ಗುರುವಾರ , ಫೆಬ್ರವರಿ 27, 2020
19 °C

371–ಜೆ ಅವಕಾಶ ಬಳಸಿಕೊಳ್ಳಿ: ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 371ಜೆ ಅಡಿ ಶಿಕ್ಷಣ, ಉದ್ಯೋಗ, ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಶಾಸಕ ಬಸನಗೌಡ ದದ್ದಲ್‌ ಹೇಳಿದರು.

ತಾಲ್ಲೂಕಿನ ಮಮದಾಪುರದಲ್ಲಿ ಕರುಣಾಮಯಿ ಶಿಕ್ಷಣ ಸಂಸ್ಥೆಯ ಎಂ.ಜಿ ಆಂಗ್ಲ ಮಾಧ್ಯಮ ಶಾಲೆಯ 2ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. 

ಈ ಭಾಗದವರಿಗೆ ಶೇ.80ರಷ್ಟು ಉದ್ಯೋಗ ಸಿಗುತ್ತಿದೆ. ಸತತ ಬರದಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಹೀಗಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಉನ್ನತ ಹುದ್ದೆಗಳಿಗೆ ಹೋಗುವಂತೆ ಮಾಡಬೇಕು ಎಂದರು.

 ಯಾವ ಮಗುವಿನಲ್ಲಿ ಎಂಥ ಪ್ರತಿಭೆ ಅಡಗಿರುತ್ತದೆಯೋ ಗೊತ್ತಿಲ್ಲ. ಹಳ್ಳಿಗಳ ಶಾಲೆಗಳ ಮಕ್ಕಳು ಯಾವ ಸ್ಥಾನಕ್ಕಾದರೂ ಹೋಗಬಹುದು. ಗ್ರಾಮೀಣ ಭಾಗದಲ್ಲಿ ಆಂಗ್ಲ ಮಾಧ್ಯಮ ಶಾಲೆ ತೆರೆದು ಶಿಕ್ಷಣ ನೀಡುತ್ತಿರುವ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು,  ಶಾಲಾಡಳಿತ ಮಂಡಳಿಗಳು ಈ ವಿಚಾರದಲ್ಲಿ ಹೆಚ್ಚು ಮುತುವರ್ಜಿ ವಹಿಸಬೇಕು. ಮಕ್ಕಳಿಗೆ ಆತ್ಮರಕ್ಷಣೆ ಕಲೆಗಳನ್ನು ತಿಳಿಸಬೇಕು ಎಂದು ತಿಳಿಸಿದರು. 

ಶಾಲೆಗಳಿಗೆ ಮಕ್ಕಳನ್ನು ಕರೆ ತರುವ ಚಾಲಕರ ಮಾಹಿತಿ ಸಂಗ್ರಹಿಸಿ. ಹೆಣ್ಣು ಮಕ್ಕಳಿಗೆ ಕರಾಟೆಯಂಥ ಆತ್ಮರಕ್ಷಣೆ ಕಲೆಗಳನ್ನು
ಕಲಿಸಬೇಕು ಎಂದರು.

ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಲೆಯ ಅಧ್ಯಕ್ಷೆ ಮಹೇಶ್ವರಿ ಗಚ್ಚಿನಮನೆ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸುಧಾರಣಾ ಸಮಿತಿ ಗೌರವಾಧ್ಯಕ್ಷ ಬಷಿರುದ್ದೀನ್, ಡಾ. ಉಮಾಕಾಂತ ದೇವರಮನೆ, ಹಾಗೂ ಡಾ. ಕೆ ಟಿ ಮೋಹನ್ ಕುಮಾರ್, ಶ್ರೀಕಾಂತ ಆರ್. ಗುತ್ತೇದಾರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)