ಭಾನುವಾರ, ಜನವರಿ 19, 2020
21 °C

ರಾಯಚೂರು | ಹುಡಾ ಗ್ರಾಮದಲ್ಲಿದೆ ‘ಶ್ರೀಮತಿ ಸನ್ನಿಲಿಯೋನ್ ಯುವಕ ಮಂಡಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ದೇಶ- ವಿದೇಶಗಳಲ್ಲಿ ಪಡ್ಡೆ ಹೈದರ ನಿದ್ದೆಗೆಡಿಸಿದ ಮಾದಕ ಬೆಡಗಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಜಿಲ್ಲೆಯಲ್ಲಿ ಯುವಕ ಮಂಡಳಿಯೊಂದು ಸ್ಥಾಪನೆಯಾಗಿದೆ.

ಸಿಂಧನೂರು ತಾಲ್ಲೂಕು ಹುಡಾ ಗ್ರಾಮದಲ್ಲಿ ‘ಶ್ರೀಮತಿ ಸನ್ನಿಲಿಯೋನ್ ಯುವಕ ಮಂಡಳಿ’ ಫ್ಲೆಕ್ಸ್ ರಾರಾಜಿಸುತ್ತಿದೆ. ಅದರಲ್ಲಿ 13 ಯುವಕರು ಪಂಚೆ ಕಟ್ಟಿಕೊಂಡು ಸಾಲಾಗಿ ನಿಂತುಕೊಂಡ ಚಿತ್ರಗಳಿವೆ. ನಟಿ ಸನ್ನಿ ಲಿಯೋನ್ ಕೆಂಪು ಸೀರೆ ಧರಿಸಿ ನಿಂತಿರುವ  ಚಿತ್ರವನ್ನು ಯುವ ಪದಾಧಿಕಾರಿಗಳ ಪಕ್ಕದಲ್ಲಿ ದೊಡ್ಡದಾಗಿ ಹಾಕಲಾಗಿದೆ.

‘ಶ್ರೀಮತಿ ಸನ್ನಿಲಿಯೋನ್’ ಗೌರವ ಸೂಚಕ ಪದ ಸಂಘದ ಹೆಸರಿನ ಆರಂಭದಲ್ಲಿ ಬಳಸಿದ್ದಲ್ಲದೆ, ಅದಕ್ಕೆ ತಕ್ಕಂತೆ ನಟಿಯ ಚಿತ್ರವನ್ನು ಫ್ಲೆಕ್ಸ್‌ನಲ್ಲಿ ಮುದ್ರಿಸಿರುವುದು ವಿಶೇಷ.

ಗ್ರಾಮದಲ್ಲಿ ಜನವರಿ 10 ರಿಂದ 13 ರ ಅಂಬಾದೇವಿ ರಥೋತ್ಸವ ಹಾಗೂ ಕುಂಬೋತ್ಸವ ಆಯೋಜಿಸಲಾಗಿತ್ತು. ಈ ಜಾತ್ರಾ ಸಂದರ್ಭದಲ್ಲಿ ಹುಟ್ಟಿಕೊಂಡ ಯುವಕ ಸಂಘವು ಫ್ಲೆಕ್ಸ್ ಹಾಕಿಸಿದ್ದು, ಗಮನ ಸೆಳೆಯುವಂತಾಗಿದೆ.


ಸಿಂಧನೂರು ತಾಲ್ಲೂಕು ಹುಡಾ ಗ್ರಾಮದಲ್ಲಿರುವ ‘ಶ್ರೀಮತಿ ಸನ್ನಿಲಿಯೋನ್ ಯುವಕ ಮಂಡಳಿ’ಯ ಫ್ಲೆಕ್ಸ್‌

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು