ಹಟ್ಟಿ ಚಿನ್ನದ ಗಣಿ: ‘ಇಲ್ಲಿನ ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ಕ್ರೈಸ್ತ ಮಿಷನರಿಗಳ ಪಾತ್ರ ಅಪಾರವಾದದ್ದು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಲಿಂಗರಾಜ ಹೇಳಿದರು.

ಪಟ್ಟಣದ ಸಂತ ಅನ್ನಮ್ಮನ ಶಾಲೆಯಲ್ಲಿ ಆಯೋಜಿಸಿದ್ದ ಕ್ರಿಸ್ಮಸ್ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,‘ಬಾಸೆಲ್ ಮಿಷನ್' ಸಂಸ್ಥೆ ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿತು. ಹಿಂದುಳಿದವರು, ದಲಿತರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಉಚಿತ ಶಿಕ್ಷಣವನ್ನು ನೀಡಲು ಆರಂಭಿಸಿತು. ನಂತರ ದಕ್ಷಿಣ ಕನ್ನಡದಲ್ಲಿ ಬಡವರಿಗಾಗಿ ಕಾರ್ಖಾನೆಗಳನ್ನು ಸ್ಥಾಪಿಸಿ ಉದ್ಯೋಗಗಳನ್ನು ನೀಡಿತು’ ಎಂದರು.

‘ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಈ ಶಾಲೆ ಸಮಾಜಕ್ಕೆ ಮಾದರಿಯಾಗುವ ಪ್ರತಿಭೆಗಳನ್ನು ನೀಡಿದೆ. ಈ ಶಾಲೆಯಲ್ಲಿ ಕಲಿತ ಸಹಸ್ರ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಹೊಂದಿದ್ದಾರೆ. ಜಗತ್ತಿಗೆ ಶಾಂತಿ, ಸಮತೆಯನ್ಮು ಭೋದಿಸಿದ ಯೇಸುಕ್ರಿಸ್ತರನ್ನು ನಾವೆಲ್ಲರೂ ಮಾದರಿಯಾಗಿಸಿಕೊಂಡು ಮುನ್ನಡೆಯೋಣ, ಶಾಂತಿ-ಸಹಬಾಳ್ವೆಯಿಂದ ಎಲ್ಲರನ್ನು ಪ್ರೀತಿಸುತ್ತ, ಕ್ರಿಸ್ಮಸ್ ಹಬ್ಬವನ್ನು ಆಚರಿಸೋಣ’ ಎಂದು ತಿಳಿಸಿದರು.

ಈ ವೇಳೆ ಸಿಸ್ಟರ್ ಐರಿನ್ ಕ್ರಾಸ್ತಾ, ಫಾದರ್ ಫಿಲಿಪ್, ಸಿ.ಆರ್.ಸಿ. ಚಂದ್ರಶೇಖರ, ಪಟ್ಟಣ ಪಂಚಾಯಿತಿ ಸದಸ್ಯ ಈಗ್ನೇಶ್ ಗೌಡ ಮೇಟಿ, ಡಾ. ಅರ್ಷದ್, ಶಾಲಾ ಸಂಚಾಲಕಿ ಸಿಸ್ಟರ್ ಮ್ಯಾಗ್ಲಿನ್ ಗೊಮ್ಸ್, ಸಿಸ್ಟೆರ್ ಸೀಲ್ವಿಯ ಪಿಂಟೋ, ಸಿಸ್ಟೆರ್ ಸಂಗೀತಾ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಇದ್ದರು. ಸಹ ಶಿಕ್ಷಕಿಯರಾದ ನಾಝಿಯ, ಹೀನಾ, ಅನಿತಾ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.