ಶುಕ್ರವಾರ, ಮೇ 20, 2022
21 °C

ವಾಸವಿ ಜಯಂತಿ; ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಕವಿತಾಳ: ಪಟ್ಟಣದಲ್ಲಿ ವಾಸವಿ ಜಯಂತಿಯನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.

ಇಲ್ಲಿನ ತ್ರಯಂಭಕೇಶ್ವರ ದೇವಸ್ಥಾನದಿಂದ ವಾಸವಿ ದೇವಸ್ಥಾನದವರೆಗೆ ಕನ್ಯಕಾ ಪರಮೇಶ್ವರಿಯ ಭಾವಚಿತ್ರದ ಮೆರವಣಿಗೆ ಕುಂಭ, ಕಳಸಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಯುವಕರ ಭಜನೆ ಹಾಡುಗಳು ಮೆರವಣಿಗೆಗೆ ಮೆರಗು ನೀಡಿತು.

ಜಯಂತಿ ನಿಮಿತ್ತ ವಾಸವಿ ಮೂರ್ತಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಹಾ ಮಂಗಳಾರತಿ, ತೊಟ್ಟಿಲು ಸೇವೆ ಮತ್ತು ಮಹಿಳೆಯರ ಕೋಲಾಟ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಅರ್ಚಕ ಜಯತೀರ್ಥ ಆಚಾರ್ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಆರ್ಯವೈಶ್ಯ ಸಮಾಜದ ವತಿಯಿಂದ ಪಟ್ಟಣ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಲಾಯಿತು.

ಗುರುರಾಜ ಬಾಗೋಡಿ, ಶ್ರೀಧರ ಮಾನ್ವಿ, ಶಿವರಾಮಯ್ಯ, ಪುರುಷೋತ್ತಮ ಇಲ್ಲೂರು, ಲಕ್ಷ್ಮೀಕಾಂತ ಇಲ್ಲೂರು, ಲಿಂಗರಾಜ ಇಲ್ಲೂರು, ರಮೇಶ ಇಲ್ಲೂರು, ಬಿ.ಕೆ.ವೆಂಕಟೇಶ, ಎಂ.ರಾಘವೇಂದ್ರ, ಪ್ರಕಾಶ ಇಲ್ಲೂರು, ಅಮರೇಶ, ಮಲ್ಕಾಜಯ್ಯ, ರವಿ, ವೆಂಕಟೇಶ ಬಾಗೋಡಿ, ಅರವಿಂದ್ ಇಲ್ಲೂರು, ವೆಂಕಟೇಶ ಇಲ್ಲೂರು, ಗುರುರಾಜ ಇಲ್ಲೂರು , ಮಂಜುಳಾ ಇಲ್ಲೂರು, ರಜನಿ ಕೋಸ್ಗಿ, ಭಾಗ್ಯಲಕ್ಷ್ಮೀ, ಪ್ರಮೀಳಾ ಮತ್ತು ಸುಮಾ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು