ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳ ಭವಿಷ್ಯದ ಬಗ್ಗೆ ಪಾಲಕರ ಆತಂಕ

ಕವಿತಾಳದ ವಿವಿಧ ಶಾಲೆಗಳ 10 ಜನ ಶಿಕ್ಷಕರು ವರ್ಗಾವಣೆ
ಮಂಜುನಾಥ ಎನ್‌.ಬಳ್ಳಾರಿ
Published : 9 ಆಗಸ್ಟ್ 2024, 5:24 IST
Last Updated : 9 ಆಗಸ್ಟ್ 2024, 5:24 IST
ಫಾಲೋ ಮಾಡಿ
Comments

ಕವಿತಾಳ: ಪಟ್ಟಣದ ವಿವಿಧ ಶಾಲೆಗಳ 10 ಜನ ಶಿಕ್ಷಕರು ಈಚೆಗೆ ವರ್ಗಾವಣೆಯಾಗಿದ್ದು, ಶಿಕ್ಷಕರ ಕೊರತೆ ಉಂಟಾಗಿದೆ. ಮಕ್ಕಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸುವ ಪಾಲಕರು ವರ್ಗಾವಣೆಯಾದ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡದಂತೆ ಎಸ್‌ಡಿಎಂಸಿ ಮೂಲಕ ಒತ್ತಡ ಹಾಕುತ್ತಿದ್ದಾರೆ.

ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ‌ ಪ್ರಾಥಮಿಕ ವಿಭಾಗದಲ್ಲಿ 120 ಮಕ್ಕಳು ಕಲಿಯುತ್ತಿದ್ದು, ಮಂಜೂರಾದ 6 ಹುದ್ದೆಗಳ ಪೈಕಿ ಇಬ್ಬರು ಕಾಯಂ ಶಿಕ್ಷಕರು ಇಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈಗ ಒಬ್ಬ ಶಿಕ್ಷಕ ವರ್ಗಾವಣೆಯಾಗಿದ್ದಾರೆ. ಪ್ರಸ್ತುತ ಒಬ್ಬರು ಕಾಯಂ ಶಿಕ್ಷಕಿ ಹಾಗೂ ಮೂವರು ಅತಿಥಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.

ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ಯಾ ಶಾಲೆಯಲ್ಲಿ 256 ಮಕ್ಕಳ ಹಾಜರಾತಿ ಇದೆ. 10 ಹುದ್ದೆಗಳಲ್ಲಿ ಇದುವರೆಗೆ 9 ಜನ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಈಚೆಗೆ 6 ಜನ ಶಿಕ್ಷಕರು ವರ್ಗವಾಗಿದ್ದಾರೆ. ಹೀಗಾಗಿ ಮೂವರು ಕಾಯಂ ಶಿಕ್ಷಕರು ಮತ್ತು ಇಬ್ಬರು ಅತಿಥಿ ಶಿಕ್ಷಕರು 256 ಮಕ್ಕಳನ್ನು ನಿಭಾಯಿಸುವಂತಾಗಿದೆ.

ಅಂಬೇಡ್ಕರ್‌ ನಗರದ ಸರ್ಕಾರಿ ಶಾಲೆಯಲ್ಲಿ 105 ವಿದ್ಯಾರ್ಥಿಗಳಿದ್ದಾರೆ. ಮಂಜೂರಾದ 6 ಹುದ್ದೆಗಳಲ್ಲಿ ಪ್ರಸ್ತುತ ಇಬ್ಬರು ಕಾಯಂ ಹಾಗೂ ಮೂವರು ಅತಿಥಿ ಶಿಕ್ಷಕರಿದ್ದಾರೆ. ಅವರಲ್ಲಿ ಒಬ್ಬರು ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ 8ರಿಂದ 10ನೇ ತರಗತಿಯ ದಾಖಲೆ ಸಂಖ್ಯೆಯ 640 ಮಕ್ಕಳು ಕಲಿಯುತ್ತಿದ್ದು, 16 ಹುದ್ದೆಗಳಲ್ಲಿ ಐವರು ಶಿಕ್ಷಕರಿದ್ದರು. ಅವರಲ್ಲಿ ಈಚೆಗೆ ಮೂವರು ವರ್ಗಾವಣೆಯಾಗಿದ್ದು, ಈಗ ಇಬ್ಬರು ಕಾಯಂ ಮತ್ತು 8 ಜನ ಅತಿಥಿ ಶಿಕ್ಷಕರು ಉಳಿದುಕೊಂಡಿದ್ದಾರೆ.

ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೇಗೇರಿದ ಪರಿಣಾಮ ಇಲ್ಲಿನ ಶಾಲೆಗಳು ‘ಎ’ ವಲಯ ವ್ಯಾಪ್ತಿಗೆ ಬಂದಿವೆ. ‘ಬಿ’ ಮತ್ತು ‘ಸಿ’ ವಲಯದಲ್ಲಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ಬಡ್ತಿ ಮತ್ತು ವರ್ಗಾವಣೆಗೆ ಸಿಗುವ ಆದ್ಯತೆ ‘ಎ’ ವಲಯದ ಶಿಕ್ಷಕರಿಗೆ ಸಿಗದ ಕಾರಣ ಇಲ್ಲಿಗೆ ಬರಲು ಶಿಕ್ಷಕರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಬಲವಂತ ಯಾದವ
ಬಲವಂತ ಯಾದವ
ಕೆ.ಡಿ.ಬಡಿಗೇರ
ಕೆ.ಡಿ.ಬಡಿಗೇರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT