ಬುಧವಾರ, ಜುಲೈ 28, 2021
20 °C
ಮಕ್ಕಳನ್ನು ಶಾಲೆಯೊಂದಿಗೆ ಸಂಪರ್ಕದಲ್ಲಿಡಲು ನಿರಂತರ ಯತ್ನ

ರಾಯಚೂರು: 56,288 ಮಕ್ಕಳಿಗೆ ಪ‍ಠ್ಯ ಪುಸ್ತಕ

ಬಿ.ಎ.ನಂದಿಕೋಲಮಠ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಈಗಾಗಲೇ ಪಠ್ಯ ಪುಸ್ತಕ, ಸಮವಸ್ತ್ರಗಳು ಬಂದಿವೆ. ಆಯಾ ಶಾಲಾ ಮುಖ್ಯಸ್ಥರಿಗೆ ಮಾಹಿತಿ ನೀಡಿ ಹಂಚಿಕೆ ಮಾಡಲಾಗುತ್ತಿದೆ. ತಾಲ್ಲೂಕಿನ 56,288 ಮಕ್ಕಳ ಪೈಕಿ 6,533 ಮಕ್ಕಳನ್ನು ಹೊರತುಪಡಿಸಿ ಉಳಿದೆಲ್ಲ ಮಕ್ಕಳ ಸಂಖ್ಯೆ ಆಧರಿಸಿ ಸಮವಸ್ತ್ರ ಬಂದಿವೆ.

ಭೌತಿಕವಾಗಿ ಶಾಲೆಗಳು ಆರಂಭಗೊಳ್ಳುವವರೆಗೆ ಮಕ್ಕಳು ನಿರಂತರವಾಗಿ ಶಾಲೆಯೊಂದಿಗೆ ಸಂಪರ್ಕ ಹೊಂದಿರಲು, ರಾಜ್ಯ ಸರ್ಕಾರ ‘ವಿದ್ಯಾಗಮ’ ಮತ್ತು ‘ವರ್ಕ್‌ ಫ್ರಮ್‍ ಹೋಂ’, ‘ಬಿಸಿಯೂಟ ಪಡಿತರ ಹಂಚಿಕೆ’ಯಂತ ವಿಶೇಷ ಕಾರ್ಯಕ್ರಮಗಳು ತಾಲ್ಲೂಕಿನಲ್ಲಿ ಕ್ರಿಯಾಶೀಲವಾಗಿ ನಡೆಯುತ್ತಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅದರಂತೆ, ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಷಯಾಧಾರಿತ ಪಠ್ಯ ಪುಸ್ತಕಗಳು ಈಗಾಗಲೇ ಬಂದಿವೆ. ಮಕ್ಕಳ ಮಾರ್ಗದರ್ಶಿತ ಸ್ವಯಂ ಕಲಿಕೆಯನ್ನು ಪ್ರೇರೇಪಿಸಲು ಪಠ್ಯ ಪುಸ್ತಕಗಳನ್ನು, ಅಭ್ಯಾಸ ಪುಸ್ತಕಗಳನ್ನು ಇತರೆ ಕಲಿಕಾ ಸಾಮಗ್ರಿಗಳನ್ನು ಮಕ್ಕಳ; ಮನೆಗಳಿಗೆ ತಲುಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈಗಾಗಲೇ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರೌಢಶಾಲೆಯ 8, 9, 10ನೇ ತರಗತಿ ಮಕ್ಕಳಿಗೆ ಪಠ್ಯ ಬೋಧನೆ ಕಾರ್ಯ ಆರಂಭಗೊಂಡಿದೆ. ಇದರೊಟ್ಟಿಗೆ ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮ ಆರಂಭಿಸಲು ಸೂಚಿಸಲಾಗಿದೆ. ವಿವಿಧ ಹಂತ ಅಂಶಗಳ ಕಾಲ್ಪನಿಕ ಆಧರಿತ ಬೋಧನೆ, ಕಲಿಕಾ ಸಾಮಗ್ರಿ, ಆಡಿಯೊ, ವಿಡಿಯೊ ಸಿದ್ಧತೆಗೆ ಸೂಚಿಸಲಾಗಿದೆ.

ವರ್ಕ್‌ ಫ್ರಮ್‍ ಹೋಂ ಕೂಡ ಆರಂಭಿಸಿದ್ದು 1 ರಿಂದ 10ನೇ ತರಗತಿ ಶಿಕ್ಷಕರು ಇ ಮೇಲ್‍ ಸೃಷ್ಟಿಸಿಕೊಂಡು, ಬ್ಲಾಗ್‍ ಮೂಲಕ ಘಟಕ ಯೋಜನೆ ಸಿದ್ಧತೆ ಮಾಡಿಕೊಳ್ಳಬೇಕು. ಜುಲೈ 31ರೊಳಗಡೆ ಪಠ್ಯ ಆಧರಿತ ಆಡಿಯೊ, ವಿಡಿಯೊ ಸಿದ್ಧಪಡಿಸಿ ಮೇಲ್‍ ಮೂಲಕ ಅಪಲೋಡ್‍ ಮಾಡುವುದು ಕಡ್ಡಾಯಗೊಳಿಸಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಓಬಣ್ಣ ರಾಠೋಡ ಮಾತನಾಡಿ, ‘ಶಾಲೆಗಳು ಆರಮಭಗೊಳ್ಳುವವರೆಗೆ ಮಕ್ಕಳು ಕಲಿಕೆಯಿಂದ ದೂರ ಉಳಿಯದಿರಲಿ ಎಂದು ಇಲಾಖೆ ಅನುಷ್ಠಾನಕ್ಕೆ ತಂದಿರುವ ಕಾರ್ಯಕ್ರಮ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿದೆ. ಬಿಸಿಯೂಟ ಪಡಿತರ, ಪಠ್ಯಪುಸ್ತಕ, ಸಮವಸ್ತ್ರ ಹಂಚಿಕೆ ಕೂಡ ನಡೆದಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು