ, ಬ್ಯಾನರ್, ಪೋಸ್ಟರ್, ಬಲೂನ್, ಕರಪತ್ರ, ಪಾಸ್ ಹಾಗೂ ಸಾಮಾಜಿಕ ಜಾಲತಾಣ ಬಿಡುಗಡೆ ಕಾರ್ಯಕ್ರಮ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು.ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರು ಜಿಲ್ಲಾ ಉತ್ಸವದ ಪೋಸ್ಟರ್ ಹಾಗೂ ವೇಳಾಪಟ್ಟಿ ಬಿಡುಗಡೆ ಮಾಡಿ ಮಾತನಾಡಿದರು.