ರಾಯಚೂರು: ಆರ್ಯವೈಶ್ಯ ಸಮಾಜ ಹಾಗೂ ನಗರೇಶ್ವರ ದೇವಸ್ಥಾನ ಸಮಿತಿಯ ಆಶ್ರಯದಲ್ಲಿ ಮೇ 3ರಿಂದ 7ರವರೆಗೆ ವಾಸವಿ ಜಯಂತಿ ಪ್ರಯುಕ್ತ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ಸಾವಿತ್ರಿಪುರುಷೋತ್ತಮ ತಿಳಿಸಿದರು.

ಮೇ 3ರಂದು ಬೆಳಿಗ್ಗೆ 5.30ಕ್ಕೆ ಸುಪ್ರಭಾತ, ನಂತರ ಧ್ವಜಾರೋಹಣ, ಕಳಸ ಸ್ಥಾಪನೆ, ಪಂಚಾಮೃತ ಅಭಿಷೇಕ, ಸಮಾಜದ ಮಹಿಳೆಯರಿಂದ ಗೀತಾ ಮಂದಿರದಿಂದ ನಗರೇಶ್ವರ ದೇವಸ್ಥಾನದವರೆಗೆ ಕಳಸದೊಂದಿಗೆ ಮೆರವಣಿಗೆ ನಡೆಸಲಾಗುವುದು ಎಂದು ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

ಸಂಜೆ 6.30ಕ್ಕೆ ಮಕ್ಕಳಿಂದ ಭರತನಾಟ್ಯ, ರಾತ್ರಿ 8.5ರಿಂದ ವಾಸವಿ ಮಾತೆಯ ಸಿಂಹವಾಹನ ಉತ್ಸವ ಜರುಗಲಿದೆ. ಮೇ.4ರಂದು ಬೆಳಿಗ್ಗೆ 5.30ರಿಂದ ದೇವಿಗೆ ವಿಶೇಷ ಪೂಜಾ ಕಾರ್ಯಕ್ರ ಮಗಳು ಜರುಗಲಿವೆ. ಸಂಜೆ 6 ಗಂಟೆಗೆ ವಾಸವಿ ಮಾತೆಯ ಸಿಂಹವಾಹಿನಿ ಅಲಂಕಾರ ದರ್ಶನ ನಂತರ ರಾತ್ರಿ 8 ಗಂಟೆಗೆ ಮಾತೆಯ ಗಜವಾಹನ ಉತ್ಸವ. ಮೇ 5ಕ್ಕೆ ಅಶ್ವ ವಾಹನ, ಮೇ 6ಕ್ಕೆ ಕಾಮಧೇನು, ಕಲ್ಪವೃಕ್ಷ ವಾಹನ ಉತ್ಸವ ಜರುಗಲಿದೆ ಎಂದು ತಿಳಿಸಿದರು.

ಮೇ 7 ರ ಸಂಜೆ 5.30ಕ್ಕೆ ವಾಸವಿ ಮಾತೆಯ ಮೆರವಣಿಗೆ, 6.5ಕ್ಕೆ ವಾಸವಿ ಮಾತೆಗೆ ಬೆಳ್ಳಿಕವಚ ಅಲಂಕಾರ ಮಾಡಲಾಗುವುದು ಎಂದು ಹೇಳಿದರು.

ಮೇ 4 ರಂದು ಡಾ.ಪ್ರಾಣೇಶರಾಜ್ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 9 ರಿಂದ ಸಂಜೆಯವರೆಗೆ ಶಿಬಿರ ನಡೆಯಲಿದ್ದು ಅನೇಕ ವೈದ್ಯರು ಪಾಲ್ಗೊಳ್ಳಲಿದ್ದಾರೆ. ಮೇ.7ರಂದು ಸಂಜೆ 5.30ಕ್ಕೆ ವಾಸವಿ ಮಾತೆಯ ಭವ್ಯ ಹೂವಿನ ಅಲಂಕಾರದೊಂದಿಗೆ ವಿವಿದ ವಾದ್ಯ ಮೇಳಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು. ಬೆಳ್ಳಿ ಕವಚ ಸಮರ್ಪಣೆ ಹಾಗೂ ಅಲಂಕಾರ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಚಿರಗಂಬಟ್ಲ ಪದ್ಮರಾಜ, ಇಲ್ಲೂರು ಗೋಪಾಲಶೆಟ್ಟಿ, ಬಿ.ಜಗದೀಶ ಗುಪ್ತಾ, ಕೆ.ಸಿ.ವೀರೇಶ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.