ರಾಯಚೂರು: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಇದೇ 15ರಂದು ಬೆಳಿಗ್ಗೆ 11ಗಂಟೆಗೆ ಮೈಸೂರು ರೇಷ್ಮೆ ಪ್ರದರ್ಶನದ ಉದ್ಘಾಟನೆ ನಡೆಯಲಿದೆ.

ಜಿಲ್ಲಾಧಿಕಾರಿ ವಿ.ಅನ್ಬುಕುಮಾರ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಇದೇ 15ರಿಂದ 17ರವರೆಗೆ ಬೆಳಿಗ್ಗೆ 10.30 ರಿಂದ ರಾತ್ರಿ ಗಂಟೆಗೆ ಪ್ರದರ್ಶನ ನಡೆಯಲಿದೆ ಎಂದು ಕೆಎಸ್‌ಐಸಿ ಅಧ್ಯಕ್ಷ ಬಿ.ವಿಜಯಕುಮಾರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಿ.ರಾಮಚಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಯೋಜನಾ ಸಮಿತಿ ಚುನಾವಣೆ
ರಾಯಚೂರು: ರಾಯಚೂರು ಜಿಲ್ಲಾ ಯೋಜನಾ ಸಮಿತಿಯ ಪಂಚಾಯತ್ ಮತ್ರಕ್ಷೇತ್ರದ ಚುನಾವಣೆ ವೇಳಾ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಇದೇ 22ರಂದು ಕೊನೆಯ ದಿನವಾಗಿರುತ್ತದೆ. ಜಿಪಂ ಸಿಇಒ ಅಥವಾ ಸಹಾಯಕ ಚುನಾವಣಾಧಿಕಾರಿಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ಗಂಟೆಗೆಯವರೆಗೆ ರಜಾ ದಿನಗಳನ್ನು ಹೊರತು ಪಡಿಸಿ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ.

23ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 24ರಂದು ನಾಮಪತ್ರ ವಾಪಸ್ ಪಡೆಯುವ ದಿನವಾಗಿರುತ್ತದೆ.

ಮತದಾನವನ್ನು ರಾಯಚೂರು ಜಿಲ್ಲಾ ಸಭಾಂಗಣದಲ್ಲಿ ಅಕ್ಟೋಬರ್ 13ರಂದು ಬೆಳಿಗ್ಗೆ 8ಗಂಟೆಯಿಂದ ಮಧ್ಯಾಹ್ನ 3ಗಂಟೆಯವರೆಗೆ ನಡೆಯಲಿದೆ. ಅಂದು ಮಧ್ಯಾಹ್ನ 4ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮನೋಜಕುಮಾರ ಜೈನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಹಿಂದಿ ಶಿಕ್ಷಕರ ಕಾರ್ಯಾಗಾರ
ರಾಯಚೂರು: ಯರಮರಸ್ ಕ್ಯಾಂಪ್‌ನ ಆಫ್ತಾಬ್ ಶಿಕ್ಷಣ ಸಂಸ್ಥೆಯಲ್ಲಿ ಇದೇ 14ರಂದು ಬೆಳಿಗ್ಗೆ 10ಗಂಟೆಗೆ ಹಿಂದಿ ದಿನಾಚರಣೆ ಅಂಗವಾಗಿ ಹಿಂದಿ ಶಿಕ್ಷಕರಿಗೆ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಗಾರದ ಉದ್ಘಾಟನೆಯನ್ನು ಡಿಡಿಪಿಐ ಅಮೃತ್ ಬೆಟ್ಟದ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡಯಟ್ ಉಪನಿರ್ದೇಶಕ ಶೇಷಗಿರಿರಾವ್ ಕುಲಕರ್ಣಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ವಹಿಸಲಿದ್ದಾರೆ. ವಿಶೇಷ ಉಪನ್ಯಾಸವನ್ನು ಹಿಂದಿ ವಿಷಯದ ಉಪನ್ಯಾಸಕ ಪವನಕುಮಾರ ಕೆ. ಅವರು ಮಾಡಲಿದ್ದಾರೆ ಎಂದು ಅಫ್ತಾಬ್ ಶಿಕ್ಷಣ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ರಸ್ತೆ ನಿರ್ಮಿಸಲು ಗ್ರಾಮಸ್ಥರ ಮನವಿ
ಕವಿತಾಳ: ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿದ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ್ ಪಾಟೀಲ್ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.

ಡೊಣಮರಡಿ ಗ್ರಾಮಸ್ಥರು ತಡಕಲ್ ರಸ್ತೆ ದುರಸ್ತಿ ಮಾಡಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು. ಇದೇ ರಸ್ತೆ ದುರಸ್ತಿ ನೆಪದಲ್ಲಿ ಹಿಂದೆ ಕೆಲವರು ಹಣ ದೋಚಿದ್ದಾರೆ ಎಂದು ಆರೋಪಿಸಿದ ಜನರು, ಮೂರು ವರ್ಷಗಳಿಂದ ಹೇಳುತ್ತಿದ್ದರೂ ನೀವು ಕ್ರಮ ಕೈಗೊಂಡಿಲ್ಲ ಎಂದರು.

ಮರಕಂದಿನ್ನಿಯ ಆಸರೆ ಮನೆಗಳ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಶಾಸಕರು ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚಿಸಿದರು. 322 ಮನೆಗಳ ನಿರ್ಮಾಣ ಇದೀಗ ಆರಂಭವಾಗಿದ್ದು ಮಲೇಶಿಯಾ ಮತ್ತು ತ್ರೀಗುಣಾಸ್ ಕಂಪನಿಗಳು ನಿರ್ಮಾಣ ಕಾರ್ಯ ಕೈಗೊಂಡಿವೆ ಎಂದು ಹೇಳಿದರು. ಚಂದ್ರಕಾಂತ ಪಾಟೀಲ್ ಗೂಗೆಬಾಳ, ಶರಣಪ್ಪ ತೋರಣದಿನ್ನಿ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.