ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫ.ಗು.ಹಳಕಟ್ಟಿ ಬಸವತತ್ವ ಪ್ರಚಾರಕರಲ್ಲಿ ಪ್ರಮುಖರು’

Last Updated 14 ಮೇ 2022, 14:20 IST
ಅಕ್ಷರ ಗಾತ್ರ

ರಾಯಚೂರು: ವಚನಗಳ ಪಿತಾಮಹ ಫ.ಗು. ಹಳಕಟ್ಟಿ, ಹಾರ್ಡೆಕರ್ ಮಂಜಪ್ಪನವರೊಂದಿಗೆ ಬಸವ ತತ್ವ ಪ್ರಚಾರಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಮಹಾನ್ ಸಂತ ಎಂದು ಶರಣ ಪರಮೇಶ್ವರ ಸಾಲಿಮಠ ಹೇಳಿದರು.

ನಗರದ ಬಸವ ಕೇಂದ್ರದಲ್ಲಿ ಈಚೆಗೆ ಜ್ಞಾನದಾಸೋಹಿ ಶ್ರೀಸಂಗನಬಸವ ಶಿವಯೋಗಿಗಳ 50ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜ್ಞಾನದಾಸೋಹಿಯಾದ ಶಿವಯೋಗಿಗಳು ವಿಜಯಪುರದ ಬಿ.ಎಲ್.ಡಿ.ಈ. ಸರ್ವತೋಮುಖ ಏಳ್ಗೆಗಾಗಿ ಹಗಲಿರುಳು ಶ್ರಮಿಸಿದ್ದಾರೆ ಎಂದರು.

ಇಂದಿನ ಬಸವನ ಬಾಗೇವಾಡಿ ಬಸವನ ಗುಡಿಯನ್ನು ಜೀರ್ಣನೋದ್ಧಾರ ಮಾಡಿ, ವಿದ್ಯಾ ಕೇಂದ್ರ, ಸಹಕಾರಿ ಬ್ಯಾಂಕ್ ಸ್ಥಾಪಿಸಿದರು. ಬಸವಣ್ಣನವರ ಆಶಯದಂತೆ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ 1,96,000 ಇಷ್ಟಲಿಂಗಪೂಜೆ ಮಾಡಿಸಿದರಲ್ಲದೆ ವಿಜಯಪುರದಲ್ಲಿ 770 ಅಮರಗಣಾಧಿಶರರ ಲಿಂಗ ಸ್ಥಾಪನೆ ಮಾಡಿಸಿದ್ದಾರೆ ಎಂದು ತಿಳಿಸಿದರು.

ಚಂದ್ರಶೇಖರ ಮಿರ್ಜಾಪುರ, ವಿಜಯಕುಮಾರ್ ಸಜ್ಜನ, ಮಹದೇವಪ್ಪ ಏಗನೂರ್, ಎಸ್. ಶಂಕರಗೌಡರು, ಚನ್ನಬಸವ, ಎಂಜಿನಿಯರ್, ದಾನಮ್ಮ, ಶರಣೆ ಸುಮಂಗಲಸ್ವಾಮಿ ಮಾತನಾಡಿದರು.

ರಾಚನಗೌಡ ಕೋಳೂರು ಅಧ್ಯಕ್ಷತೆಯನ್ನು ವಹಿಸಿದ್ದರು .ಶರಣೆ ಪಾರ್ವತಿ ಪಾಟೀಲ, ಅಶ್ವಿನಿ ಮಾಟೂರ್, ಸಂಗಡಿಗರಿಂದ ವಚನ ಪ್ರಾರ್ಥನೆ ನಡೆಯತು. ಹನುಮಂತರಾಯ ರಾಂಪೂರ ಸ್ವಾಗತಿಸಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ಸಿ.ಬಿ.ಪಾಟೀಲ ವಕೀಲರು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT