ಸಿಂಧನೂರು: ‘ಅನಾದಿಕಾಲದಿಂದಲೂ ಮನುಕುಲವನ್ನು ಸಾಕಿ-ಸಲುಹಿದ ನಮ್ಮ ಈ ಪರಿಸರವನ್ನು ನಾಶ ಮಾಡುತ್ತಿದ್ದೇವೆ. ಪರಿಸರ ಉಳಿಸಿದರೆ ಮಾತ್ರ ಮನುಕುಲದ ಉಳಿವು ಸಾಧ್ಯ’ ಎಂದು ಪರಿಸರ ವಿದ್ವಾಂಸ ಮತ್ತು ಸತೀಶ್ ಜಾರಕಿಹೊಳಿ ಫೌಂಡೇಷನ್ನ ತಾವರಗೇರಾ ಸ್ಪರ್ಧಾತ್ಮಕ ಕೇಂದ್ರದ ಸಂಪನ್ಮೂಲ ವ್ಯಕ್ತಿ ಡಾ.ಎರ್ರಿಸ್ವಾಮಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕಲಮಂಗಿ ಹಾಗೂ ವೀರಾಪುರ ಗ್ರಾಮಗಳ ಸರ್ಕಾರಿ ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ಗಳ ವತಿಯಿಂದ ‘ವನ ಭೇಟಿ’ ಕಾರ್ಯಕ್ರಮದ ಅಂಗವಾಗಿ ಉಮಲೂಟಿ ಸಮೀಪದ ಸತೀಶ ಜಾರಕಿಹೊಳಿ ಫೌಂಡೇಷನ್ ಅಡಿಯ ನಡೆಯುತ್ತಿರುವ ‘ಬುದ್ಧ ವಿಹಾರ’ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶನಿವಾರ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಶಿಕ್ಷಕ ವೀರೇಶ ಗೋನವಾರ ಮಾತನಾಡಿದರು.

ಕಲಮಂಗಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಮಲ್ಲಪ್ಪ ಬಾದರ್ಲಿ, ವೀರಾಪುರ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಬಸವರಾಜ ಹುಡೇದ, ಶಿಕ್ಷಕರಾದ ರವಿಚಂದ್ರ, ಬಸವರಾಜ ಉಪಸ್ಥಿತರಿದ್ದರು.

ಸಸ್ಯ ಪ್ರಬೇಧಗಳ ಕುರಿತಾದ ಮಾಹಿತಿಯನ್ನು ಕಲಮಂಗಿ ಪ್ರೌಢ ಶಾಲೆಯ ಇಕೋ ಕ್ಲಬ್ ಘಟಕದ ಮಾರ್ಗದರ್ಶಿ ಶಿಕ್ಷಕರು ಹಾಗೂ ವಿಜ್ಞಾನ ಶಿಕ್ಷಕಿ ರೂಪಾ ವಿದ್ಯಾರ್ಥಿಗಳಿಗೆ ಸಸ್ಯಗಳ ಹೆಸರು ಮತ್ತು ಅವುಗಳ ಉಪಯೋಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.