ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಅಕ್ರಮ ಮಾರಾಟ ತಡೆಗೆ ಆಗ್ರಹ: ಸ್ವಾಮೀಜಿ ಕಾಲ್ನಡಿಗೆ ಜಾಥಾ

Published 16 ಜುಲೈ 2023, 14:34 IST
Last Updated 16 ಜುಲೈ 2023, 14:34 IST
ಅಕ್ಷರ ಗಾತ್ರ

ಹಟ್ಟಿಚಿನ್ನದಗಣಿ: ‘ಗ್ರಾಮಿಣ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ಅಧಿಕಾರಿಗಳು ತಡೆಯಬೇಕು, ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಗೋಲಪಲ್ಲಿ ವಾಲ್ಮೀಕಿ ಆಶ್ರಮದ ವರದಾನೇಶ್ವರ ಮಹಾ ಸ್ವಾಮಿಗಳು ಹೇಳಿದರು.

ಸಮೀಪದ ಚಿಕ್ಕ ಹೆಸರೂರು ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಕ್ರಮ ಮದ್ಯ ಮಾರಾಟ ಹಾಗೂ ಸರ್ಕಾರಿ ಭೂಮಿ ಸಾಗುವಳಿದಾರರಿಗೆ ಪಟ್ಟ ವಿತರಣೆ ಹಾಗೂ ಕಾಲ್ನಡಿಗೆ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಕ್ರಮ ಮಧ್ಯಟದ ಹಿಂದೆ ದೊಡ್ಡ ಜಾಲವೆ ಇದೆ. ಪೊಲೀಸ್ ಇಲಾಖೆ ಅಕ್ರಮ ಮದ್ಯ ಮಾರಾಟ ನಡೆಯುವ ಬಗ್ಗೆ ತಿಳಿದಿದ್ದರು ಕ್ರಮ ಕೈಗೊಳ್ಳದಿರುವುದು ಸೋಜಿಗದ ಸಂಗತಿಯಾಗಿದೆ ಎಂದು ದೂರಿದರು.

ಟಿಯುಸಿಐ ಕರ್ನಾಟಕ ರೈತ ಸಂಘ, ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘ, ಅಖಿಲ ಭಾರತ ಕ್ರಾಂತಿಕಾರಿ ಯುವ ಸಂಘ ಆರ್ ಸಿ ಎಫ್ , ಅಮರ ಜ್ಞಾನ ಪೀಠ ಚಿಕ್ಕ ಹೆಸರೂರು ಜಾಲ್ನಡಿಗೆ ಜಾಥಕ್ಕೆ ಬೆಂಬಲ ಸೂಚಿಸಿದ್ದವು.

ಈ ವೇಳೆ ಕನಕ ಗುರು ಪೀಠದ ಸಿದ್ದರಾಮಾನಂದ ಪುರಿ ಸ್ವಾಮಿಗಳು ಹಾಗೂ ಮುಖಂಡರಾದ, ಮೇಘನಾಥ, ರುಕ್ಮಣಿ, ಆದೇಶ ಚಿಕ್ಕ ಹೆಸರೂರು, ಗುರುರಾಜ ಗೌ ಡೂರು, ಗಂಗಾಧರ ನಾಯಕ, ಚನ್ನಮ್ಮ, ನಿಸರ್ಗ ಎಂ, ಎಂ. ಗಂಗಾಧರ, ಬಸವರಾಜ, ಚಿದಾನಂದ, ಸೋಮಶೇಖರ, ರವಿ ಚುಕನಟ್ಟಿ, ಮಲ್ಲಯ್ಯ, ಸೇರಿದಂತೆ ಸಾರ್ವಜನಿಕರು ಇದ್ದರು.

ಚಿಕ್ಕ ಹೆಸರೂರು ಗ್ರಾಮದಲ್ಲಿ ಅಕ್ರಮ ಮದ್ಯ ಮರಾಟ ಹಾಗೂ ರೈತರಿಗೆ ಪಟ್ಟ ಆದೇಶ ನೀಡುವಂತೆ ಆಗ್ರಹಿಸಿ ವಿವಿದ ಸಂಘಟನೆಗಳು ನಡೆಸಿದ್ದ ಕಾಲ್ನಡಿಗೆ ಜಾಥಕ್ಕೆ ಗೋಲಪಲ್ಲಿ ವಾಲ್ಮೀಕಿ ಆಶ್ರಮದ  ವರದಾನೇಶ್ವರ ಮಹಾ ಸ್ವಾಮಿಗಳು ಜಾಥಕ್ಕೆ ಚಾಲನೆ ನೀಡಿದರು.   
ಚಿಕ್ಕ ಹೆಸರೂರು ಗ್ರಾಮದಲ್ಲಿ ಅಕ್ರಮ ಮದ್ಯ ಮರಾಟ ಹಾಗೂ ರೈತರಿಗೆ ಪಟ್ಟ ಆದೇಶ ನೀಡುವಂತೆ ಆಗ್ರಹಿಸಿ ವಿವಿದ ಸಂಘಟನೆಗಳು ನಡೆಸಿದ್ದ ಕಾಲ್ನಡಿಗೆ ಜಾಥಕ್ಕೆ ಗೋಲಪಲ್ಲಿ ವಾಲ್ಮೀಕಿ ಆಶ್ರಮದ  ವರದಾನೇಶ್ವರ ಮಹಾ ಸ್ವಾಮಿಗಳು ಜಾಥಕ್ಕೆ ಚಾಲನೆ ನೀಡಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT