ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಗವಿಕಲರಿಗೆ ₹10 ಸಾವಿರ ಮಾಸಾಶನ ನೀಡಲಿ: ಜಿ.ಎನ್. ನಾಗರಾಜ

Published 30 ಆಗಸ್ಟ್ 2024, 15:54 IST
Last Updated 30 ಆಗಸ್ಟ್ 2024, 15:54 IST
ಅಕ್ಷರ ಗಾತ್ರ

ರಾಯಚೂರು: ಅಂಗವಿಕಲರಿಗೆ ನೀಡುತ್ತಿರುವ ₹300 ಮಾಸಾಶನದಿಂದ ಜೀವನೋಪಾಯಕ್ಕೆ ಸಾಕಾಗುತ್ತಿಲ್ಲ ಕನಿಷ್ಠ ₹10 ಸಾವಿರ  ಜೀವನ ಭತ್ಯೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ಎನ್. ನಾಗರಾಜ ಒತ್ತಾಯಿಸಿದರು.

 ರಾಜ್ಯದಲ್ಲಿ ಅಂಗವಿಕಲರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. 2013 ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಅಂಗವಿಕಲರ ಮಾಸಾಶನ ಹೆಚ್ಚಳ ಮಾಡಿಲ್ಲ.  2013 ರಲ್ಲಿ ಕೇಂದ್ರ ಬಜೆಟ್ ₹18 ಲಕ್ಷ ಕೋಟಿ ಇತ್ತು ಪ್ರಸಕ್ತ ಸಾಲಿನಲ್ಲಿ ಈಗ ₹48 ಲಕ್ಷ ಕೋಟಿ  ಹೆಚ್ಚಾಗಿದೆ. ಆದರೆ ಅಂಗವಿಕಲರಿಗೆ ಮಾಸಾಶನ ಹೆಚ್ಚಳ ಮಾಡದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. 

2013ರ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಪ್ರಾಣಾಳಿಕೆಯಲ್ಲಿ ಸರ್ಕಾರ ಅಧಿಕಾರಕ್ಕೆ ಬಂದರೆ ಅಂಗವಿಕಲರಿಗೆ ₹5 ಸಾವಿರ ಮಾಸಾಶನ ಹೆಚ್ಚಿಗೆ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಆದರೆ ಭರವಸೆ  ಹುಸಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಂಗವಿಕಲರನ್ನು ಕಡೆಗಣಿಸುತ್ತಿವೆ. ಜನಪ್ರತಿನಿಧಿಗಳ ವೇತನ ಹೆಚ್ಚಾಗಿದೆ ಹೊರತು ಅಂಗವಿಕಲರ ಮಾಸಾಶನ ಹೆಚ್ಚಳವಾಗಿಲ್ಲ ಎಂದರು.

ಕೂಡಲೇ ಪ್ರತಿಯೊಬ್ಬ ಅಂಗವಿಕಲರಿಗೆ ಕನಿಷ್ಠ ₹10 ಸಾವಿರ ಮಾಸಾಶನ ನೀಡಿ. ಉದ್ಯೋಗ ಕಲ್ಪಿಸಬೇಕು.  ಖಾಸಗಿ ಉದ್ಯಮಗಳಲ್ಲಿಯೂ ಕೂಡ ಅಂಗವಿಕಲರ ಮೀಸಲಾತಿ ನೀಡಬೇಕು. ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ವಿಕಲಚೇತನರ ಕುಂದು ಕೊರತೆ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಸಬೇಕು. ಇದುವರೆಗೆ ಸಭೆ ನಡೆಸಿಲ್ಲ ಎಂದು ದೂರಿದರು. 

ಮುಖಂಡರಾದ ಕರಿಯಪ್ಪ ಅಚ್ಚೊಳ್ಳಿ, ಹೊನ್ನಪ್ಪ ಗೂಳಪ್ಪನವರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT