ಸಿರವಾರ: ‘ವಿದ್ಯಾರ್ಥಿಯ ಮನಸ್ಸು ಏನಾನ್ನಾದರೂ ಹೊಸತನ ಸೆಳೆಯುವ ಸ್ಥಿತಿಯಲ್ಲಿದೆ. ಈ ಸಮಯದಲ್ಲಿಯೇ ಪಠ್ಯದ ಜೊತೆಗೆ ಯೋಗ, ಧ್ಯಾನ, ಆಟೋಟಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ’ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆಯ ಕೋಶಾಧಿಕಾರಿ ಅಯ್ಯನಗೌಡ ಏರಡ್ಡಿ ಹೇಳಿದರು.

ಪಟ್ಟಣದ ಬಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯಿಂದ ಶನಿವಾರ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿಕ್ಕ ವಯಸ್ಸಿನಲ್ಲಿ ದುರಾಭ್ಯಾಸಗಳಿಗೆ ದಾಸರಾಗದೇ ಉತ್ತಮ ಆಲೋಚನೆಗಳೊಂದಿಗೆ ನಡೆದ ಅಭ್ಯಾಸದಲ್ಲಿ ಉತ್ತಮ ಅಂಕ ಪಡೆದು ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಶಾಲೆಯ ಮುಖ್ಯಶಿಕ್ಷಕಿ ಗಿರಿಜಾ, ಎಸ್ಡಿಎಂಸಿ ಅಧ್ಯಕ್ಷ ಮಹ್ಮದ್ ರಫಿ, ಶಿಕ್ಷಕರಾದ ವೆಂಕಟೇಶ ರಾಯಚೂರುಕರ್, ಚನ್ನಪ್ಪ, ಮಂಜುಳಾ ದರ್ಶನಕರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ವನಿತಾ, ಸೇವಾಪ್ರತಿನಿಧಿ ಶಾಂತಾ, ಕಲ್ಪನಾ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.