ಶುಕ್ರವಾರ, ಮೇ 27, 2022
28 °C

ಮಂಗಳಮುಖಿಯರು ಆರ್ಥಿಕ ಸಬಲರಾಗಿ: ಮಲ್ಲಿಕಾರ್ಜುನಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮಂಗಳಮುಖಿಯರು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಭಿಯ ಬದುಕನ್ನು ಬಾಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಹೇಳಿದರು.

ನಗರದ ಪಂಡಿತ್‌ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸಂಗಮ ಸಂಸ್ಥೆ ಹಾಗೂ ಆಪ್ತಮಿತ್ರ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯಿಂದ ಲೈಂಗಿಕ ಅಲ್ಪಸಂಖ್ಯಾತರ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸೌಹಾರ್ದ ಸಮುದಾಯದ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೃತೀಯ ಲಿಂಗದವರಿಗಾಗಿ ಜಾರಿಗೆ ತಂದಿರುವ ಸವಲತ್ತುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಪೂರ್ವ ಕಾಲದಿಂದಲೂ ಸಮಾಜದಲ್ಲಿ ತೃತೀಯ ಲಿಂಗದವರಿದ್ದಾರೆ. ಇಂಥವರನ್ನು ಎಲ್ಲರೂ ಗೌರವದಿಂದ ಕಾಣಬೇಕು ಎಂದರು.

ತೃತೀಯ ಲಿಂಗದವರಿಗೆ ಮನೆಯವರು ಮತ್ತು ಸಮಾಜದವರು ಶತ್ರುಗಳಾಗಿರುವುದು ವಿಪರ್ಯಾಸ. ಆದರೆ ತೃತೀಯ ಲಿಂಗದವರಿಗೆ ರಕ್ಷಣೆ ಮಾಡುವ ಹಕ್ಕು ರಾಷ್ಟ್ರ, ರಾಜ್ಯದ ಜವಾಬ್ದಾರಿಯಾಗಿದೆ. ತೃತೀಯ ಲಿಂಗದವರು ಸಮಾಜದಲ್ಲಿ ಗೌರವದಿಂದ ಬದಕಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಅವಿನಾಶ್ ರಾಜೇಂದ್ರ ಮೆನನ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ., ಹಿರಿಯ ಶ್ರೇಣಿ ದಿವಾನಿ ನ್ಯಾಯಾಧೀಶ ಮಹಾಜನ್ ಆರ್.ಎನ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ, ಡಾ.ಸುರೆಂದ್ರ ಬಾಬು, ಚಾಮರಾಜ, ಶ್ರೀವಿದ್ಯಾ ಪಾಟೀಲ, ನಿಶಾ ಗೂಳುರು, ಬಸವರಾಜ ದೊಡ್ಡಪ್ಪ ಸೇರಿದಂತೆ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು