ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ್ಟಿಚಿನ್ನದಗಣಿ: ತರಕಾರಿ, ಆಹಾರ ಧಾನ್ಯ ಬೆಲೆ ಏರಿಕೆ

Last Updated 14 ಜನವರಿ 2023, 19:31 IST
ಅಕ್ಷರ ಗಾತ್ರ

ಹಟ್ಟಿಚಿನ್ನದಗಣಿ: ಸಂಕ್ರಾಂತಿ ಹಬ್ಬದ ಕಾರಣಕ್ಕೆ ತರಕಾರಿ, ಆಹಾರ ಧಾನ್ಯಗಳು ಬೆಲೆ ಹೆಚ್ಚಿಸಿಕೊಂಡು ಗ್ರಾಹಕರ ಕೈ ಸುಡು ತ್ತಿವೆ.

ಕಳೆದ ವಾರ ಒಂದು ಕೆ.ಜಿಗೆ ₹30 ರಿಂದ 40ಕ್ಕೆ ಮಾರಾಟವಾಗಿದ್ದ ಟೊಮೆಟೊ ಈ ವಾರ ₹15 ರಿಂದ 20ಕ್ಕೆ ಮಾರಾಟ ವಾಗುತ್ತಿದೆ.

ಈರುಳ್ಳಿಯ 50 ಕೆ.ಜಿ ಚೀಲ ₹750ಕ್ಕೆ ಮಾರಾಟವಾಗಿದ್ದು ಕಂಡುಬಂದಿತು. ಈರುಳ್ಳಿ ಹಾಗೂ ಟೊಮೆಟೊ ಬೆಲೆ ಕಡಿಮೆ ಯಾಗಿದೆ.

ನುಗ್ಗೆಕಾಯಿ ಕೆ.ಜಿಗೆ ₹300, ಹೀರೆಕಾಯಿ ₹100, ಕುಂಬಳಕಾಯಿ 1ಕ್ಕೆ ₹120 ರಿಂದ ₹150ಕ್ಕೆ ಮಾರಾಟವಾಯಿತು.
ಗಜ್ಜರಿ ಕೆ.ಜಿಗೆ ₹100, ಡಬ್ಬು ಮೆಣಸಿನಕಾಯಿ ₹90 ಹಾಗೂ ಮೆಣಸಿನಕಾಯಿ ₹80ಕ್ಕೆ ಮಾರಾಟವಾಯಿತು.

ಸೊಪ್ಪಿನ ದರ ಏರಿಕೆ: ಮೆಂತೆಸೊಪ್ಪು ಒಂದು ಕಟ್ಟಿಗೆ ₹10, ಕೊತ್ತಂಬರಿಸೊಪ್ಪು ₹10, ಹಸಿ ಈರುಳ್ಳಿ ಸೊಪ್ಪು ಒಂದು ಕಟ್ಟಿಗೆ ₹15 ರಿಂದ 20ಕ್ಕೆ ಮಾರಾಟ ಮಾಡಲಾಯಿತು.

ಧಾನ್ಯಗಳ ಬೆಲೆ ಏರಿಕೆ: ಎಳ್ಳು ಒಂದು ಸೇರಿಗೆ ₹100, ಶೇಂಗಾ ₹150, ಹಲಸಂದಿಕಾಳು ₹130, ಅವರೆಕಾಳು ಒಂದು ಸೇರಿಗೆ ₹200, ಹೆಸರು ₹180ಕ್ಕೆ ಮಾರಾಟ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT