ಮಸ್ಕಿ: ತುಂಗಭದ್ರಾ ಜಲಾಶಯದ 19ನೇ ಗೇಟ್ ಕಿತ್ತು ಹೋದ ಹಿನ್ನೆಲೆಯಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಸೇರಿದಂತೆ ಜಿಲ್ಲೆಯ ಬಿಜೆಪಿಯ ಮಾಜಿ ಶಾಸಕರ ನಿಯೋಗ ಶುಕ್ರವಾರ ಜಲಾಶಯಕ್ಕೆ ಭೇಟಿ ನೀಡಿ ಗೇಟ್ ಅಳವಡಿಸುವ ಕಾರ್ಯ ವೀಕ್ಷಿಸಿತು.
ಈಗಾಗಲೇ ಗೇಟ್ ಅಳವಡಿಸುವ ಕಾರ್ಯಾಚರಣೆ ಚುರುಕಾಗಿ ನಡೆದಿದೆ. ಜಲಾಶಯದ ಸಲಹೆಗಾರ ಕನ್ನಯ್ಯ ನಾಯ್ಡು ಅವರೊಂದಿಗೆ ಚರ್ಚಿಸಲಾಗಿದೆ. ನಾಳೆ ಬೆಳಿಗ್ಗೆ ವೇಳೆಗೆ ಬಹುತೇಕ ಕಾರ್ಯಾಚರಣೆ ಮುಗಿಯಲಿದೆ ಎಂದು ತಿಳಿಸಿದ್ದಾರೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ನಿಯೋಗದಲ್ಲಿ ಬಸನಗೌಡ ಬ್ಯಾಗವಾಟ, ಗಂಗಾಧರ ನಾಯಕ, ನೀರಾವರಿ ತಜ್ಞ ಹನುಮನಗೌಡ ಬೇಳಗುರ್ಕಿ ಸೇರಿ ಜಿಲ್ಲೆಯ ಮುಖಂಡರು ಇದ್ದರು.
ಇದೇ ಸಂದರ್ಭದಲ್ಲಿ ಸಚಿವ ಶಿವರಾಜ ತಂಗಡಗಿ ಅವರನ್ನು ಭೇಟಿ ಮಾಡಿ ಗೇಟ್ ಅಳವಡಿಸುವ ಕಾರ್ಯಾಚರಣೆ ಬೇಗ ಮುಗಿಸಿ ನೀರು ತಡೆ ಹಿಡಿಯುವಂತೆ ಮನವಿ ಮಾಡಲಾಯಿತು ಎಂದು ಪ್ರತಾಪಗೌಡ ಪಾಟೀಲ ತಿಳಿಸಿದ್ದಾರೆ.