ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ | ಮೂರು ದಿನಗಳಿಂದ ನೀರು ಪೂರೈಕೆ ಸ್ಥಗಿತ: ಪರದಾಟ

Published 29 ಜನವರಿ 2024, 14:14 IST
Last Updated 29 ಜನವರಿ 2024, 14:14 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣದ 1 ಮತ್ತು 13ನೇ ವಾರ್ಡ್‌ನಲ್ಲಿ ಸಂಪೂರ್ಣ ಹಾಗೂ 9,12,13 ಮತ್ತು 14ನೇ ವಾರ್ಡ್‌ನ ಕೆಲವು ಓಣಿಗಳಲ್ಲಿ ನೀರು ಪೂರೈಸುತ್ತಿದ್ದ ಪೈಪ್‌ಗಳಲ್ಲಿ ಮರದ ಬೇರುಗಳು ಸಿಲುಕಿ ನೀರು ಸರಬರಾಜು ಸ್ಥಗಿತವಾಗಿದ್ದು ನಿವಾಸಿಗಳು ಹನಿ ನೀರಿಗಾಗಿ ಕೊಡ ಹಿಡಿದು ಓಣಿಗಳಲ್ಲಿ ಅಲೆಯುಂತಾಗಿದೆ.

ಇಲ್ಲಿನ ಕಲ್ಮಠದ ಹತ್ತಿರ ಕೊಳವೆಬಾವಿ ನೀರು ತುಂಬಲು ಮಹಿಳೆಯರು, ಮಕ್ಕಳು ಪರದಾಡುತ್ತಿರುವ ದೃಶ್ಯ ಸೋಮವಾರ ಕಂಡು ಬಂತು.

’ನೀರಿಲ್ಲದೇ ಮೂರು ದಿನಗಳಾಯ್ತು. ಬೆಳಿಗ್ಗೆ, ಸಂಜೆ ನೀರಿಗಾಗಿ ಅಲೆಯುವಂತಾಗಿದೆ. ದೂರದಿಂದ ನೀರು ಹೊತ್ತು ತರುವಂತಾಗಿದೆ. ಪಂಚಾಯಿತಿ ಅಧಿಕಾರಿಗಳು ಪೈಪ್‌ ರಿಪೇರಿಗೆ ಗಮನಹರಿಸುತ್ತಿಲʼ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

‘ಈ ಕುರಿತು ಪಟ್ಟಣ ಪಂಚಾಯಿತಿ ಎಂಜಿನಿಯರ್‌ಗೆ ಮಾಹಿತಿ ನೀಡಲಾಗಿದೆ. ಸ್ಥಳ ಪರಿಶೀಲಿಸಿದ ನಂತರವಷ್ಟೆ ಪೈಪ್‌ ದುರಸ್ತಿಗೆ ಅನುಮತಿ ನೀಡುವುದಾಗಿ ತಿಳಿಸಿದ್ದಾರೆ. ನೀರಿನ ಸಮಸ್ಯೆ ಕುರಿತು ವಾರ್ಡ್‌ ನಿವಾಸಿಗಳು ತಮ್ಮನ್ನು ಪ್ರಶ್ನಿಸುತ್ತಿದ್ದಾರೆʼ ಎಂದು ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ನಗನೂರು ಹೇಳಿದರು.

ಎಂಜಿನಿಯರ್‌ ವಿರುದ್ದ ಕ್ರಮಕ್ಕೆ ಆಗ್ರಹಿಸಿ ದೂರು

ವಿವಿಧ ವಾರ್ಡ್‌ಗಳಲ್ಲಿ ನೀರು ಪೂರೈಕೆಯಲ್ಲಿ ಸತತ ವ್ಯತ್ತಯ, ಬೀದಿ ದೀಪಗಳ ಅಳವಡಿಕೆ ವಿಳಂಬ ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಮಾಹಿತಿ ನೀಡಿದರೂ ಎಂಜಿನಿಯರ್‌ ನರಸಮ್ಮ ಅವರು ಸ್ಪಂದಿಸುತ್ತಿಲ್ಲ, ನೀರು ಪೂರೈಕೆ ಬಗ್ಗೆ ಹಾರಿಕೆ ಉತ್ತರ ನೀಡುವುದರ ಜತೆಗೆ ಬೀದಿ ದೀಪ ಅಳವಡಿಸಲು ಹದಿನೈದು ದಿನಗಳ ಕಾಲಾವಕಾಶ ಕೇಳುತ್ತಿದ್ದಾರೆ. ಹೀಗಾಗಿ ವಾರ್ಡ್‌ಗಳಲ್ಲಿ ಕತ್ತಲು ಆವರಿಸಿದೆ. ಸಾರ್ವಜನಿಕರ ಸಮಸ್ಯೆಗಳ ಕುರಿತು ಸದಸ್ಯರು ಮಾಹಿತಿ ನೀಡಿದರೂ ಸ್ಪಂದಿಸುತ್ತಿಲ್ಲ. ಕಾರಣ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಿಗೆ ಸೋಮವಾರ ದೂರು ಸಲ್ಲಿಸಿದ್ದಾಗಿ’ ಸದಸ್ಯರಾದ ರಮೇಶ ನಗನೂರು, ಯಲ್ಲಪ್ಪ ಮಾಡಗಿರಿ, ರಾಜೇಶ್ವರಿ ತಿಪ್ಪಯ್ಯಸ್ವಾಮಿ, ರಾಘವೇಂದ್ರ ಶೆಟ್ಟಿ, ಗೌರಮ್ಮ ಮೌನೇಶ, ಲಿಂಗರಾಜ ಕಂದಗಲ್‌ ಮತ್ತು ಹುಲಗವ್ವ ಮೌನೇಶ ಹೇಳಿದ್ದಾರೆ.

ಕವಿತಾಳ ಕಲ್ಮಠದ ಹತ್ತಿರ ಸೋಮವಾರ ಮಹಿಳೆಯರು ನೀರಿಗಾಗಿ ಪರದಾಡುತ್ತಿರುವುದು.
ಕವಿತಾಳ ಕಲ್ಮಠದ ಹತ್ತಿರ ಸೋಮವಾರ ಮಹಿಳೆಯರು ನೀರಿಗಾಗಿ ಪರದಾಡುತ್ತಿರುವುದು.
ಕವಿತಾಳ ಕಲ್ಮಠದ ಹತ್ತಿರ ಸೋಮವಾರ ಮಹಿಳೆಯರು ನೀರಿಗಾಗಿ ಪರದಾಡುತ್ತಿರುವುದು.
ಕವಿತಾಳ ಕಲ್ಮಠದ ಹತ್ತಿರ ಸೋಮವಾರ ಮಹಿಳೆಯರು ನೀರಿಗಾಗಿ ಪರದಾಡುತ್ತಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT