ರಾಯಚೂರು: ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಮತ್ತು ವಿಜಯನಗರ ಶಾಸಕ ಆನಂದ್ ಸಿಂಗ್ ಅವರ ಹೆಸರಿನಲ್ಲಿ ನಗರದ ಹಲವು ಮಸೀದಿಗಳಿಗೆ ಬೆದರಿಕೆ ಪತ್ರಗಳು ಬಂದಿದ್ದು, ಇದರಿಂದ ಕ್ರೋಧಗೊಂಡ ಮುಸ್ಲಿಮರು ನಗರದಪಶ್ಚಿಮ ಪೊಲೀಸ್ ಠಾಣೆಗೆ ಶುಕ್ರವಾರ ಆಗಮಿಸಿ ಪತ್ರ ಬರೆದಿರುವ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರು
ಸಲ್ಲಿಸಿದ್ದಾರೆ.
ಉರ್ದು ಭಾಷಾರ್ಥವಿರುವ ಕನ್ನಡದ ಅಕ್ಷರದಲ್ಲಿ ಟೈಪ್ ಮಾಡಿರುವ ಪತ್ರಗಳಿದ್ದು, ಮುಸ್ಲಿಮರನ್ನು ಕೆರಳಿಸುವ ರೀತಿಯಲ್ಲಿವೆ.'ಇದು ದುಷ್ಕರ್ಮಿಗಳ ಕೃತ್ಯ ಎನ್ನುವ ಸಂಶಯವಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಪತ್ರಗಳನ್ನು ಹಸ್ತಾಂತರಿಸಲಾಗಿದೆ'ಎಂದು ಮುಸ್ಲಿಂ ನಾಯಕರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, 'ಸಿಎಎ ಪರವಾಗಿ ಹಾಗೂ ಮುಸ್ಲಿಮರ ವಿರುದ್ಧವಾಗಿ ಪತ್ರ ಬರೆಯಲಾಗಿದೆ ಎಂದು ಮುಖಂಡರು ದೂರು ಅರ್ಜಿ ನೀಡಿದ್ದಾರೆ.
ಇನ್ನಷ್ಟು ಪತ್ರಗಳು ಬಂದಿವೆ ಎಂದು ಹೇಳಿದ್ದು, ಎಲ್ಲವನ್ನುಪರಿಗಣಿಸಿ ದುಷ್ಕರ್ಮಿಗಳನ್ನು ಪತ್ತೆ ಮಾಡಲಾಗುವುದು' ಎಂದು ಅವರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.