ಶುಕ್ರವಾರ, ಆಗಸ್ಟ್ 6, 2021
21 °C

ವೇತನ ಖಾತರಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಗುತ್ತಿಗೆ ಕಾರ್ಮಿಕರಿಗೆ ಮಾರ್ಚ್ ತಿಂಗಳಿನಿಂದ ಲಾಕ್‌ಡೌನ್ ಅವಧಿಯಲ್ಲಿನ ವೇತನ ಪಾವತಿ ಮಾಡಬೇಕು. ಪಿಎಫ್ ಹಣ ಜಮಾ ಮಾಡಬೇಕು ಎಂದು ಒತ್ತಾಯಿಸಿ ಕಸ್ತೂರಿಬಾ ಗಾಂಧಿ ಬಾಲಿಕಾ ವಿದ್ಯಾಲಯದ (ಕೆಕೆಜಿಬಿವಿ) ಗುತ್ತಿಗೆ ನೌಕರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಶಿಕ್ಷಣ ಸಚಿವರಿಗೆ ಸೋಮವಾರ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಸಮಗ್ರ ಶಿಕ್ಷಣ ಯೋಜನೆ ಅಡಿಯಲ್ಲಿ ಕೆಕೆಜಿಬಿವಿ ಹಾಗೂ ವಿವಿಧ ವಸತಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಕೊರೊನಾ ಮಹಾಮಾರಿಯಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ಕೆಲವರಿಗೆ 12 ತಿಂಗಳು ವೇತನ ನಿಡಲು ಅನುದಾನ ಲಭ್ಯವಿದೆ. ಅವರೊಂದಿಗೆ ಅರೆಕಾಲಿಕ ಸಿಬ್ಬಂದಿ, ಅಡುಗೆ ಹಾಗೂ ಇತರೆ ಸಿಬ್ಬಂದಿಗಳಿಗೆ ಮೂರು ತಿಂಗಳ ವೇತನ ಹಾಗೂ ಪಡಿತರ ವಿತರಣೆ ಮಾಡಬೇಕು.

ಕಳೆದ ವರ್ಷ ಏಪ್ರಿಲ್ ತಿಂಗಳಿನಿಂದ ಹೆಚ್ಚಳವಾದ ವೇತನ ಪರಿಷ್ಕರಿಸಿ ಬಾಕಿ ಪಾವತಿ ಮಾಡಬೇಕು. ಪ್ರಧಾನಮಂತ್ರಿಯವರ ಆದೇಶದಂತೆ 3 ತಿಂಗಳ ಅವಧಿಯ ಪಿಎಫ್ ಕಂತಿನ ಹಣವನ್ನು ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ರಾಜ್ಯಾಧ್ಯಕ್ಷ ವಿರೇಶ ಎನ್. ಎಸ್, ಲಕ್ಷ್ಮೀ, ಅನುರಾಧ, ನಾಗರತ್ನ, ಮಂಜುಳಾ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.