ಮಂತ್ರಾಲಯ: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ತೀರ್ಥರ 353 ನೇ ಆರಾಧನಾ ಮಹೋತ್ಸವ ಪ್ರಯುಕ್ತ ಆರಂಭವಾಗಿರುವ ಸಪ್ತರಾತ್ರೋತ್ಸವದ ಮೊದಲ ದಿನವಾದ ಭಾನುವಾರ ತಿರುಪತಿ ತಿರುಮಲ ದೇವಸ್ಥಾನದ ಇಒ ಜೆ.ಶ್ಯಾಮಲಾ ರಾವ್ ಅವರು ಟಿಟಿಡಿಯಿಂದ ಮಂತ್ರಾಲಯಕ್ಕೆ ಶ್ರೀವಾರಿ ವಸ್ತ್ರವನ್ನು ತಂದರು.
ಮಠದ ಅಧಿಕಾರಿಗಳು ಮತ್ತು ಪಂಡಿತರು ಅವರನ್ನು ಮಹಾದ್ವಾರದಿಂದ ಮೆರವಣಿಗೆಯಲ್ಲಿ ಬರಮಾಡಿಕೊಂಡರು. ಜೆ.ಶ್ಯಾಮಲಾ ರಾವ್ ಅವರು ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಗೆ ಶ್ರೀವಾರಿ ವಸ್ತ್ರವನ್ನು ಹಸ್ತಾಂತರಿಸಿದರು.
ಟಿಟಿಡಿ ಅಧಿಕಾರಿಗಳು ಮತ್ತು ಪಂಡಿತರಿಗೆ ಮಠದ ಪೂಜ್ಯರು ಶೇಷವಸ್ತ್ರ, ಫಲಮಂತ್ರಾಕ್ಷತೆ ಮತ್ತು ಸ್ಮರಣಿಕೆ ನೀಡಿ ಆಶೀರ್ವದಿಸಿದರು.