ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ: ಗ್ರಾಮ ದೇವತೆಗೆ ಉಡಿ ತುಂಬುವ ಕಾರ್ಯಕ್ರಮ

Published 24 ಮೇ 2024, 13:42 IST
Last Updated 24 ಮೇ 2024, 13:42 IST
ಅಕ್ಷರ ಗಾತ್ರ

ಕವಿತಾಳ: ಗ್ರಾಮ ದೇವತೆ ದೇವಿ ದೇವಸ್ಥಾನದಲ್ಲಿ ಉಡಿ ತುಂಬುವ ಕಾರ್ಯಕ್ರಮ ಪಟ್ಟಣದಲ್ಲಿ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಮಾಲೀಗೌಡ್ರ ಮನೆಯಿಂದ ಕುಂಭ, ಕಳಸ ಮತ್ತು ಡೊಳ್ಳುಗಳೊಂದಿಗೆ ಮೆರವಣಿಗೆ ಮೂಲಕ ದೇವಿ ದೇವಸ್ಥಾನಕ್ಕೆ ಆಗಮಿಸಲಾಯಿತು. ದೇವಸ್ಥಾನದಲ್ಲಿ ವಿಶೇಷವಾಗಿ ಅಲಂಕರಿಸಿದ್ದ ದೇವಿ ಮೂರ್ತಿಗೆ ಅಭಿಷೇಕ, ಕುಂಕುಮಾರ್ಚನೆ, ಮಹಾ ಮಂಗಳಾರತಿ ಸೇರಿದಂತೆ ವಿಶೇಷ ಪೂಜೆಗಳನ್ನು ಕೈಗೊಂಡ ನಂತರ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಭಕ್ತರು ಕಾಯಿ, ಕರ್ಪೂರ, ನೈವೇದ್ಯ ಸಮರ್ಪಿಸಿ ಪೂಜೆ ಸಲ್ಲಿಸಿದರು.

ಶ್ರೀಶೈಲಪ್ಪ ತಾತ, ಕರಿಯಪ್ಪ ಜಡೆ ಪೂಜಾರಿ, ಶಿವಣ್ಣ ಪೂಜಾರಿ ಹಣಗಿ, ಮುಖಂಡರಾದ ಯಮನಪ್ಪ ದಿನ್ನಿ, ಮಲ್ಲಿಕಾರ್ಜುನ ಗೌಡ, ಶರಣಬಸವ ಹಣಗಿ, ಗಂಗಪ್ಪ ದಿನ್ನಿ, ಮಲ್ಲಪ್ಪ ರೊಟ್ಟಿ, ಓವಣ್ಣ, ಮೌನೇಶ ದಿನ್ನಿ, ಕೃಷ್ಣಮೂರ್ತಿ, ಬನದಪ್ಪಗೌಡ, ಲಕ್ಷ್ಮೀಪತಿ ಯಾದವ ಮತ್ತು ಯಂಕ್ಪಪ ಸೇರಿದಂತೆ ಮಹಿಳೆಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಕವಿತಾಳದಲ್ಲಿ ಶುಕ್ರವಾರ ನಡೆದ ದೇವಿ ದೇವಸ್ಥಾನದಲ್ಲಿ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಕವಿತಾಳದಲ್ಲಿ ಶುಕ್ರವಾರ ನಡೆದ ದೇವಿ ದೇವಸ್ಥಾನದಲ್ಲಿ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT