ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳು ಲೈಲಾ ಅಲ್ಲಾ, ನಾನು ಮಜ್ನು ಅಲ್ಲಾ: ಚಿತ್ರ ಬಿಡುಗಡೆ

Published 5 ಸೆಪ್ಟೆಂಬರ್ 2023, 14:12 IST
Last Updated 5 ಸೆಪ್ಟೆಂಬರ್ 2023, 14:12 IST
ಅಕ್ಷರ ಗಾತ್ರ

ರಾಯಚೂರು: ‘ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಿತ್ರೀಕರಣಗೊಂಡಿರುವ ‘ಅವಳು ಲೈಲಾ ಅಲ್ಲಾ, ನಾನು ಮಜ್ನು ಅಲ್ಲಾ’ ಚಲನಚಿತ್ರ ಸೆಪ್ಟೆಂಬರ್ 8ರಂದು ರಾಜ್ಯದಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಪ್ರೇಕ್ಷಕರು ಚಲನಚಿತ್ರ ವೀಕ್ಷಿಸುವ ಮೂಲಕ ಬಿಸಿಲನಾಡಿನ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು’ ಎಂದು ರಂಗ ನಿರ್ದೇಶಕ ಡಿಂಗ್ರಿ ನರೇಶ್ ಮನವಿ ಮಾಡಿದರು.

‘ಯಲ್ಲು ಪುಣ್ಯಕೋಟಿ ಅವರ ಕಥೆಯನ್ನು ಅಜಯ ನಿರ್ಮಿಸಿದ್ದು, ಅಜಯಕುಮಾರ ನಿರ್ದೇಶಿಸಿದ್ದಾರೆ. ನಿಹಾರಿಕಾ, ಅಶ್ವಿನಿ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ಸಿಂಧನೂರು ತಾಲ್ಲೂಕಿನ ಗಾಂಧಿನಗರ, ಆನೆಗೊಂದಿ, ಹೊಸಪೇಟೆ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿಯಲ್ಲಿ ಹೆಚ್ಚು ಚಿತ್ರೀಕರಣಗೊಂಡಿದೆ’ ಎಂದು ನಗರದಲ್ಲಿ ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

‘ಚಿತ್ರದಲ್ಲಿ ಒಟ್ಟು ಐದು ಹಾಡುಗಳ ಪೈಕಿ ನಾಲ್ಕು ಹಾಡುಗಳಿಗೆ ಕೌಶಿಕ ಅವರ ಸಂಗೀತ ನಿರ್ದೇಶನ, ದೇಸಿ ಸೊಗಡು ಇದೆ. ಅವಳು ಲೈಲಾ ಅಲ್ಲಾ, ನಾನು ಮಜ್ನು ಅಲ್ಲಾ ಎನ್ನುವುದು ಚಿತ್ರದ ಶೀರ್ಷಿಕೆಯಾಗಿರುವ ಕಾರಣ ವಾಸ್ತವದಲ್ಲಿ ಚಿತ್ರದಲ್ಲಿ ಏನಿದೆ ಎನ್ನವುದೇ ಕುತೂಹಲ’ ಎಂದು ಹೇಳಿದರು.

‘ಇಬ್ಬರು ಪ್ರೇಮಿಗಳು ಪ್ರೇಮ ಸುಖಾಂತ್ಯ ಅಥವಾ ದುರಂತ ಕಾಣುತ್ತದೆಯೋ ಎನ್ನುವುದು ಚಿತ್ರ ನೋಡಿದ ಮೇಲೆಯೇ ಗೊತ್ತಾಗುತ್ತದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕುವ ವಿಶ್ವಾಸವೂ ಇದೆ’ ಎಂದು ತಿಳಿಸಿದರು.

ಸಾಯಿ ಮಂದಿರ ಸಂಸ್ಥಾಪಕ ಸಾಯಿಕಿರಣ್ ಅಧೋನಿ, ನಟ, ನಿರ್ದೇಶಕ ಮಿಸ್ಟರ್‌ ರಾಮಾಚಾರಿ, ಸಮಾಜ ಸೇವಕ ಸಾಧಿಕ್, ಕ್ರಿಯೆಟಿವ್‌ ಮೈಂಡ್ಸ್ ಅಧ್ಯಕ್ಷ ಉದಯ್ ಅರೋಲಿಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT