ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕೃಷ್ಣ ಹೇಳಿದ ಮೌಲ್ಯಗಳನ್ನು ಅನುಸರಿಸಿ

ಜಿಲ್ಲಾಡಳಿತದಿಂದ ಶ್ರೀಕೃಷ್ಣ ಜಯಂತಿ ಆಚರಣೆ: ಎಡಿಸಿ ಡಾ.ಕೆ.ಆರ್‌.ದುರುಗೇಶ ಹೇಳಿಕೆ
Last Updated 19 ಆಗಸ್ಟ್ 2022, 15:20 IST
ಅಕ್ಷರ ಗಾತ್ರ

ರಾಯಚೂರು: ಪ್ರಾಮಾಣಿಕತೆ, ಮಾನವೀಯತೆ, ಸತ್ಯ ಸೇರಿದಂತೆ ಇತರರ ಏಳ್ಗೆಗೆ ಸಂತಸ ಅನುಭವಿಸುವುದನ್ನು ಕಲಿಯಬೇಕು. ಶ್ರೀಕೃಷ್ಣ ಹೇಳಿರುವ ಇಂಥ ಅನೇಕ ಮೌಲ್ಯಗಳನ್ನು ಅನುಸರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ಹೇಳಿದರು.

ನಗರದ ಯಾದವ್ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಪ್ರಸ್ತುತ ಸಮಾಜಕ್ಕೆ ಶ್ರೀಕೃಷ್ಣನ ತತ್ವಾದರ್ಶಗಳು ಅಗತ್ಯ. ಶ್ರೀಕೃಷ್ಣ ಲೋಕ ರಕ್ಷಕ ದೇವನಾಗಿ ಮಾನವನಾಗಿ ಮತ್ತೆ ದೈವತ್ವಕ್ಕೇರಿದ ಮಹಾಪುರುಷ. ಸಾಮಾಜಿಕ ನ್ಯಾಯದ ಧರ್ಮದ ತಳಹದಿಯ ಮೇಲೆ ನಿಂತು ಧರ್ಮ ರಕ್ಷಣೆಗೆ ಕಟಿಬದ್ಧವಾಗಿದ್ದವರು ಎಂದು ಹೇಳಿದರು.

ಸದಾ ಸತ್ಯದ ಮಾರ್ಗದಲ್ಲಿ ನಡೆಯುವವರಿಗೆ ಶ್ರೀಕೃಷ್ಣನ ಕೃಪೆ ಇರುತ್ತದೆ. ಕೃಷ್ಣನ ಸಂದೇಶಗಳು ಜೀವನ ಸುಧಾರಣೆಯ ಉಪದೇಶಗಳಾಗಿವೆ. ಸಾರ್ವತ್ರಿಕ ಸತ್ಯವಾದ ಗೀತೋಪದೇಶಗಳು ವಿಶ್ವದಲ್ಲಿಯೇ ತತ್ವಜ್ಞಾನ ಭರಿತವಾಗಿವೆ ಎಂದು ತಿಳಿಸಿದರು.

ಶ್ರೀವಿನಾಯಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ನರಸಪ್ಪ ಯಾದವ್ ಮಾತನಾಡಿ, ತಪ್ಪು ನಡವಳಿಕೆಯಿಂದ ವೈಯಕ್ತಿಕ ಜೀವನಕ್ಕೂ ದೇಶಕ್ಕೂ ಎಂದಿಗೂ ಒಳ್ಳೆಯದಾಗುವುದಿಲ್ಲ. ಆದ್ದರಿಂದ ತಪ್ಪು ಮಾರ್ಗ ಬಿಟ್ಟು ಸತ್ಯ ಮಾರ್ಗದಲ್ಲಿ ನಡೆಯಬೇಕು. ಪ್ರಾಮಾಣಿಕ ಜೀವನ ಎಂಬುವುದು ಕೂಡ

ಪ್ರಸಕ್ತ ಸಂದರ್ಭದಲ್ಲಿ ಸುಲಭವಾಗಿ ಅನುಷ್ಠಾನ ಅಸಾಧ್ಯ ಎಂಬುದು ವಾಸ್ತವಿಕ ಸತ್ಯವಾಗಿದ್ದು, ಕೃಷ್ಣ ಸಂದೇಶಗಳು ಇಂದಿಗೂ ಸಮಾಜಕ್ಕೆ ಅನುಕರಣೀಯ ಎಂದರು.


ನಗರಸಭೆಯ ಅಧ್ಯಕ್ಷೆ ಲಲಿತಾ ಆಂಜನೇಯ ಕಡಗೋಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ವಿ.ನಾಯಕ, ಯಾದವ್ ಸಮಾಜದ ರಾಜ್ಯ ಉಪಾಧ್ಯಕ್ಷ ಮರಿಯಪ್ಪ ವಕೀಲ, ಸಮಾಜದ ಜಿಲ್ಲಾಧ್ಯಕ್ಷ ಕೆ.ಹನುಮಂತಪ್ಪ, ಮುಖಂಡರಾದ ಕೆ.ಶಾಂತಪ್ಪ, ಆಂಜನೇಯ ಕಡಗೋಲ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT