ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO | ರಾಯಚೂರಲ್ಲಿ ಎಲೆಕ್ಟ್ರಿಕ್‌ ಬೈಕ್‌ ಬ್ಯಾಟರಿ ಸ್ಪೋಟ: ಹೊತ್ತಿ ಉರಿದ ಅಂಗಡಿ

Published 27 ಮೇ 2024, 10:06 IST
Last Updated 27 ಮೇ 2024, 10:06 IST
ಅಕ್ಷರ ಗಾತ್ರ

ರಾಯಚೂರು: ನಗರದ ಮಹಾವೀರ ವೃತ್ತದಲ್ಲಿರುವ ಗಿಗಾ ಪೈ ಫೈಬರ್‌ ಅಂಗಡಿ ಮುಂದೆ ಎಲೆಕ್ಟ್ರಿಕ್‌ ಬೈಕ್‌ ಬ್ಯಾಟರಿ ಚಾ‌ರ್ಜಿಂಗ್‌ ಮಾಡಲು ನಿಲ್ಲಿಸಿದ್ದಾಗ ಬ್ಯಾಟರಿ ಸ್ಪೋಟಿಸಿ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದೆ. ರಸ್ತೆ ಬದಿಗೆ ನಿಲ್ಲಿಸಿದ್ದ ನಾಲ್ಕು ವಾಹನಗಳು ಜಖಂಗೊಂಡಿವೆ.

ಆರ್‌.ಕೆ.ಭಂಡಾರಿ ಮಾಲೀಕತ್ವದ ಅಂಗಡಿಯಲ್ಲಿ ಅನೇಕ ಎಲೆಕ್ಟ್ರ್ರಿಕ್‌ ಬ್ಯಾಟರಿಗಳು ಇದ್ದವು. ಬೈಕ್‌ನ ಬ್ಯಾಟರಿ ಸ್ಪೋಟಗೊಂಡು ಬೆಂಕಿ ಎರಡನೇ ಅಂತಸ್ತಿಗೆ ಆವರಿಸಿಕೊಂಡು ಎಲೆಕ್ಟ್ರಿಕ್‌ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

ಗಾಯಗೊಂಡ ಒಬ್ಬ ಯುವಕನನ್ನು ರಿಮ್ಸ್‌ಗೆ ದಾಖಲಿಸಲಾಗಿದೆ. ಕಚೇರಿಯಲ್ಲಿ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾರುಕಟ್ಟೆ ಪ್ರದೇಶದಲ್ಲೇ ಈ ಅಂಗಡಿ ಇದೆ. ಪಕ್ಕದಲ್ಲಿ ಅನೇಕ ಬಟ್ಟೆ ಅಂಗಡಿಗಳೂ ಇವೆ. ಅದೃಷ್ಟವಾಶತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು, ಸದರ್‌ ಬಜಾರ್ ‍ಪೊಲೀಸ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT