ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ನೇಮಕಾತಿ ಆದೇಶ ರದ್ದುಪಡಿಸಲು ಒತ್ತಾಯ

Last Updated 9 ಡಿಸೆಂಬರ್ 2020, 13:12 IST
ಅಕ್ಷರ ಗಾತ್ರ

ರಾಯಚೂರು: 2017ರ ಅವಧಿಯಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ದಿನಗೂಲಿ ನೌಕರರ ಸೇವಾ ಸಕ್ರಮಾತಿ ಹೆಸರಿನಲ್ಲಿ ಜಿಲ್ಲಾಧಿಕಾರಿ ಅಕ್ರಮ ನೇಮಕಾತಿ ಆದೇಶವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಆನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, 10 ಏಪ್ರಿಲ್ 2017ರಂದು ಹೊರಡಿಸಿದ ದಿನಗೂಲಿ ನೌಕರರ ಕಾನೂನು ಬಾಹಿರ ಮತ್ತು ಸರ್ವೋಚ್ಛ ನ್ಯಾಯಾಲಯದ ಮೊದಲನೆ ಷರತ್ತು ಉಲ್ಲಂಘಿಸಿ ಅಕ್ರಮ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ನೈರ್ಮಲ್ಯ ವಿಭಾಗದ ವಾಹನ ಚಾಲಕರಿಗೆ ಮೂರು ತಿಂಗಳ ವೇತನ ಹಾಗೂ ಐದು ತಿಂಗಳ ಪಿಎಫ್, ಇಎಸ್‍ಐ ಹಣವನ್ನು ಜಮಾ ಮಾಡಬೇಕು. ಗುತ್ತಿಗೆದಾರರು 2014ರಿಂದ ಕಡಿಮೆ ಪಿಎಫ್ ಹಣಜಮಾ ಮಾಡಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಪೌರಕಾರ್ಮಿಕರಿಗೆ ಸಮವಸ್ತ್ರ, ಪಾದರಕ್ಷೆ, ಮಾಸ್ಕ್, ಗ್ಲೌಸ್‍ನೀಡಬೇಕು ಹಾಗೂ ಕಾನೂನು ರಿತ್ಯ ರಜೆಗಳನ್ನು ಮಂಜೂರು ಮಾಡಬೇಕು ಎಂದರು.

ಸಂಘದ ರಾಜ್ಯಾಧ್ಯಕ್ಷ ಎಸ್.ಮಾರೆಪ್ಪ ವಕೀಲ,ಜಿಲ್ಲಾಧ್ಯಕ್ಷ ಉರುಕುಂದಪ್ಪ, ಉಪಾಧ್ಯಕ್ಷ ಮುತ್ತಣ್ಣ, ಪ್ರಧಾನಕಾರ್ಯದರ್ಶಿ ಆರ್.ಹನುಮಂತು, ಅಬ್ರಾಹಂ, ಜೆ.ಮಲ್ಲೇಶಪ್ಪ, ಅಬ್ರಾಹಂ ಕಮಲಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT