ರಾಯಚೂರು: ‘ಸಾಕ್ಷರತೆ ಎಲ್ಲಿ ಇದೆಯೋ ಅಲ್ಲಿ ಅಭಿವೃದ್ದಿ ಇದೆ. ವಿದ್ಯಾವಂತ ಸಮುದಾಯದಿಂದ ಅನಕ್ಷರಸ್ಥರಿಗೆ ಅಕ್ಷರ ಜ್ಞಾನ ನೀಡುವ ಕೆಲಸವಾಗಬೇಕು’ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಟಿ.ರೋಣಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಾರ್ಯಾಲಯದ ಆವರಣದಲ್ಲಿ ನಡೆದ ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ, ಜಿಲ್ಲಾಡಳಿತ ,ಜಿಲ್ಲಾ ಪಂಚಾಯಿತಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಯರಮರಸ್, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ಮಟಮಾರಿ ಗ್ರಾಮ ಪಂಚಾಯತಿ, ಮಟಮಾರಿ ಕೆಪಿಎಸ್ ಪ್ರೌಢ ಶಾಲೆಯ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಯರಮರಸ್ ಡಯಟ್ ಪ್ರಾಂಶುಪಾಲಕಿ ಹಾಗೂ ಹಾಗೂ ಉಪ ನಿರ್ದೇಶಕಿ ಆರ್ ಇಂದಿರಾ ಮಾತನಾಡಿ, ‘ಔಪಚಾರಿಕ ಶಿಕ್ಷಣದಲ್ಲಿ ಮಕ್ಕಳು ಸತತವಾಗಿ ಗೈರು ಹಾಜರಾಗಿತ್ತಿದ್ದು ಅವರನ್ನು ಶಾಲೆಗೆ ಕರೆ ತರಲು ನಾವೆಲ್ಲರು ಶ್ರಮಿಸಬೇಕು ಹಾಗೂ ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವಂತಾಗಬೇಕು’ ಎಂದು ತಿಳಿಸಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಾತನಾಡಿ, ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಿ ಅನಕ್ಷರತೆ ಹೋಗಲಾಡಿಸಲು ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಕಂಕಣಬದ್ಧರಾಗೋಣ ಎಂದು ತಿಳಿಸಿದರು.
ಸಾಕ್ಷರತೆ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ರಾಜ್ಯ ಮಟ್ಟದ ಉತ್ತಮ ಸಾಕ್ಷರತಾ ಸಂಯೋಜಕ ಪ್ರಶಸ್ತಿ ಪುರಸ್ಕೃತ ದಂಡಪ್ಪ ಬಿರಾದಾರ್ ಸಾಕ್ಷರತೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕೋಬ, ಉಪನ್ಯಾಸಕ ಜೀವನ್ ಸಾಬ್, ಅಕ್ಷರ ದಾಸೋಹ ತಾಲ್ಲೂಕು ಅಧಿಕಾರಿ ಶ್ರೀನಿವಾಸ್ ಮರಡ್ಡಿ, ನಿವೃತ್ತ ಶಿಕ್ಷಣಾಧಿಕಾರಿ ಹನುಮಂತಪ್ಪ ಗವಾಯಿ, ತಾಲ್ಲೂಕಿನ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು, ಬಿಆರ್‌ಪಿ ಹಾಗೂ ಸಿಆರ್‌ಪಿ ಉಪಸ್ಥಿತರಿದ್ದರು.
ಎಂ.ಗಿರಿಯಪ್ಪ ದಿನ್ನಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಿಆರ್‌ಪಿ ಸೋಮು ವಂದಿಸಿದರು .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.