ರಾಯಚೂರು: ಮಾನವ ಮತ್ತು ಪ್ರಾಣಿಗಳ ಜೀವಕ್ಕೆ ಅಪಾಯಕಾರಿಯಾದ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ನಿರ್ಣಯ ಕೈಗೊಂಡ ಇಲ್ಲಿನ ನಗರಸಭೆ ವಿಶೇಷ ಸಮಾನ್ಯ ಸಭೆಯು ಘನತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿತು.ಈ ಎರಡು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಕರೆದಿದ್ದ ವಿಶೇಷ ಸಭೆಯಲ್ಲಿ ಹಲವಾರು ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಜೀವಸಂಕುಲಕ್ಕೆ ಅಪಾಯಕಾರಿಯಾದ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸದಸ್ಯ ಜಯಣ್ಣ, ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಪ್ಲಾಸ್ಟಿಕ್ ನಿಷೇಧಗೊಳಿಸಲಾಗುತ್ತಿದೆ. ಪ್ಲಾಸ್ಟಿಕ್ ಮಾನವ ಮತ್ತು ಪ್ರಾಣಿಗಳ ಜೀವಕ್ಕೆ, ಪರಿಸರ ನಾಶಕ್ಕೆ ಎಷ್ಟು ಅಪಾಯಕಾರಿ ಎಂಬುದರ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪ್ಲಾಸ್ಟಿಕ್ ನಿಷೇಧದ ಬಗ್ಗೆ ನೀಡಿದ ತೀರ್ಪುಗಳ ಬಗ್ಗೆ ವಿವರಿಸಿದರು.ನಗರದಲ್ಲೂ ಪ್ಲಾಸ್ಟಿಕ್ ಬಳಕೆ ನಿಷೇಧ ಅವಶ್ಯವಾಗಿದೆ. ನಗರದ ಜನತೆ ಹಾಗೂ ವ್ಯಾಪಾರಸ್ಥರಿಗೆ ಈ ವಿಷಯದಲ್ಲಿ ಸೂಕ್ತ ಮನವರಿಕೆ ಮಾಡಿಕೊಡುವ ಮೂಲಕ ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಈಗಾಗಲೇ ವೀರಾಜಪೇಟೆ ನಗರಸಭೆ ಈ ತೀರ್ಮಾನ ಕೈಗೊಂಡಿದೆ. ಈಗ ನಮ್ಮ ನಗರಸಭೆ ಕೈಗೊಳ್ಳುತ್ತಿದೆ ಎಂದು ಹೇಳಿದರು.ನಗರಸಭೆ ಮಾಜಿ ಅಧ್ಯಕ್ಷ ಎ ಮಾರೆಪ್ಪ ಮಾತನಾಡಿ, ಪ್ಲಾಸ್ಟಿಕ್ ನಿಷೇಧ ವಿಷಯ ಪ್ರಸ್ತಾಪ ಹಳೆಯದು. ಈಗ ಗಂಭೀರ ಸ್ವರೂಪ ಪಡೆದಿದೆ. ನಗರ ಸ್ವಚ್ಛತೆ ಮತ್ತು ಜನತೆಯ ಆರೋಗ್ಯ ಸಂರಕ್ಷಣೆ ದೃಷ್ಟಿಯಿಂದ ನಿಷೇಧ ಮಾಡಲೇಬೇಕು ಎಂದು ಹೇಳಿದರು.

ಸದಸ್ಯೆ ಪುಷ್ಪಾ ಅಂಗಡಿ ಅವರು ಮಾತನಾಡಿ, ಜೀವಸಂಕುಲಕ್ಕೆ ಅಪಾಯಕಾರಿ ಪ್ಲಾಸ್ಟಿಕ್ ನಿಷೇಧ ನಿರ್ಣಯ ಸ್ವಾಗತಾರ್ಹ. ಜೊತೆಗೆ ನಗರದಲ್ಲಿ ಮಿತಿ ಮೀರಿರುವ ಫ್ಲೆಕ್ಸ್ ಬ್ಯಾನರ್ ಹಾವಳಿಯನ್ನೂ ತಡೆಗಟ್ಟಬೇಕು ಎಂದರು.ಘನತ್ಯಾಜ್ಯ ವಸ್ತು ಅಸಮರ್ಪಕ ನಿರ್ವಹಣೆಗೆ ಕಿಡಿ ಕಿಡಿ: ನಗರದಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ನಿರ್ಮಲನಗರ ಯೋಜನೆ ಅನುಷ್ಠಾನದ ಮಧ್ಯೆಯೂ ನಗರದ ಘನತ್ಯಾಜ್ಯದಿಂದ ಕೂಡಿದೆ. ಎಳೆನೀರು ಕುಡಿದು ಬಿಸಾಕಿದ ತೆಂಗಿನಕಾಯಿ, ಥರ್ಮಾಕೊಲ್, ಫೈಬರ್ನಂಥ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ. ನಗರಸಭೆ ಅಸಮರ್ಪಕ ನಿರ್ವಹಣೆ ಬಗ್ಗೆ ಜನತೆಯಿಂದ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ ಕೂಡಲೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಅವಶ್ಯಕತೆ ಎಂದು ಸದಸ್ಯರು ಅಧ್ಯಕ್ಷರನ್ನು ಕೋರಿದರು.

ಹಿರಿಯ ಸದಸ್ಯ ಮಾರೆಪ್ಪ ಮಾತನಾಡಿ, ಘನತ್ಯಾಜ್ಯ ವಸ್ತು ಎಷ್ಟು ಸಂಗ್ರಹಣೆ ಆಗುತ್ತಿದೆ. ನಿರ್ವಹಣೆ ಹೇಗೆ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಘನತ್ಯಾಜ್ಯ ವಸ್ತು ವಿಲೇವಾರಿ ಮತ್ತು ನಿರ್ವಹಣಾ ಘಟಕಕ್ಕೆ ಮೂರು ಕೋಟಿ ವೆಚ್ಚ ಮಾಡಲಾಗಿದೆ. ಆದರೆ ಆ ಪ್ರದೇಶವನ್ನು ಸದಸ್ಯರಿಗೂ ತೋರಿಸಿಲ್ಲ. ನಿರ್ವಹಣೆ ಹೇಗೆ ಮಾಡುತ್ತಿದ್ದಾರೆ ಎಂಬುದರ ಬಗ್ಗೆಯೂ ಮಾಹಿತಿ ಕೊಡುವುದಿಲ್ಲ ಎಂದು ಅಧಿಕಾರಿಗಳ ಮೇಲೆ ಕಿಡಿ ಕಾರಿದರು.

ಕಸ ಸಂಗ್ರಹಣೆಗೆ ನಗರಸಭೆಯು ವಿವಿಧ ಬಡಾವಣೆಯಲ್ಲಿ ವಾಹನಗಳ ಬಳಕೆ ಪರಿಣಾಮಕಾರಿಯಾಗಿಲ್ಲ. ಕೆಲವೇ ಬಡಾವಣೆಗಳಲ್ಲಿ ಈ ಕಾರ್ಯ ನಡೆಯುತ್ತಿದೆ. ಕೊಳಚೆ ಪ್ರದೇಶದಲ್ಲಿ ಈ ವಾಹನಗಳು ಸಂಚರಿಸುತ್ತಿಲ್ಲ. ನಗರದಲ್ಲಿ ಕಸ ಹೆಚ್ಚಾಗಿದೆ. ಘನತ್ಯಾಜ್ಯವೂ ವಿಪರೀತವಾಗಿದೆ. ಆದರೆ, ಕೆಲಸ ಮಾಡಲು ಕಾರ್ಮಿಕರೇ ಇಲ್ಲದಂತಾಗಿದೆ. ನಗರಸಭೆ ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಹಿರಿಯ ಸದಸ್ಯ ಶಾಂತಪ್ಪ ಅಭಿಪ್ರಾಯಪಟ್ಟರು.

ಸದಸ್ಯ ಜಿ ಶಿವಮೂರ್ತಿ ಮಾತನಾಡಿ, ಪ್ರತಿ ಮನೆ ಮನೆಗೆ ವಾಹನಗಳು ತೆರಳಿ ಕಸ ಸಂಗ್ರಹ ಮಾಡುತ್ತಿರುವ ವಿಧಾನ ಪರಿಣಾಮಕಾರಿಯಾಗಿದೆ. ಶೇ 90ರಷ್ಟು ಘನತ್ಯಾಜ್ಯ ಸಂಗ್ರಹಿಸಿದರೂ ನಿರ್ವಹಣೆ ಆಗುತಿಲ್ಲ ಎಂಬುದು ಸತ್ಯ. ಈ ದಿಶೆಯಲ್ಲಿ ಗಮನ ಹರಿಸಬೇಕು ಎಂದು ಹೇಳಿದರು.

ಸದಸ್ಯರಾದ ದೊಡ್ಡಮಲ್ಲೇಶ, ಶಿವರಾಜ, ಬಿ ತಿಮ್ಮಾರೆಡ್ಡಿ ಅವರು ಮಾತನಾಡಿ, ನಿರ್ಮಲನಗರ ಯೋಜನೆ ನಿಯಮಗಳನ್ನು ಸಮರ್ಪಕವಾಗಿ ಅನುಸರಿಸಿದರೆ ಘನತ್ಯಾಜ್ಯ ವಸ್ತು ನಿರ್ವಹಣೆ ಸಾಧ್ಯವಾಗುತ್ತದೆ. ನಗರದಲ್ಲಿ ಬಡಾವಣೆಗಳು ಹೆಚ್ಚಾಗುತ್ತಿವೆ. ಜನಸಂಖ್ಯೆ ಹೆಚ್ಚಿದೆ. ವ್ಯಾಪಾರ ವಹಿವಾಟು ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಸ್ವಚ್ಛತೆ ಕಾರ್ಯಕ್ಕೆ ಕಾರ್ಮಿಕರ ಸಂಖ್ಯೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಬೇಕು. ಘನತ್ಯಾಜ್ಯ ನಿರ್ವಹಣೆ ಮಾಡಿ ಪುನರ್ ಬಳಕೆ ಮಾಡುವ ವಿಧಾನಗಳಿವೆ. ಇವುಗಳ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಮುಂದುವರಿದರೆ ನಗರಸಭೆ ಒಂದು ಆದಾಯ ಮೂಲವಾಗುತ್ತದ ಎಂದು ವಿವರಿಸಿದರು. ನಗರಸಭೆ ಉಪಾಧ್ಯಕ್ಷೆ ಕೆ ಸುಲೋಚನಾ, ಆಯುಕ್ತ ತಿಪ್ಪೇಶ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.