ಲಿಂಗಸುಗೂರು: ‘ತಾಲ್ಲೂಕಿನ ಮುದಗಲ್ಲ ಪುರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿನ ಆಳವಾದ ತಗ್ಗು, ಗುಂಡಿಗಳನ್ನು ಮುಚ್ಚಿ ಸುಗಮ ಪ್ರಯಾಣಕ್ಕೆ ಅನುಕೂಲ ಮಾಡಿ’ ಎಂದು ಆಗ್ರಹಿಸಿ ಪುರಸಭೆ ಅಧ್ಯಕ್ಷೆ ಮಹಾದೇವಮ್ಮ ಗುತ್ತೆದಾರ ಬರೆದ ಪತ್ರವನ್ನು ಸದಸ್ಯರು ಲೊಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಸಲ್ಲಿಸಿ ಮನವಿ ಮಾಡಿದರು.

ಶುಕ್ರವಾರ ಲೊಕೋಪಯೋಗಿ ಇಲಾಖೆ ಅಧಿಕಾರಿಯನ್ನು ಭೇಟಿ ಮಾಡಿದ್ದ ತಂಡ, ‘ರಾಯಚೂರು–ಬೆಳಗಾವಿ ಮುಖ್ಯ ರಸ್ತೆ ಪಟ್ಟಣ ವ್ಯಾಪ್ತಿಯಲ್ಲಿ ಸಂಪೂರ್ಣ ಹಾಳಾಗಿದೆ. ಪುರಸಭೆಯಲ್ಲಿ ದುರಸ್ತಿಗೆ ಅನುದಾನ ಕೊರತೆಯಿದ್ದು ಇಲಾಖೆ ಅನುದಾನದಲ್ಲಿ ಶಾಶ್ವತ ದುರಸ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅಜ್ಮಿರ್ ಬೆಳ್ಳಿಕಟ್, ಸದಸ್ಯರಾದ ಮಹಿಬೂಬ್ ಬಾರಿಗಿಡದ, ಹುಸೇನ್ ಅಲಿ, ಹಸನ್ ಕವಾ, ಮುಜಾಕೀರ್ ಹುಸೇನ್ ಹಾಗೂ ಮುಖಂಡ ತಮ್ಮಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.