ರಾಯಚೂರು: ಡಾ.ಬಿ.ಆರ್.ಅಂಬೇಡ್ಕರ್ ವೃತ್ತಿಪರ ಬಾಲಕರ ವಸತಿ ನಿಲಯದಲ್ಲಿನ ಅವ್ಯವಸ್ಥೆಯನ್ನು ಉಲ್ಲೇಖಿಸಿ ‘ಬಾಲಕರ ವಸತಿನಿಯದಲ್ಲಿ ಅನ್ಯರ ವಾಸ್ತವ್ಯ’ ಶೀರ್ಷಿಕೆ ಅಡಿಯಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾದ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿ ಜಿಲ್ಲೆಯ ಇಬ್ಬರು ಅಧಿಕಾರಿಗಳಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ವಸತಿ ನಿಲಯದ ವಾರ್ಡನ್ ಹಾಗೂ ರಾಯಚೂರು ತಾಲ್ಲೂಕು ಸಹಾಯಕ ನಿರ್ದೇಶಕರಿಗೆ ಏಪ್ರಿಲ್ 8ರಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಇಬ್ಬರೂ ಅಧಿಕಾರಿಗಳು ಇಲಾಖೆಯ ಉಪ ನಿರ್ದೇಶಕರಿಗೆ ಲಿಖಿತ ಉತ್ತರ ಕೊಟ್ಟಿದ್ದಾರೆ. ಉಪ ನಿರ್ದೇಶಕರು ವಿವರವಾದ ವರದಿಯನ್ನು ಇಲಾಖೆಯ ಆಯುಕ್ತರಿಗೆ ಕಳಿಸಿದ್ದಾರೆ.

2025ರ ಫೆಬ್ರುವರಿ 27ರಂದು ವಸತಿನಿಲಯಕ್ಕೆ ಭೇಟಿಕೊಟ್ಟು ಅನಧಿಕೃತ ವ್ಯಕ್ತಿಗಳನ್ನು ಹೊರಗೆ ಹಾಕಲಾಗಿದೆ. ವಸತಿನಿಲಯದ ವಿದ್ಯಾರ್ಥಿಗಳು ಕಾಲೇಜಿನ ಸಹಪಾಠಿಗಳನ್ನು ಆಗಾಗ ಊಟಕ್ಕೆ ಕರೆದುಕೊಂಡು ಬರುವುದು ಸಾಮಾನ್ಯ ಎಂದು ಸಹಾಯಕ ನಿರ್ದೇಶಕರು ಉಲ್ಲೇಖಿಸಿದ್ದಾರೆ. ಆದರೆ, ವಾಸ್ತವದಲ್ಲಿ ಹೊರಗಿನ ವ್ಯಕ್ತಿಗಳು ಇಲ್ಲಿಗೆ ಪಾರ್ಟಿ ಮಾಡಲು ಬರುತ್ತಾರೆ. ವಿದ್ಯಾರ್ಥಿಗಳು ಕಾಲೇಜಿಗೆ ಹೋದ ಸಂದರ್ಭದಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾತ್ರಿ 10 ಗಂಟೆಗೆ ಭೇಟಿ ಕೊಟ್ಟರೆ ಅಧಿಕಾರಿಗಳ ಬಣ್ಣ ಬಯಲಾಗುತ್ತದೆ ಎಂದು ಹಾಸ್ಟೆಲ್ ವಿದ್ಯಾರ್ಥಿಗಳು ಹೇಳಿದ್ದಾರೆ.

ವಸತಿನಿಲಯ ವಾಸವಾಗಿರುವ ವ್ಯಕ್ತಿಗಳೇ ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ. ಅವ್ಯವಸ್ಥೆ ವಿರುದ್ಧ ದೂರುಕೊಟ್ಟರೆ ಅಂಥವರನ್ನು ತಡೆದು ಬೆದರಿಕೆ ಹಾಕುವ ಹಾಗೂ ವಾಹನಗಳನ್ನು ಅಡ್ಡಗಡ್ಡಿ ಬೆದರಿಕೆ ಹಾಕುವುದು ಈಗಲೂ ಮುಂದುವರಿದಿದೆ. ಇಲಾಖೆಯ ಆಯುಕ್ತರ ಅನಿರೀಕ್ಷಿತ ಭೇಟಿಕೊಟ್ಟು ಸಮಸ್ಯೆ ಪರಿಹರಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ಪತ್ರಿಕೆಯಲ್ಲಿ ವರದಿ ಪ್ರಕಟವಾದ ಮೇಲೆ ವಿದ್ಯಾರ್ಥಿಗಳ ಮೇಲೆ ಅನಧಿಕೃತ ವ್ಯಕ್ತಿಗಳ ದಬ್ಬಾಳಿಕೆ ಹೆಚ್ಚಾಗಿದೆ. ಐಎಎಸ್ ಶ್ರೇಣಿಯ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಗಳ ಕುಂದುಕೊರತೆ ವಿಚಾರಿಸಿದರೆ ಬಣ್ಣ ಬಯಲಾಗಲಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಹೊರಗಿನ ವಿದ್ಯಾರ್ಥಿಗಳಿಗೆ ಪ್ರವೇಶ ಬೇಡ

‘ಏಪ್ರಿಲ್ 9ರಂದು ವಸತಿ ನಿಲಯಕ್ಕೆ ಭೇಟಿಕೊಟ್ಟು ಪರಿಶೀಲಿಸಿದ್ದೇನೆ. ವಸತಿನಿಲಯಕ್ಕೆ ಹೊರಗಿನ ವ್ಯಕ್ತಿಗಳನ್ನು ಕರೆದುಕೊಂಡು ಬರದಂತೆ ವಿದ್ಯಾರ್ಥಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ’ ಎಂದು ಉಪ ನಿರ್ದೇಶಕರು ಇಲಾಖೆಯ ಆಯುಕ್ತರಿಗೆ ಲಿಖಿತ ವರದಿ ನೀಡಿದ್ದಾರೆ.

‘ವಿದ್ಯಾರ್ಥಿಗಳನ್ನು ವಿಚಾರಿಸಲಾಗಿ ಅನಧಿಕೃತ ವ್ಯಕ್ತಿಗಳಿಂದ ಯಾವುದೇ ರೀತಿಯ ದಬ್ಬಾಳಿಕೆ ನಡೆದಿಲ್ಲ. ಅಹಿತಕರ ಘಟನೆಗಳು ಜರುಗಿಲ್ಲ ಎಂದು ವಿದ್ಯಾರ್ಥಿಗಳೇ ಹೇಳಿಕೆ ಕೊಟ್ಟಿದ್ದಾರೆ. ವಸತಿನಿಲಯದಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ನಿವಾರಿಸುವಂತೆ ವಾರ್ಡನ್ಗೆ ಸೂಚಿಸಲಾಗಿದೆ. ಊಟ, ವಸತಿ ಹಾಗೂ ನೀರಿನ ಸಮಸ್ಯೆಯಾಗಿಲ್ಲ’ ಎಂದು ಆಯುಕ್ತರಿಗೆ ಬರೆದಿರುವ ಪತ್ರದಲ್ಲಿಉಪ ನಿರ್ದೇಶಕರು ಉಲ್ಲೇಖ ಮಾಡಿದ್ದಾರೆ.

‘ವಸತಿನಿಲಯದಲ್ಲಿ ಅವ್ಯವಸ್ಥೆ ಮರುಕಳಿಸಿದರೆ ನಿಯಮಾನುಸಾರು ವಾರ್ಡನ್ ಹಾಗೂ ಸಹಾಯಕ ನಿರ್ದೇಶಕರ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲಾಗುವುದು’ ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ಅಧಿಕಾರಿಗಳ ವರದಿಯಲ್ಲೂ ಲೋಪ

2025ರ ಏಪ್ರಿಲ್ 8ರಂದು ‘ಬಾಲಕರ ವಸತಿನಿಯದಲ್ಲಿ ಅನ್ಯರ ವಾಸ್ತವ್ಯ’ ಶೀರ್ಷಿಕೆ ಅಡಿಯಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ. ಆದರೆ, ರಾಯಚೂರಿನ ಉಪ ನಿರ್ದೇಶಕರು ಇಲಾಖೆಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗೆ ಸಲ್ಲಿಸಿದ ವರದಿಯಲ್ಲಿ ‘ರಾಯಚೂರು ವಸತಿನಿಲಯದಲ್ಲಿ ಅಸಮರ್ಪಕ ನಿರ್ವಹಣೆ’ ಶೀರ್ಷಿಕೆ ಅಡಿಯಲ್ಲಿ ಪ್ರಕಟವಾದ ವರದಿ ಎಂದು ತಪ್ಪಾಗಿ ಉಲ್ಲೇಖಿಸಿ ವರದಿ ಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.