ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರು: ಕೆರೆ ನಿರ್ಮಾಣಕ್ಕಾಗಿ ₹ 30 ಕೋಟಿ ಮಂಜೂರು

Published : 19 ಸೆಪ್ಟೆಂಬರ್ 2024, 15:52 IST
Last Updated : 19 ಸೆಪ್ಟೆಂಬರ್ 2024, 15:52 IST
ಫಾಲೋ ಮಾಡಿ
Comments

ಸಿಂಧನೂರು: 2023-24ನೇ ಸಾಲಿನ ಕೆಕೆಆರ್‌ಡಿಬಿ ಮೈಕ್ರೋ ಅಕ್ಷರ ಆವಿಷ್ಕಾರ ಅನುದಾನದಡಿ ₹ 199.73 ಲಕ್ಷ ವೆಚ್ಚದಲ್ಲಿ ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲಾ ಕಟ್ಟಡ ಹಾಗೂ ಸ್ಮಾರ್ಟ್ ಕ್ಲಾಸ್ ನಿರ್ಮಾಣ, ₹1 ಕೋಟಿ ವೆಚ್ಚದಲ್ಲಿ ಬೂದಿವಾಳ ಗ್ರಾಮದಲ್ಲಿ ಹಾಗೂ ₹1 ಕೋಟಿ ವೆಚ್ಚದಲ್ಲಿ ಮಾಡಶಿರವಾರ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಹಂಪನಗೌಡ ಬಾದರ್ಲಿ ಗುರುವಾರ ಭೂಮಿಪೂಜೆ ನೆರವೇರಿಸಿದರು.

ಮಾಡಶಿರವಾರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಕೆಆರ್‌ಡಿಬಿ ದಶಮಾನೋತ್ಸವ ಪ್ರಯುಕ್ತ ಎರಡು ವರ್ಷಗಳಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕಾಗಿ ಮೈಕ್ರೋ ಯೋಜನೆಯಡಿ ₹ 53 ಕೋಟಿ ಖರ್ಚು ಮಾಡಲಾಗಿದೆ. ಸೆ.17ರಂದು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಂಧನೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ತುರ್ವಿಹಾಳ ಬಳಿ 2ನೇ ಹಂತದ ಕೆರೆ ನಿರ್ಮಾಣಕ್ಕೆ ₹ 30 ಕೋಟಿ ಮಂಜೂರಿಗೆ ಅನುಮೋದನೆ ದೊರೆತಿದೆ’ ಎಂದರು.

ಜವಳಗೇರಾ ಗ್ರಾಮದಲ್ಲಿ ಆರೋಗ್ಯ ಸಮುದಾಯ ಭವನ, 2 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಂಜೂರಿಗೂ ಅನುಮತಿ ದೊರೆತಿದೆ. ಐಎಎಸ್, ಐಪಿಎಸ್, ಕೆಎಎಸ್ ಸ್ಪರ್ಧಾಕಾಂಕ್ಷಿಗಳಿಗೆ ಅಧ್ಯಯನ ಕೇಂದ್ರ ಹಾಗೂ ಡಿಜಿಟಲ್ ಗ್ರಂಥಾಲಯಕ್ಕಾಗಿ ₹ 1 ಕೋಟಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ನಡೆಯುವ ಸಿಂಧನೂರು ದಸರಾ ಉತ್ಸವ ನಿಮಿತ್ತ ನಗರದ ಸುಂದರೀಕರಣ ಹಾಗೂ ದೀಪಾಲಂಕಾರಕ್ಕಾಗಿ ₹ 2.5 ಕೋಟಿ ಅನುದಾನ ಬಿಡುಗಡೆಗೆ ಸರ್ಕಾರ ಆದೇಶಿಸಿದೆ’ ಎಂದು ತಿಳಿಸಿದರು.

ಪಂಚಾಯತ್‍ರಾಜ್ ಎಂಜನಿಯರಿಂಗ್ ಉಪವಿಭಾಗದ ಎಇಇ ಶಿವಪ್ಪ, ಮುಖಂಡರಾದ ಸಿದ್ರಾಮಪ್ಪ ಮಾಡಶಿರವಾರ, ಖಾಜಿಮಲಿಕ್ ವಕೀಲ, ಅಶೋಕ ಉಮಲೂಟಿ, ಮೌಲಪ್ಪ ಮಾಡಶಿರವಾರ ಸೇರಿದಂತೆ ಪಿಡಿಒಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT