ರಾಯಚೂರು: ಯುವಕವಿಗಳು ಯಾವ ಪಂಥದಲ್ಲೂ ಗುರುತಿಸಿಕೊಳ್ಳದೆ ಸಮಾಜದ ಒಳಿತಿಗಾಗಿ ಕವಿತೆಗಳನ್ನು ರಚಿಸಬೇಕು ಎಂದು ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ತಾಯರಾಜ್ ಮರ್ಚಟಾಳ್ ಹೇಳಿದರು.

ಇಲ್ಲಿನ ಮಹಿಳಾ ಸಮಾಜದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಅಂಗವಾಗಿ ಏರ್ಪಡಿಸಿದ್ದ ಯುವ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿಗೆ ಯುವಕರಲ್ಲಿ ಸಾಹಿತ್ಯ ಹವ್ಯಾಸ ಕಡಿಮೆ ಆಗುತ್ತಿದೆ. ಅದನ್ನ ಬದಲಿಸಿ ಯುವ ಸಮೂಹ ಓದುವ ಹವ್ಯಾಸವನ್ನು ರೂಢಿಸಿಕೊಂಡರೆ ನಮ್ಮಲ್ಲಿರುವ ಜ್ಞಾನ ಹೆಚ್ಚುತ್ತದೆ. ಜತೆಗೆ ದಿನ ನಿತ್ಯ ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಓದುವುದರಿಂದ ಪ್ರಚಲಿತ ವಿದ್ಯಮಾನ ತಿಳಿಯ ಬಹುದು. ಜತೆಗೆ ಕವಿಗಳು ಆಗುಹೋಗುಗಳ ಬಗ್ಗೆ ಕವಿತೆ ಮೂಲಕ ತಿಳಿಸಬೇಕು ಎಂದರು.

ಕವಿತೆಗೆ ತನ್ನದೇ ಅದ ಶೈಲಿ ಇದೆ. ಕವಿ ಬಿಟ್ಟು ಕಾವ್ಯ ಇಲ್ಲ, ಕಾವ್ಯಬಿಟ್ಟು ಕವಿ ಇಲ್ಲ. ವರ್ತಮಾನದಲ್ಲಿನ ವಿಚಾರಗಳ ಬಗ್ಗೆ ಯುವಕರು ತಿಳಿದುಕೊಂಡು ಅಧ್ಯಯನ ಮಾಡಬೇಕು. ಯುವಕರು ಈ ದೇಶದ ಆಸ್ತಿ, ಮನಸ್ಸು ಮಾಡಿದರೆ ದೇಶ ಹಾಗೂ ಸಮಾಜವನ್ನು ಅಭಿವೃದ್ಧಿ ಮಾಡಬಹುದು ಎಂದು ಆಶಯ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಚನ್ನಬಸವ ಹಿರೇಮಠ ಮಾತನಾಡಿ, ಸುಮಾರು 40 ವರ್ಷಗಳ ಹಿಂದೆ ಧಾರವಾಡ ಪರಿಸರದಲ್ಲಿ ಒಂದು ಮಾತು ಚಲಾವಣೆಯಲ್ಲಿತ್ತು. ನಮ್ಮ ಕವಿಗಳಿಗೆ ಶೈಕ್ಷಣಿಕವಾಗಿ ಬೆಳವಣಿಗೆ ಯಾವ ಅಂತಹಕ್ಕೆ ಹೋಗಿದೆ ಎಂಬುದು ಕಣ್ಮುಂದೆ ತರುತ್ತದೆ. ತುಳಿತಕ್ಕೆ ಒಳಗಾದವರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಯುವಕರಿಗೆ ಬಹಳಷ್ಟು ಅವಕಾಶವಿದ್ದು. ಕಣ್ಣುಮುಂದೆ ನಡೆಯುವ ನಮ್ಮ ನೆಲದ ವಿಷಯಗಳನ್ನು ತಿಳಿಸಬೇಕು. ಕವಿತೆಗಳನ್ನು ಮನಸುಗಳನ್ನು ರಂಜಿಸುವ ಕವಿತೆ ಆಗಬಾರದು. ಜೊತೆಗೆ ಹೃದಯ ಆಪ್ತವಾಗಿ ಬರೆಯಬಾರದು. ಸಮಾಜವನ್ನು ಸರಿ ದಾರಿಗೆ ತರುವಂಥ ಕವಿತೆಗಳನ್ನು ಯುವಕರು ರೂಪಿಸಬೇಕು ಎಂದು ಯುವ ಕವಿಗಳಿಗೆ ನಿರ್ದೇಶಿಸಿದರು.

ಕವನ ಕಾವ್ಯವಾಗಿ ಪರಿವರ್ತನೆ ಹೊಂದಾಬೇಕು. ಯುವ ಕವಿಗಳು ಬರಹದ ಮೂಲಕ ಜೀವಂತಿಕೆ ತುಂಬಬೇಕು. ಪ್ರತಿ ಕಾಲ ಘಟ್ಟದಲ್ಲಿ ಕವಿತೆ ಬದಲಾವಣೆ ಆಗುತ್ತಿದೆ. ನೈಜ ಘಟನೆಗಳ ಬಗ್ಗೆ ರಚಿಸಬೇಕು ಎಂದರು.

ಆಕಾಶವಾಣಿ ಮುಖ್ಯಸ್ಥ ವೆಂಕಟೇಶ ಬೇವಿನಬೆಂಚಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.

ತಹಶೀಲ್ದಾರ್ ಗ್ರೇಡ್-2 ಪರಶುರಾಮ, ವಾರ್ತಾ ಇಲಾಖೆ ಅಧಿಕಾರಿ ಗವಿಸಿದ್ದಪ್ಪ ಹೊಸಮನಿ, ಕನ್ನಡ ಸಾಹಿತ್ಯ ಪರಿಷತ್ತಿನ ಲಿಂಗಸುಗೂರು ತಾಲ್ಲೂಕು ಘಟಕದ ಅಧ್ಯಕ್ಷ ಮಹದೇವಪ್ಪ ನಾಗರಾಳ, ಕನ್ನಡ ಸಾಹಿತ್ಯ ಪರಿಷತ್ತು ಮಾನ್ವಿ ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸವ ನೀರಮಾನ್ವಿ, ಕಥೆಗಾರ ಕಲಿಗಣನಾಥ ಗುಡದೂರ, ಕವಿಗಳಾದ ಶಿವರಾಜ ಬೆಟ್ಟದೂರ ಹಾಗೂ ಯುವ ಕವಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.