ಸೋಮವಾರ, ಸೆಪ್ಟೆಂಬರ್ 27, 2021
22 °C

ಮಂತ್ರಾಲಯಕ್ಕೆ ನುಗ್ಗಿದ ಎಮ್ಮಿಗನೂರು ಹಳ್ಳದ ನೀರು: ಭಕ್ತರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಶನಿವಾರ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದ ಆಂಧ್ರಪ್ರದೇಶದ ಎಮ್ಮಿಗನೂರು ಹಳ್ಳ ಹರಿದು, ಮಂತ್ರಾಲಯಕ್ಕೆ ನೀರು ನುಗ್ಗಿದೆ.

ಸುಮಾರು ಐದು‌ ಅಡಿವರೆಗೂ ನೀರು ಹರಿಯುತ್ತಿದ್ದು, ಕೆಲವು ಮಾರ್ಗಗಳಲ್ಲಿ ಸಂಚಾರ ಸ್ಥಗಿತವಾಗಿದೆ. ಬಸ್ ನಿಲ್ದಾಣ ಹಾಗೂ ರಾಘವೇಂದ್ರ ವೃತ್ತ ಜಲಾವೃತ್ತವಾಗಿವೆ.

ಕಲ್ಯಾಣ ಮಂಟಪ ಹಾಗೂ ಮಳಿಗೆಗಳಲ್ಲಿ ನೂರು ತುಂಬಿಕೊಂಡಿದೆ. ಬೇರೆಬೇರೆ ಊರುಗಳಿಂದ ದರ್ಶನಕ್ಕಾಗಿ ಬಂದಿದ್ದ ಭಕ್ತರು ಪರದಾಡುವಂತಾಗಿದೆ.

ವಾಹನಗಳು ಜಲಾವೃತ್ತವಾಗಿವೆ. ಮಳೆ ಈಗಲೂ ಮುಂದುವರಿದಿದೆ. ರಾಯರ ಮಠದತ್ತ ನೀರು ತಲುಪಿಲ್ಲ. ಆದರೆ, ಆವರಣದ ಮುಖ್ಯದ್ವಾರದ ಬಳಿ ನೀರು ಹರಿದು ತುಂಗಭದ್ರಾ ನದಿಗೆ ಸೇರುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.