ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಸುಗೂರು | ಸರಣಿ ಅಪಘಾತ: ವ್ಯಕ್ತಿ ಸಾವು

Published 12 ಜೂನ್ 2024, 15:45 IST
Last Updated 12 ಜೂನ್ 2024, 15:45 IST
ಅಕ್ಷರ ಗಾತ್ರ

ಲಿಂಗಸುಗೂರು: ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ಬಳಿ ಕಾರೊಂದು ಬುಧವಾರ ಬೆಳಿಗ್ಗೆ ಎರಡು ಬೈಕ್‍ಗಳಿಗೆ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿಯೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮೂವರು ತೀವ್ರಗಾಯಗೊಂಡಿದ್ದಾರೆ.

ಗುರುಗುಂಟ ಕಡೆ ಹೊರಟಿದ್ದ ಕಾರು ಲಿಂಗಸುಗೂರು ಕಡೆಗೆ ಬರುತ್ತಿದ್ದ ಬೈಕ್‍ಗಳಿಗೆ ಒಂದರ ನಂತರ ಒಂದಕ್ಕೆ ಡಿಕ್ಕಿ ಹೊಡೆದಿದ್ದರಿಂದ ಹುಲಗಪ್ಪ ಹನುಮಂತ (34) ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ.

ಭೀಮಣ್ಣ ಬಂಗಾರೆಪ್ಪ (40), ಶಿವಪ್ಪ ಸರ್ಜಪ್ಪ (40), ಶರಣಪ್ಪ ಸರ್ಜಪ್ಪ (37) ತೀವ್ರಗಾಯಗೊಂಡಿದ್ದರು. ಭೀಮಣ್ಣ ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ರಾಯಚೂರಿನ ರಿಮ್ಸ್‌ಗೆ ಸೇರಿಸಲಾಗಿದೆ.

ತಪ್ಪಿಸಿಕೊಳ್ಳಲು ಯತ್ನ: ಹೊನ್ನಳ್ಳಿ ಬಳಿ ಬೈಕ್‍ಗಳಿಗೆ ಡಿಕ್ಕಿ ಹೊಡೆದ ಕಾರು ಚಾಲಕ ಮರಳಿ ಲಿಂಗಸುಗೂರು ಕಡೆಗೆ ವೇಗವಾಗಿ ಚಲಾಯಿಸಿಕೊಂಡು ತಪ್ಪಿಸಿಕೊಳ್ಳುವ ಯತ್ನ ನಡೆಸಿದಾಗ ಯುವಕರ ಗುಂಪು ಫಾಲೊ ಮಾಡಿ ಪೊಲೀಶ ವಶಕ್ಕೆ ನೀಡಿದರು.

ಡಿವೈಎಸ್ಪಿ ದತ್ತಾತ್ರೆಯ ಕಾರ್ನಾಡ್‍, ಪೊಲೀಸ್‍ ಇನ್‍ಸ್ಪೆಕ್ಟರ್ ಪುಂಡಲಿಕ್ ಪಟತ್ತರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಲಿಂಗಸುಗೂರು ತಾಲ್ಲೂಕು ಹೊನ್ನಳ್ಳಿ ಬಳಿ ಬುಧವಾರ ನಡೆದ ಸರಣಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಭೀಮಣ್ಣನಿಗೆ ಚಿಕಿತ್ಸೆ ನೀಡಿ ರಿಮ್ಸ್ಗೆ ಶೀಫಾರಸ್ಸು ಮಾಡಲಾಯಿತು
ಲಿಂಗಸುಗೂರು ತಾಲ್ಲೂಕು ಹೊನ್ನಳ್ಳಿ ಬಳಿ ಬುಧವಾರ ನಡೆದ ಸರಣಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಭೀಮಣ್ಣನಿಗೆ ಚಿಕಿತ್ಸೆ ನೀಡಿ ರಿಮ್ಸ್ಗೆ ಶೀಫಾರಸ್ಸು ಮಾಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT