ರಾಯಚೂರು: ಹಿಂದುಸ್ತಾನಿ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಗಾಯಕ ಪಂಡಿತ ಅಂಬಯ್ಯ ನುಲಿ ಅವರಿಗೆ ರಾಜ್ಯ ಸರ್ಕಾರ ಕರ್ನಾಟಕ ಸಂಗೀತ ಅಕಾಡೆಮಿ ಪ್ರಶಸ್ತಿ ಘೋಷಣೆ ಮಾಡಿದೆ. ಅವರ ಮೂಲಕ 40 ವರ್ಷಗಳ ಸಂಗೀತ ತಪಸ್ಸಿಗೆ ಕೊನೆಗೂ ಫಲ ಸಿಕ್ಕಿದೆ.

ರಾಯಚೂರು ನಗರದ ಅನತಿ ದೂರದಲ್ಲಿರುವ ಹೊಸೂರು ಗ್ರಾಮದ ಅಂಬಯ್ಯ ನುಲಿ ಅವರು ಶರಣರ ವಚನಗಳು, ದಾಸರ ಕೀರ್ತನೆಗಳು ಹಾಗೂ ಭಾವಗೀತೆಗಳನ್ನು ಅವರ ಕಂಠಸಿರಿಯಿಂದ ಕೇಳುತ್ತಿದ್ದರೆ ಕೇಳುಗರು ಮಂತ್ರಮುಗ್ದರಾಗುತ್ತಾರೆ.

ಕುಟುಂಬವೇ ಸಂಗೀತ ಶಾಲೆ: ಅಂಬಯ್ಯ ನುಲಿ ಸುಗಮ ಸಂಗೀತ ಕ್ಷೇತ್ರದ ಮೇರುಸದೃಶ ಪ್ರತಿಭೆ, ರಾಯಚೂರು ನಗರ ಸಮೀಪದ ಹೊಸೂರು ಗ್ರಾಮದಲ್ಲಿ 1956ರಲ್ಲಿ ಜನಿಸಿದ ಅಂಬಯ್ಯ ಅವರ ಪರಿವಾರವೇ ಇವರಿಗೆ ಸಂಗೀತಶಾಲೆ. ನಾದೊಲುಮೆ ಹುಟ್ಟಿನಿಂದಲೇ ಬಳುವಳಿ ಬಂದಿದೆ. ಶಾಲಾ ಶಿಕ್ಷಕನಾಗಿ ವೃತ್ತಿ ಬದುಕು ಸಂಪನ್ನಗೊಳಿಸಿ, ಶರಣರ ವಚನ, ದಾಸರ ಕೀರ್ತನೆ, ಭಾವಗೀತೆಗಳ ಗಾಯನದಲ್ಲಿ ಸದಾ ತನ್ಮಯರಾಗಿ ಅದ್ಭುತ ಕಂಠಸಿರಿಯ ಅನನ್ಯ ಗಾಯರಲ್ಲಿ ಒಬ್ಬರಾಗಿದ್ದಾರೆ.

ಅಮೆರಿಕದ ಅಕ್ಕ ಸಮ್ಮೇಳನ, ದುಬೈನ ಉತ್ಸವ, ವಿಶ್ವಕನ್ನಡ ಸಮ್ಮೇಳನ, ದಸರಾ ಉತ್ಸವ, ಹಂಪಿ ಉತ್ಸವ ಮುಂತಾದ ದೇಶ-ವಿದೇಶಗಳ ಸಂಗೀತೋತ್ಸವಗಳಲ್ಲಿ ಹಾಡಿ ಗಮನ ಸೆಳೆದಿದ್ದಾರೆ.

ಅಂಬಯ್ಯ ನುಲಿ ಅವರಿಗೆ ಸಂಗೀತ ಕರಗತವಾಗಿದೆ. ಅವರ ತಾತ ಮಹಾದೇವಯ್ಯ ನುಲಿ ತತ್ವಪದ ಗಾಯಕರು ಆಗಿದ್ದರು. ಅವರ ತಂದೆ ಮಹಾದೇವಯ್ಯ ನುಲಿ ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಸಂಗೀತ ನಿರ್ದೇಶಕ ಹಾಗೂ ಗಾಯಕರಾಗಿದ್ದು, ಅವರ ತಾಯಿ ಶರಣಮ್ಮ ಅವರೂ ತತ್ವಪದ ಗಾಯಕರಾಗಿದ್ದರು.

ಆಕಾಶವಾಣಿಯಿಂದ ‘ಎ ಗ್ರೇಡ್’: ಅಂಬಯ್ಯ ನುಲಿ ಕಂಠಸಿರಿಯಿಂದ ಅನೇಕ ಆಡಿಯೊ ಕ್ಯಾಸೆಟ್ ಹಾಗೂ 190ಕ್ಕೂ ಹೆಚ್ಚು ಧ್ವನಿ ಸುರುಳಿಗಳು ಹಾಗೂ 15,00 ಕ್ಕೂ ಹೆಚ್ಚು ಗೀತೆಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಇವರು ಹವ್ಯಾಸಿ ರಂಗಭೂಮಿಗೆ ಗೀತೆ ರಚನೆ, ಗಾಯನ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನೇಕ ಟಿ.ವಿ ಧಾರವಾಹಿಗಳಿಗೆ ಶೀರ್ಷಿಕೆ ಗೀತೆ ಹಾಡಿದ್ದಾರೆ. ಟಿ.ವಿ ಶೋಗಳಾದ ‘ಸ್ಟಾರ್ ಸಿಂಗರ್, ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮಗಳ ತೀರ್ಪುಗಾರರಾಗಿ ಸಂಗೀತ ದಿಗ್ಗಜ ಎಸ್ ಪಿ ಬಾಲಸುಬ್ರಮಣ್ಯಂ ನಂತಹ ದಿಗ್ಗಜರ ಜೊತೆ ವೇದಿಕೆ ಹಂಚಿಕೊಂಡಿದ್ದಲ್ಲದೇ ಜನಮನ ಗೆದ್ದಿದ್ದಾರೆ.

ಪ್ರಶಸ್ತಿಗಳು: ರಾಜ್ಯ ಸರ್ಕಾರ ನೀಡುವ ಉತ್ತಮ ಶಿಕ್ಷಕ ಪ್ರಶಸ್ತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ನೀಡುವ ರಮಣಶ್ರೀ ಪ್ರಶಸ್ತಿ, ಹೊಂಬಾಳೆ ಪ್ರತಿಭಾರಂಗ ನೀಡಿದ ಸ್ವರಮಂದಾರ ಪ್ರಶಸ್ತಿ, ಗಾನ ಕೋಗಿಲೆ ಪ್ರಶಸ್ತಿ, ಅಥಣಿ ಮೊಟ್ಟಗಿ ಮಠದ ಚನ್ನಬಸವದೇವರು ನೀಡಿದ ಸಮಾಜಸೇವಾ ರತ್ನ ಪ್ರಶಸ್ತಿ , ಮೆಘಮಲ್ಲಾರ ಪ್ರಶಸ್ತಿ, ಶರಣ ಸತ್ಯಪ್ಪ ಪ್ರಶಸ್ತಿ, ಮಧುರ ಗಾಯನ ಮಂದಾರ ಪ್ರಶಸ್ತಿ, ಭಾವನ ಪ್ರಶಸ್ತಿ, ವಿಜಯ ವಿಠಲ ಪ್ರಶಸ್ತಿ, ಆದರ್ಶ ಶಿಕ್ಷಕ ಪ್ರಶಸ್ತಿ ಹಾಗೂ ಹೊಸೂರು ರಾಮಸ್ವಾಮಿ ದತ್ತಿ ಪ್ರಶಸ್ತಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.