ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ: ಕಾಯಂ ಪ್ರಾಚಾರ್ಯರ ಹುದ್ದೆ 15 ವರ್ಷಗಳಿಂದ ಖಾಲಿ

ಉಪನ್ಯಾಸಕರ ವರ್ಗಾವಣೆ, ಸದ್ಯ ಅತಿಥಿ ಉಪನ್ಯಾಸಕರೆ ಆಸರೆ
ಮಂಜುನಾಥ ಎನ್‌.ಬಳ್ಳಾರಿ
Published : 2 ಅಕ್ಟೋಬರ್ 2024, 5:14 IST
Last Updated : 2 ಅಕ್ಟೋಬರ್ 2024, 5:14 IST
ಫಾಲೋ ಮಾಡಿ
Comments

ಕವಿತಾಳ: ಕರ್ನಾಟಕ ಪಬ್ಲಿಕ್‌ ಶಾಲೆಯಾಗಿ ಮೇಲ್ದರ್ಜೆಗೇರಿದ ಬೆನ್ನಲ್ಲೇ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ಪ್ರಭಾರ ಪ್ರಾಚಾರ್ಯೆ, ಉಪನ್ಯಾಸಕರು ಮತ್ತು ಪ್ರಥಮ ದರ್ಜೆ ಸಹಾಯಕ ವರ್ಗಾವಣೆಯಾಗಿದ್ದು, ಸದ್ಯ ಅತಿಥಿ ಉಪನ್ಯಾಸಕರು ಆಸರೆಯಾಗಿದ್ದಾರೆ.

ಬಹುತೇಕ ಬಡ, ಮಧ್ಯಮ ವರ್ಗದ ಮಕ್ಕಳು ಮತ್ತು ಬೇರೆ ಊರುಗಳಿಗೆ ಮಕ್ಕಳನ್ನು ಕಳುಹಿಸಲು ಇಚ್ಛಸದ ಪಾಲಕರಿಗೆ ಹತ್ತನೇ ತರಗತಿಯ ನಂತರ ಮುಂದಿನ ವಿದ್ಯಾಭ್ಯಾಸ ಕೈಗೊಳ್ಳಲು ಇರುವುದು ಇದೊಂದು ಕಾಲೇಜು ಮಾತ್ರ.

ಪ್ರಸ್ತುತ ಕಲಾ ವಿಭಾಗದ ಪ್ರಥಮ ವರ್ಷದಲ್ಲಿ 100, ದ್ವಿತೀಯ ವರ್ಷದಲ್ಲಿ 76 ಮತ್ತು ವಾಣಿಜ್ಯ ವಿಭಾಗದ ಪ್ರಥಮ ವರ್ಷದಲ್ಲಿ 28 ಹಾಗೂ ದ್ವಿತೀಯ ವರ್ಷದಲ್ಲಿ 24 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಒಟ್ಟು 228 ವಿದ್ಯಾರ್ಥಿಗಳಲ್ಲಿ 154 ಯುವತಿಯರು ಕಲಿಯುತ್ತಿದ್ದಾರೆ.

ಪ್ರಾಚಾರ್ಯ, ಏಳು ಜನ ಉಪನ್ಯಾಸಕರು ಮತ್ತು ಒಬ್ಬ ಪ್ರಥಮ ದರ್ಜೆ ಸಹಾಯಕ ಹುದ್ದೆ ಮಂಜೂರಾತಿ ಇದೆ. ಕಾಯಂ ಪ್ರಾಚಾರ್ಯ ಹುದ್ದೆ ದಶಕಗಳಿಂದ ಖಾಲಿಯಿದ್ದು, ಪ್ರಭಾರ ಪ್ರಚಾರ್ಯರು ಸೇರಿದಂತೆ ಮೂವರು ಉಪನ್ಯಾಸಕರು, ಪ್ರಥಮ ದರ್ಜೆ ಸಹಾಯಕ ಈಚೆಗೆ ವರ್ಗಾವಣೆಯಾಗಿದ್ದಾರೆ.

ಒಬ್ಬ ಉಪನ್ಯಾಸಕಿ ಇಲ್ಲಿಗೆ ವರ್ಗವಾಗಿ ಬಂದಿದ್ದಾರೆ ಮತ್ತು ನಾಲ್ವರು ಅತಿಥಿ ಉಪನ್ಯಾಸಕರ ನೇಮಕ ಮಾಡಲಾಗಿದೆ. ಎಫ್‌ಡಿಸಿ ಇಲ್ಲದ ಕಾರಣ ಆಡಳಿತಾತ್ಮಕ ಸಮಸ್ಯೆ ಉಂಟಾಗಿದ್ದು ದಾಖಲೆಗಳ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿ, ವರ್ಗಾವಣೆ ಪ್ರಮಾಣಪತ್ರ ಮತ್ತಿತರ ದಾಖಲೆಗಳನ್ನು ನೀಡುವುದು ಸೇರಿದಂತೆ ಕಚೇರಿ ಕೆಲಸಗಳು ಉಪನ್ಯಾಸಕರ ಹೆಗಲೇರಿವೆ.

ವಿದ್ಯಾರ್ಥಿಗಳಿಗೆ ದಾಖಲೆ ನೀಡುವುದು ವಿದ್ಯಾರ್ಥಿ ವೇತನ ಮತ್ತಿತರ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವುದು ಸೇರಿದಂತೆ ಕಚೇರಿ ನಿರ್ವಹಣೆಗೆ ಪ್ರಥಮ ದರ್ಜೆ ಸಹಾಯಕರ ತುರ್ತು ಅಗತ್ಯವಿದೆ
ಮಹಾಂತಮ್ಮ ಪ್ರಭಾರ ಪ್ರಾಚಾರ್ಯೆ ಸರ್ಕಾರಿ ಪಿಯು ಕಾಲೇಜು ಕವಿತಾಳ
ಇಲ್ಲಿ ಕಲಿಯುತ್ತಿರುವ ಮಧ್ಯಮ ವರ್ಗದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದ ರೀತಿಯಲ್ಲಿ ಕಾಯಂ ಉಪನ್ಯಾಸಕರನ್ನು ನೇಮಿಸಲು ಅಧಿಕಾರಿಗಳು ಮುಂದಾಗಬೇಕು
ಮೌನೇಶ ಹಿರೇಕುರಬರ ಪಾಲಕ ಕವಿತಾಳ
ಸದ್ಯ ಇಲ್ಲಿಗೆ ಯಾರೂ ವರ್ಗವಾಗಿ ಬರುತ್ತಿಲ್ಲ. ಅತಿಥಿ ಉಪನ್ಯಾಸಕರನ್ನು ನೇಮಿಸಿದ್ದು ಮಕ್ಕಳ ಕಲಿಕೆಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ವಹಿಸಲಾಗುವುದು
ಜಯರಾಮಯ್ಯ ಡಿಡಿಪಿಯು ರಾಯಚೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT